-ಮನಸ್ಸನ್ನು ಉಲ್ಲಾಸವಾಗಿಸೋ ನಡಿಗೆ
-ಆರೋಗ್ಯ ಸದೃಢವಾಗಿರಿಸಲು ಸರಳ ಸೂತ್ರ
ಆರೋಗ್ಯವೇ ಭಾಗ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ, ಕೆಲಸ, ಮಾಡಲು ಅನುಕೂಲವಾಗುತ್ತದೆ.
ಹಾಗಾಗಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಅನೇಕರು ಶ್ರಮ ವಹಿಸುತ್ತಾರೆ.
ವ್ಯಾಯಾಮ, ಯೋಗ, ಜಿಮ್ ಮೊದಲಾದವುಗಳ ಮೂಲಕ ಸದೃಢ ಆರೋಗ್ಯ ಕಂಡುಕೊಳ್ಳುತ್ತಾರೆ. ಇದರೊಂದಿಗೆ ವಾಕಿಂಗ್ ಮಾಡುವುದರಿಂದಲೂ ಹಲವು ಪ್ರಯೋಜನಗಳಿವೆ. ನಡಿಗೆ ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸದಿಂದ ಇಡುತ್ತದೆ.
ಬೆಳಿಗ್ಗೆ ಮತ್ತು ಸಂಜೆ ವಾಕ್ ಮಾಡುವುದರಿಂದ ಜಡತ್ವ ದೂರವಾಗುತ್ತದೆ. ಇದರಿಂದ ದಿನವಿಡೀ ಉತ್ಸಾಹವಿರುತ್ತದೆ. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ವಾಕಿಂಗ್ ಒಳ್ಳೆಯದು. ವಾಕಿಂಗ್ ಜೊತೆಗೆ ಸರಳ ವ್ಯಾಯಾಮ ಮಾಡುವುದರಿಂದಲೂ ಅನುಕೂಲವಾಗುತ್ತದೆ. ಯುವಕರು, ವಯಸ್ಕರು, ಹಿರಿಯರಿಗೂ ವಾಕಿಂಗ್ ನಿಂದ ಹಲವು ಪ್ರಯೋಜನಗಳಿವೆ ಎಂದು ಹೇಳುತ್ತಾರೆ.