ಹಿಂದೂ ಮುಸ್ಲಿಂ ಸಾಮರಸ್ಯದ ಹಬ್ಬ!
– ಗದಗದ ಮುಂಡರಗಿಯಲ್ಲಿ ಕತ್ತಲ ರಾತ್ರಿಯ ಮಡಿಕೆ ಖರೀದಿ ಹಬ್ಬ
– ಪಾದಯಾತ್ರೆ ಮುಖಾಂತರ ಬರಿಗಾಲ ನಡಿಗೆ ವಿಶೇಷ!
NAMMUR EXPRESS NEWS
ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ ವಾಲ್ಮೀಕಿ ಸಮಾಜ ಬಾಂಧವರು ಹಾಗೂ ಉಪ್ಪಾರ ಸಮಾಜದ ಕಲ್ಲಪ್ಪನವರ ಕುಟುಂಬ ಹಾಗೂ ಅಯ್ಯಪ್ಪನವರ,ಮಕಾಂದಾರ ಕುಟುಂಬವರ್ಗದವರು ಒಗ್ಗಾಟ್ಟಾಗಿ ಬಂದು ಕತ್ತಲ ರಾತ್ರಿಯ ನಿಮಿತ್ಯವಾಗಿ ಮಕ್ತುಂಪೂರ ಗ್ರಾಮದಿಂದ ಮುಂಡರಗಿ ಪಟ್ಟಣಕ್ಕೆ ಬರಿಗಾಲಿನಿಂದ ಪಾದಯಾತ್ರೆಯ ಮುಖಾಂತರ ಮುಂಡರಗಿ ಪಟ್ಟಣಕ್ಕೆ ಬಂದು ಮಡಿಕೆಯನ್ನು ಖರೀದಿಸುವುದು ವಿಶೇಷವಾಗಿತ್ತು. ಸೋಮವಾರ ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆಯಲ್ಲಿ ಜೊಳದ ಕಿಚಡಿಯನ್ನು ತಯಾರಿಸಿ ರಾತ್ರಿ ಸಮಾಜ ಭಾಂದವರು ಕೂಡಿಕೊಂಡು ದೀಡ ನಮಸ್ಕಾರ ಹಾಕುವುದರೊಂದಿಗೆ ಅಲೈ ದೇವರಿಗೆ ನೈವೇದ್ಯ ಅರ್ಪಿಸುವುದು ಹಿಂದಿನಿಂದ ಕಾಲದ ಬಂದ ಪ್ರತೀತಿ.
ಇನ್ನೊಂದು ವಿಶೇಷವೆಂದರೆ ಈ ಹೊಸ ಮಡಿಕೆಯಲ್ಲಿ ಜೋಳದ ಕಿಚಡಿಯನ್ನು ತಯಾರಿಸುವಾಗ ಒಮ್ಮೆ ಹಚ್ಚಿದ ಓಲೆಯು ಆರುವುದೇ ಇಲ್ಲ ಹಾಗೂ ಕಿಚಡಿ ಆಗುವವರೆಗೂ ಒಲೆಯನ್ನು ಸಹ ಊದುವುದಿಲ್ಲ ಅಂತಹ ವಿಶೇಷತೆ ಇದರಲ್ಲಿದೆ
ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆಯ ಖರೀದಿಯನ್ನು ಮಾಡಿ ಪಾದಯಾತ್ರೆ ಮುಖಾಂತರ ಬರಿಗಾಲಿನಿಂದ ತೆಗೆದುಕೊಂಡು ಹೋಗುವುದು ಮುಂಡರಗಿ ಪಟ್ಟಣದಲ್ಲಿ ಕಂಡು ಬಂತು.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?
HOW TO APPLY : NEET-UG COUNSELLING 2023