-ಇದು ಯಾವುದಕ್ಕೆ ಒಳ್ಳೆಯದು?
-ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಮಾನ್ಯವಾಗಿ ಗ್ರೀನ್ ಟೀ, ಜಿಂಜರ್ ಟೀ, ಲೆಮೆನ್ ಟೀ ಈ ತರಹದ ಟೀ ಗಳನ್ನು ಕೇಳಿದ್ದೇವೆ. ಆದರೆ ಇಲ್ಲಿ ನೀವು ಕೇಳದೇ ಇರುವ ರೋಸ್ ಟೀ ಬಗ್ಗೆ ತಿಳಿದುಕೊಳ್ಳಿ..
ರೋಸ್ ಟೀ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ರೋಸ್ ಟೀಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಬಹುದು. ಕೆಮ್ಮು ಮತ್ತು ಶೀತ ನಿವಾರಕ ಗುಣವಿರುವ ರೋಸ್ ಟೀ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ಮನೆಯಲ್ಲಿ ಗುಲಾಬಿ ಹೂವುಗಳಿದ್ದರೆ ರೋಸ್ ಟೀ ಯನ್ನು ಸುಲಭವಾಗಿ ತಯಾರಿಸಬಹುದು. ತಾಜಾ ಹೂವಿನ ಎಸಳುಗಳನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ. ಹತ್ತು ನಿಮಿಷ ಕುದಿದ ಬಳಿಕ ಸೋಸಿ. ಸಕ್ಕರೆ ಬದಲು ಬೆಲ್ಲ ಸೇರಿಸಿ ಕುಡಿಯಬಹುದು.
ಮಳಿಗೆಯಿಂದ ತಂದ ಗುಲಾಬಿಯಾದರೆ ಎಸಳನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಮನೆಯಲ್ಲಿ ಹೆಚ್ಚು ಗುಲಾಬಿ ಅರಳಿದ್ದರೆ ಅದನ್ನು ಬಿಸಿಲಿನಲ್ಲಿ ಒಣಗಿಸಿ ತೆಗೆದಿಡಿ. ಬೇಕಾದಾಗ ನೀರಿಗೆ ಹಾಕಿ ಕುದಿಸಿ ತಾಜಾ ಚಹಾ ತಯಾರಿಸಬಹುದು. ಈ ಟೀಯನ್ನು ಎಲ್ಲಾ ವಯಸ್ಸಿನವರು ಕುಡಿಯಬಹುದು ಯಾವುದೇ ಅಡ್ಡ ಪರಿಣಾಮಗಯಾಗುವುದಿಲ್ಲ.