ಶೃಂಗೇರಿ ಕ್ಷೇತ್ರಕ್ಕೆ ಇವರೇ ಬಿಜೆಪಿ ಸಾರಥಿಗಳು!
– ಶೃಂಗೇರಿ ತಾಲೂಕು ನೂತನ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಉಮೇಶ್ ತಲಗಾರ್ ಮರು ಆಯ್ಕೆ
– ಕೊಪ್ಪದಲ್ಲಿ ಮತ್ತೆ ಹೊಸೂರು ದಿನೇಶ್ ಅಧ್ಯಕ್ಷರಾಗಿ ಆಯ್ಕೆ
– ಎನ್.ಆರ್ ಪುರಕ್ಕೆ ಮುತ್ತಿನಕೊಪ್ಪ ನೀಲೇಶ್ ಸಾರಥಿ
NAMMUR EXPRESS NEWS
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಮೂರು ತಾಲೂಕಿಗೂ ಭಾರತೀಯ ಜನತಾ ಪಾರ್ಟಿ ತನ್ನ ನೂತನ ಮಂಡಲ ಅಧ್ಯಕ್ಷರ ನೇಮಕ ಮಾಡಿದೆ. ಬಿಜೆಪಿ ಚುನಾವಣಾ ಸಂಚಾಲಕರಾದ ಡಾ.ಚೇತನ್ ಹಾಗೂ ಜಿಲ್ಲಾಧ್ಯಕ್ಷರಾದ ದೇವರಾಜ್ ಶೆಟ್ಟಿ,ಮಾಜಿ ಶಾಸಕ ಜೀವರಾಜ್ರವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿದೆ.ಶೃಂಗೇರಿ ತಾಲೂಕಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಉಮೇಶ್ ತಲಗಾರ್ ಮರು ಆಯ್ಕೆಗೊಂಡರೆ,ಕೊಪ್ಪ ತಾಲೂಕಿಗೂ ದಿನೇಶ್ ಹೊಸೂರ್ ಮರು ಆಯ್ಕೆಗೊಂಡಿದ್ದಾರೆ. ಎನ್.ಆರ್ ಪುರ ತಾಲೂಕಿನ ಅಧ್ಯಕ್ಷರಾಗಿ ಮುತ್ತಿನಕೊಪ್ಪ ನೀಲೇಶ್ರವರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ನೂತನ ಅಧ್ಯಕ್ಷರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಶುಭಾಶಯ ಸಲ್ಲಿಸುತ್ತದೆ.