ಉಚಿತ ಲ್ಯಾಪ್ಟಾಪ್ ಬೇಕಾ? ಅರ್ಜಿ ಹಾಕಿ..!
– ಯಾರಿಗೆ ಸಿಗುತ್ತೆ ಲ್ಯಾಪ್ ಟಾಪ್ ಇಲ್ಲಿದೆ ಮಾಹಿತಿ
– ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ!
– ಅರ್ಜಿ ಸಲ್ಲಿಸಲು ಸೆ.27 ಕೊನೆಯ ದಿನ
NAMMUR EXPRESS NEWS
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಪೈಕಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ/ದ್ವಿತೀಯ ಪಿಯುಸಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ಟಾಪ್ಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಮತ್ತು ಹೆಚ್ಚಿನ ಕೌಶಲ್ಯ ಪಡೆದುಕೊಳ್ಳಲು ನೇರವಾಗುವ ದೇಸೆಯಲ್ಲಿ ಡಿಜಿಟಲ್ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಪ್ರತಿ ವರ್ಷ ವಿವಿಧ ನಿಗಮಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತದೆ. ಈಗ ಸಧ್ಯಕ್ಕೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಅರ್ಜಿ ಅಹ್ವಾನ ಮಾಡಲಾಗಿರುತ್ತದೆ.ಈ ಮಂಡಳಿಯಿಂಡ free laptop ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು ಮತ್ತು ಅಗತ್ಯ ದಾಖಲಾತಿಗಳೇನು? ಅರ್ಜಿ ಎಲ್ಲಿ ಸಲ್ಲಿಸಬೇಕು ಎಂದು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಉಚಿತ ಲ್ಯಾಪ್ಟಾಪ್ ಯಾರಿಗೆಲ್ಲ ಸಲ್ಲಿಸಬವುದು?
1) ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು
ಪಡೆದಿರುವ ವಿದ್ಯಾರ್ಥಿಗಳು.
2) ಮಾರ್ಚ್ 2023ರ ಅಂತ್ಯಕ್ಕೂ ಮೊದಲು ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರ ಮಕ್ಕಳು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
3) ಫಲಾನುಭವಿಯ ಒಂದು ಮಗುವಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು?
ಅನುದಾನ ಲಭ್ಯತೆ ಮತ್ತು ಯೋಜನೆ ಅನುಷ್ಠಾನದ ವ್ಯಾಪ್ತಿ ಅನುಗುಣವಾಗಿ ಈ ಯೋಜನೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗುತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಕಾರ್ಮಿಕ ಅಧಿಕಾರಿಯವರ ಕಚೇರಿಯಲ್ಲಿ ಅಥವಾ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ನಿರೀಕ್ಷಕರ ಕಚೇರಿಗಳಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ 27 ಸೆಪ್ಟೆಂಬರ್ 2023ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಅಗತ್ಯ ದಾಖಲಾತಿಗಳು:
1)ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಡ ಪ್ರತಿ.
2)ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ.
3)ವಿದ್ಯಾರ್ಥಿ ಆಧಾರ್ ಕಾರ್ಡ,
4)ಪೋಟೋ
5)ಬ್ಯಾಂಕ್ ಪಾಸ್ ಬುಕ್ ಪ್ರತಿ. 6)ಪಡಿತರ ಚೀಟಿ ಪ್ರತಿ ಇತ್ಯಾದಿ.
ಯಾವೆಲ್ಲ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ?
ಸದ್ಯದ ಮಾಹಿತಿಯ ಪ್ರಕಾರ ಉತ್ತರಕನ್ನಡ ಜಿಲ್ಲೆಯ ಕಾರವಾರ ಮತ್ತು ಯಲ್ಲಾಪುರ ಉಪವಿಭಾಗದಿಂದ ಅರ್ಜಿ ಆಹ್ವಾನ ಮಾಡಲಾಗಿರುತ್ತದೆ ಇತರೆ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ನಿಮ್ಮ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿ ಸಂರ್ಪಕಿಸಿ ಯೋಜನೆ ಲಭ್ಯತೆ ಅನ್ನು ಖಚಿತಪಡಿಸಿಕೊಂಡು ಅಗತ್ಯ ದಾಖಲೆ ಸಮೇತ ಅರ್ಜಿ ಸಲ್ಲಿಸಬವುದು.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ (ಮೆರಿಟ್ ಆಧಾರದ ಮೇಲೆ) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗೂ ಸಮನಾದ ಅಂಶವನ್ನು ಪಡೆದಾಗ ಫಲಾನುಭವಿಯ ನೋಂದಣಿ ಸದಸ್ಯತ್ವದ ಹಿರಿತನವನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ, ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರು ಮಾರ್ಚ್ 2023ರ ಅಂತ್ಯಕ್ಕೂ ಮೊದಲು ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರ ಮಕ್ಕಳು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.