ನಟ ಶಿವಣ್ಣಗೆ ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ವಿ..!
– ಡಿ. 24ರಂದು 4 ರಿಂದ 5 ಗಂಟೆಗಳ ಕಾಲ ಆಪರೇಷನ್
– ವಿಶ್ರಾಂತಿ ಬಳಿಕ ಜನವರಿ 25ರಂದು ಭಾರತಕ್ಕೆ ವಾಪಾಸ್
NAMMUR EXPRESS NEWS
ನಟ ಶಿವರಾಜ್ಕುಮಾರ್ ಅವರ ಅಭಿಮಾನಿಗಳ ಕೋರಿಕೆ ಈಡೇರಿದೆ. ಅವರ ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾರತೀಯ ಕಾಲಮಾನ ಮಂಗಳವಾರ (ಡಿಸೆಂಬರ್ 24) ಸಂಜೆ 6 ಗಂಟೆಗೆ (ಅಮೆರಿಕದ ಕಾಲ ಮಾನ ಬೆಳಿಗ್ಗೆ 8 ಗಂಟೆಗೆ) ಆಪರೇಷನ್ ಆರಂಭ ಆಯಿತು. 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ ಎಂಬ ವಿಚಾರ ಗೊತ್ತಾಗಿದೆ. ಈ ಬಗ್ಗೆ ಆಪ್ತ ಮೂಲಗಳು ಮಾಹಿತಿ ರಿವೀಲ್ ಮಾಡಿವೆ. ಶಿವರಾಜ್ಕುಮಾರ್ ಮೊದಲಿನಿಂದಲೂ ಪಾಸಿಟಿವ್ ಆಗಿ ಯೋಚಿಸುತ್ತಾ ಬಂದವರು. ಅವರು ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಸರ್ಜರಿ ನಡೆಯುತ್ತದೆ ಎಂದಾಗ ಅದನ್ನೂ ಪಾಸಿಟಿವ್ ಆಗಿ ತೆಗೆದುಕೊಂಡರಯ. ಜೋಶ್ನಲ್ಲಿ ಅಮೆರಿಕ ತೆರಳಿದ ಅವರು ಶಸ್ತಚಿಕಿತ್ಸೆ ಪೂರ್ಣಗೊಳಿಸಿಕೊಂಡಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಹೋಮ-ಹವನ
ಶಿವರಾಜ್ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋದರು. ಈ ಎಲ್ಲ ಪೂಜೆ-ಪುನಸ್ಕಾರ, ಹೋಮ-ಹವನ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲ ಕೊಟ್ಟಿದೆ. ಶಿವರಾಜ್ಕುಮಾರ್ ಅವರಿಗೆ ಕ್ಯಾನ್ಸರ್ ಇತ್ತು. ಇದಕ್ಕಾಗಿ ಅವರು ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ಮಾಡಿಸಿಕೊಂಡರು. ಆರು ಗಂಟೆಗಳ ಕಾಲ ಆಪರೇಷನ್ ನಡೆದಿದೆ. ಡಾ. ಮುರುಗೇಶ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದೆ. 4 ಗಂಟೆಗಳ ಕಾಲ ಆಪರೇಷನ್ ನಡೆದಿದೆ.
ಶಿವರಾಜ್ಕುಮಾರ್ ಅವರು ಈಗ ನಟನೆಯಿಂದ ದೊಡ್ಡ ಬ್ರೇಕ್ ಪಡೆದಿದ್ದಾರೆ. ಅವರು ಸಿನಿಮಾ ಕೆಲಸಗಳಿಗೆ ಅಲ್ಪವಿರಾಮ ಹಾಕಿ ಸಂಪೂರ್ಣ ಗಮನ ಆರೋಗದ್ಯದ ಮೇಲೆ ಹಾಕಿದ್ದಾರೆ. ಹೋಂ ಬ್ಯಾನರ್ನಲ್ಲಿ ಮೂಡಿ ಬಂದ ‘ಭೈರತಿ ರಣಗಲ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಅವರು, ಇದರ ಪ್ರಚಾರದಲ್ಲಿ ಭಾಗಿ ಆದರು. ಅಲ್ಲಿಯವರೆಗೆ ಶಿವಣ್ಣನಿಗೆ ಅನಾರೋಗ್ಯ ಎಂಬುದಷ್ಟೇ ಸುದ್ದಿ ಇತ್ತು. ಪ್ರಚಾರದ ವೇಳೆ ಅವರು ಈ ವಿಚಾರ ಒಪ್ಪಿಕೊಂಡರು. ಸಂದರ್ಶನದ ಸಂದರ್ಭದಲ್ಲಿ ತಮಗೆ ಅನಾರೋಗ್ಯ ಉಂಟಾಗಿರೋದು ಸತ್ಯ ಎಂದರು. ಅಮೆರಿಕಕ್ಕೆ ಹೋಗುವುದಕ್ಕೂ ಮೊದಲು ತಮಗೆ ಕ್ಯಾನ್ಸರ್ ಎಂಬ ವಿಚಾರ ರಿವೀಲ್ ಮಾಡಿದರು. ಈಗ ಅವರ ನಟನೆಯ ‘45’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರ 2025ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಈಗ ಅವರು ಕೆಲ ತಿಂಗಳು ಬ್ರೇಕ್ ಪಡೆಯಲಿದ್ದು ಆ ಬಳಿಕ ನಟನೆಗೆ ಮರಳಲಿದ್ದಾರೆ.
ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲಾಗಿರುವ ಅವರು ಶಸ್ತ್ರಚಿಕಿತ್ಸೆಯ ನಂತರ ಅವರು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.30 ದಿನ ವಿಶ್ರಾಂತಿ ಪಡೆದು ನಂತರ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಶಿವಣ್ಣ ಅವರಿಗೆ ಮೂತ್ರ ಪಿಂಡ ಕ್ಯಾನ್ಸರ್ ಇದೆ.