ಉಡುಪಿ ಬಳಿಕ ಹುಬ್ಬಳ್ಳಿ ಅಶ್ಲೀಲ ವಿಡಿಯೋ ಸದ್ದು!
– ಮೂವರು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಇನ್ಸ್ಟಾಗ್ರಾಮ್ ಅಲ್ಲಿ ಎಡಿಟ್ ಮಾಡಿ ಪೋಸ್ಟ್
– ಪೊಲೀಸರಿಗೆ ತಲೆನೋವಾದ ಅನಾಮಿಕ!
– ಹಾಸನದಲ್ಲಿ ಪೊಲೀಸರ ವಿರುದ್ಧವೇ ವಿದ್ಯಾರ್ಥಿಗಳ ದೂರು
NAMMUR EXPRESS NEWS
ಹುಬ್ಬಳ್ಳಿ: ಮೂವರು ವಿದ್ಯಾರ್ಥಿನಿಯರ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ ಕಿಡಿಗೇಡಿಯ ಹುಡುಕಾಟ ಜೋರಾಗುತ್ತಿದ್ದಂತೆಯೇ ಆತ ಪೋಸ್ಟನ್ನು ಡಿಲೀಟ್ ಮಾಡಿದ್ದಾನೆ. ಹುಬ್ಬಳ್ಳಿಯ ಸಮರ್ಥ್ ಕಾಲೇಜಿನ ಮೂವರು ಹಿಂದು ವಿದ್ಯಾರ್ಥಿನಿಯರ ಫೋಟೊಗಳನ್ನು ಬಳಸಿಕೊಂಡು ಅವುಗಳಿಗೆ ಬೆತ್ತಲೆ ದೇಹಗಳನ್ನು ಸೇರಿಸಿ ಎಡಿಟ್ ಮಾಡಿದ್ದಲ್ಲದೆ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಕಿಡಿಗೇಡಿಗಳಿಗಾಗಿ ಪೊಲೀಸರ ಹುಡುಕಾಟ ಜೋರಾಗಿರುವಂತೆಯೇ ಇತ್ತ ಆ ಕಿಡಿಗೇಡಿ ಇನ್ಸ್ಟಾ ಪೋಸ್ಟ್ ಡಿಲೀಟ್ ಮಾಡಿದ್ದಾನೆ.
ಕಾಲೇಜಿನ ವಿದ್ಯಾರ್ಥಿನಿಯರು ತಮ್ಮಫೋಟೊಗಳನ್ನು ಈ ರೀತಿಯಾಗಿ ದುರ್ಬಳಕೆ ಮಾಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಗೆ ಕಳೆದ ಜೂನ್ 20ರಂದೇ ದೂರು ನೀಡಿದ್ದರು. ಆದರೆ, ಆಡಳಿತ ಮಂಡಳಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಶುಕ್ರವಾರ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಿಗೇ ಪೊಲೀಸರು ಸಮರ್ಥ್ ಕಾಲೇಜಿಗೆ ಬಂದು ವಿಚಾರಣೆ ನಡೆಸಿದ್ದಾರೆ. ಇತ್ತ ದೂರು ದಾಖಲಾಗುತಿದ್ದಂತೆಯೇ ಸೈಬರ್ ವಂಚಕ ಅಲರ್ಟ್ ಆಗಿದ್ದಾನೆ. ಇನ್ಸ್ಟಾದಲ್ಲಿ ಹಾಕಿರೋ ಪೋಸ್ಟ್ ಡಿಲೀಟ್ ಮಾಡಿದ್ದಾನೆ. kashmira1990_0 ಇನ್ ಸ್ಟಾ ಅಕೌಂಟ್ ನಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಕಿಡಿಗೇಡಿ ಈ ಪೋಸ್ಟನ್ನು ಡಿಲೀಟ್ ಮಾಡಿದ್ದಾನೆ.
ಸಮರ್ಥ ಕಾಲೇಜಿನ ವಿದ್ಯಾರ್ಥಿಗಳ ಮೇಲೆಯೇ ಗುಮಾನಿ!:
ಪೊಲೀಸರು ಸಮರ್ಥ್ ಕಾಲೇಜಿಗೆ ಹೋಗಿ ವಿಚಾರಣೆ ನಡೆಸಿದರೂ ಅಲ್ಲಿ ಅವರಿಗೆ ಹೆಚ್ಚಿನ ಮಾಹಿತಿಯೇನೂ ಸಿಕ್ಕಿಲ್ಲ, ಕಳೆದ ಮೂರು ತಿಂಗಳಿನಿಂದ ಫೋಟೊಗಳನ್ನು ಎಡಿಟ್ ಮಾಡಿ ಹಾಕಲಾಗುತ್ತಿದೆ. ಇಷ್ಟಾದರು ಕಾಲೇಜಿನ ಆಡಳಿತ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆಡಳಿತ ಮಂಡಳಿ ಹೆಚ್ಚಿನ ಮಾಹಿತಿಯನ್ನೂ ನೀಡಿಲ್ಲ ಸಹಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಯರ ಅಶ್ಲೀಲ ಪೋಟೊ ಎಡಿಟ್ ಮಾಡಿ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಸದ್ಯವೇ ಆರೋಪಿಯನ್ನು ಹಿಡಿಯುತ್ತೇವೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಸಂತೋಷ ಬಾಬು ಹೇಳಿದ್ದಾರೆ.
ಯವತಿಯರು ದೂರು ನೀಡಿದ್ದಾರೆ. ಅವರಿಗೆ ಯಾರ ಮೇಲೆ ಅನುಮಾನವಿದೆ ಎಂದು ಕೂಡಾ ಕೇಳಿ ತಿಳಿದುಕೊಂಡಿದ್ದೇವೆ. ಹಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದೇವೆ. ಇನ್ಸ್ಟಾ ಗ್ರಾಂನಲ್ಲಿ ಇಂಥ ಹಲವು ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಪ್ರಕರಣ ಕಾಲೇಜಿನಲ್ಲೇ ನಡೆದಿದೆ. ಕಾಲೇಜಿನ ವಿದ್ಯಾರ್ಥಿಗಳೇ ಇದನ್ನು ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಂತೋಷ್ ಬಾಬು ಹೇಳಿದ್ದಾರೆ.
ಹಾಸನದಲ್ಲಿ ಪೊಲೀಸರ ವಿರುದ್ಧವೇ ವಿದ್ಯಾರ್ಥಿಗಳ ದೂರು
ಹಾಸನದ ವಿದ್ಯಾನಗರದಲ್ಲಿರುವ ಎಸ್ಸಿ/ಎಸ್ಟಿ ವಸತಿ ನಿಲಯದ ಆವರಣಕ್ಕೆ ಬುಧವಾರ ತಡರಾತ್ರಿ ಹಲವಾರು ರಾತ್ರಿ ಬೀಟ್ ಪೊಲೀಸ್ ಸಿಬ್ಬಂದಿ ನುಗ್ಗಿದ ನಂತರ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಯಿತು. ಹಾಸ್ಟೆಲ್ ವಾರ್ಡನ್ ಅಥವಾ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯದೆ ಮೂವರು ಪೊಲೀಸ್ ಪೇದೆಗಳು ಹಾಸ್ಟೆಲ್ಗೆ ನುಗ್ಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಗುರುವಾರ ಮುಂಜಾನೆ 3 ಗಂಟೆಯವರೆಗೆ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಯೊಬ್ಬನ ಜಾತಿ ಬಗ್ಗೆ ಕೇಳುವ ಮೂಲಕ ಕಾನ್ಸ್ಟೆಬಲ್ಗಳು ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದಾಗ, ಪೊಲೀಸ್ ಪೇದೆಯೊಬ್ಬರು ಡಾ. ಬಿಆರ್ ಅಂಬೇಡ್ಕರ್ ಯಾರು ಎಂದು ಕೇಳಿದರು ಎಂದು ವಿದ್ಯಾರ್ಥಿಯೊಬ್ಬರು ದೂರಿದ್ದಾರೆ. ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರ ಸೆಲ್ ಫೋನ್ ಅನ್ನು ಸಹ ಒಬ್ಬ ಕಾನ್ಸ್ಟೇಬಲ್ ಕಸಿದುಕೊಂಡು ಒಡೆದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಸನ ಉಪ ಪೊಲೀಸ್ ವರಿಷ್ಠಾಧಿಕಾರಿ ಮುರುಳೀಧರ್ ಅವರು ಮಧ್ಯರಾತ್ರಿ 2 ಗಂಟೆಗೆ ಹಾಸ್ಟೆಲ್ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಕ್ಕಾಗಿ ಮೂವರು ಪೊಲೀಸ್ ಪೇದೆಗಳು ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ. ವರದಿ ಆಧರಿಸಿ ಒಬ್ಬ ಕಾನ್ಸ್ಟೆಬಲ್ನನ್ನು ಅಮಾನತು ಮಾಡಲಾಗಿದ್ದು, ಇಬ್ಬರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಹಾಸ್ಟೆಲ್ನಿಂದ ಕರೆ ಬಂದ ನಂತರವೇ ಕಾನ್ಸ್ಟೆಬಲ್ಗಳು ಹಾಸ್ಟೆಲ್ಗೆ ಹೋದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ. ಕಾನ್ಸ್ಟೇಬಲ್ಗಳು ಮದ್ಯ ಸೇವಿಸಿಲ್ಲ ಮತ್ತು ಘಟನೆ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023