ಇನ್ಮುಂದೆ ಬ್ಯಾಂಕ್ ವಾರಕ್ಕೆ 2 ದಿನ ಇರಲ್ವಾ?
– ಬ್ಯಾಂಕ್ ಉದ್ಯೋಗಿಗಳಿಗೆ ಐದೇ ದಿನ ಕೆಲಸ?
– ಜು.28ಕ್ಕೆ ಮಹತ್ವದ ಸಭೆ: ಏನಿದು ಹೊಸ ನಿಯಮ?
NAMMUR EXPRESS NEWS
( Bank ) ಭಾರತದಲ್ಲಿರುವ ಬ್ಯಾಂಕುಗಳು ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರವೇ ಕಾರ್ಯನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ. ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನ ರಜೆ ನೀಡುವ ಕುರಿತು ಜು.28ರ ಶುಕ್ರವಾರ ಭಾರತೀಯ ಬ್ಯಾಂಕಿಂಗ್ ಸಂಘ (ಐಬಿಎ) ಹಾಗೂ ಬ್ಯಾಂಕ್ ನೌಕರರ ಒಕ್ಕೂಟಗಳ ಸಂಯುಕ್ತವೇದಿಕೆ ಮಧ್ಯೆ ಮಹತ್ವದ ಸಭೆ ನಡೆಯಲಿದ್ದು, ಅಂದು ಅಂತಿಮ ನಿರ್ಧಾರ ಹೊರಬೀಳುವ ಸಂಭವವಿದೆ. ಹಾಲಿ ಭಾನುವಾರ ಎಲ್ಲ ಬ್ಯಾಂಕುಗಳಿಗೂ ರಜೆ ಇದೆ. ಇದರ ಜತೆಗೆ 2ನೇ ಹಾಗೂ 4ನೇ ಶನಿವಾರದಂದು ಕೂಡ ರಜೆ ಸಿಗುತ್ತಿದೆ. ತಿಂಗಳಲ್ಲಿ 2 ಶನಿವಾರ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಇನ್ನು ಮುಂದೆ ಅದು ಕೂಡ ಇರುವುದಿಲ್ಲ. ಅದರ ಬದಲಿಗೆ ವಾರದ ಐದು ದಿನ ಹೆಚ್ಚುವರಿಯಾಗಿ 40 ನಿಮಿಷ ಕೆಲಸ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕುಗಳಲ್ಲಿ ಐದು ದಿನ ಕಾರ್ಯನಿರ್ವಹಣಾ ಅವಧಿ ಪರಿಚಯಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಬ್ಯಾಂಕಿಂಗ್ ಸಂಘ ಮಾಹಿತಿ ನೀಡಿದೆ. ಈ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಜಾರಿಗೆ ತರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ತಿಳಿಸಿದೆ.
5 ದಿನ ಕರ್ತವ್ಯಾವಧಿ ಮಾತ್ರವಲ್ಲದೆ, ವೇತನ ಹೆಚ್ಚಳ ಹಾಗೂ ನಿವೃತ್ತ ನೌಕರರಿಗೆ ಸಮೂಹ ಆರೋಗ್ಯ ವಿಮಾ ಪಾಲಿಸಿಯ ಅಗತ್ಯ ಕುರಿತಂತೆಯೂ ಜು.28ರ ಸಭೆಯಲ್ಲಿ ಚರ್ಚೆಯಾಗಲಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದಲ್ಲಿ ಕೇಂದ್ರ ಸರ್ಕಾರ ವಾರಕ್ಕೆ ಐದು ದಿನದ ಕಾರ್ಯನಿರ್ವಹಣಾ ಅವಧಿಯನ್ನು ಜಾರಿಗೊಳಿಸಿದೆ. ಆ ಬಳಿಕ ಬ್ಯಾಂಕಿಂಗ್ ವಲಯದಲ್ಲೂ ಅದೇ ಪದ್ಧತಿ ಪರಿಚಯಿಸಬೇಕು ಎಂಬ ಕೂಗು ಆರಂಭವಾಗಿತ್ತು. ಇದಕ್ಕೆ ತನ್ನ ಯಾವುದೇ ಆಕ್ಷೇಪ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಈ ಹಿಂದೆಯೇ ಹೇಳಿತ್ತು.
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023