- 8600 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
- ಪಿಒ, ಕ್ಲರ್ಕ್ ಹುದ್ದೆಗಳಿಗೆ ಆನ್ಲೈನ್ ನೋಂದಣಿ
NAMMUR EXPRESS NEWS
ಬ್ಯಾಂಕ್ನಲ್ಲಿ ಉದ್ಯೋಗ ಮಾಡಬೇಕೆಂಬ ಕನಸು ಕಂಡವರಿಗೆಲ್ಲ ಅದನ್ನು ನನಸಾಗಿಸಿಕೊಳ್ಳಲು ಇದು ಸಕಾಲ. ಯಾಕಂದ್ರೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್, ಐಬಿಪಿಎಸ್ ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಬ್ಯಾಂಕಿನ ಅಧಿಕೃತ ವೆಬ್ಸೈಟ್ನಲ್ಲಿ 2023ರ ಐಬಿಪಿಎಸ್ ಕ್ಲರ್ಕ್ ಪಿಒ ಪರೀಕ್ಷೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ನ ವೆಬ್ಸೈಟ್ನಲ್ಲಿ 2023ರ ಜೂನ್ 01 ರಿಂದ ಜೂನ್ 21ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ದೇಶಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ಆಫೀಸ್ ಅಸಿಸ್ಟೆಂಟ್ (ಗುಮಾಸ್ತ), ಆಫೀಸರ್ ಸ್ಕೇಲ್ -I/ಪಿಒ (ಸಹಾಯಕ ಮ್ಯಾನೇಜರ್) ಮತ್ತು ಆಫೀಸರ್ ಸ್ಕೆಲ್ 2 (ಮ್ಯಾನೇಜರ್) ಮತ್ತು ಆಫೀಸ್ ಸ್ಕೆಲ್ 3 (ಹಿರಿಯ ಮ್ಯಾನೇಜರ್) ಹುದ್ದೆಗೆ ಸುಮಾರು 8600 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪರೀಕ್ಷೆಯನ್ನು ಸಾಮಾನ್ಯ ನೇಮಕಾತಿ ಪ್ರಕ್ರಿಯೆ (ಆರ್ಆರ್ಬಿಗಳಿಗೆ ಸಿಆರ್ಪಿ- XII) ಮೂಲಕ ನಡೆಸಲಾಗುತ್ತದೆ.ಆಫೀಸ್ ಅಸಿಸ್ಟೆಂಟ್ (ಗುಮಾಸ್ತ) ಹುದ್ದೆಗಳಿಗೆ ಮತ್ತು ಆಫೀಸರ್ ಸ್ಕೆಲ್ 1 (ಪಿಒ) ಹುದ್ದೆಗಳಿಗೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ.
ಆದಾಗ್ಯೂ, ಆಫೀಸರ್ ಸ್ಕಲ್ 2 ಮತ್ತು 3 ಗಾಗಿ ಒಂದೇ ಪರೀಕ್ಷೆ ಇರುತ್ತದೆ. ಬ್ಯಾಂಕ್ ತನ್ನ ಪರೀಕ್ಷಾ ಕ್ಯಾಲೆಂಡರ್ನಲ್ಲಿ 05, 06, 12, 13 ಮತ್ತು 19 ಆಗಸ್ಟ್ 2023 ರಂದು IBPS RRB ಕ್ಲರ್ಕ್ ಪರೀಕ್ಷೆ ಮತ್ತು IBPS RRB PO ಪರೀಕ್ಷೆಯನ್ನು ನಿಗದಿಪಡಿಸಿದೆ. IBPS RRB ಆಫೀಸರ್ ಸ್ಕೆಲ್ 2 ಮತ್ತು 3 ಪರೀಕ್ಷೆಯನ್ನು ಸೆಪ್ಟೆಂಬರ್ 10, 2023 ರಂದು ನಡೆಸಲಾಗುವುದು.
ಕೌನ್ಸೆಲಿಂಗ್ : ಅದೇ ಪ್ರಕ್ರಿಯೆಯ ಅಡಿಯಲ್ಲಿ ಗುಂಪು “A”- ಅಧಿಕಾರಿಗಳ (ಸ್ನೇಲ್-I, II ಮತ್ತು |||) ನೇಮಕಾತಿಗಾಗಿ ಸಂದರ್ಶನಗಳನ್ನು ನೋಡಲ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ನಬಾರ್ಡ್ ಮತ್ತು IBPS ಸಹಾಯದಿಂದ ತಾತ್ಕಾಲಿಕವಾಗಿ ಸೂಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನವೆಂಬರ್ ತಿಂಗಳಿನಲ್ಲಿ ಸಮನ್ವಯಗೊಳಿಸುತ್ತವೆ.
IBPS RRB 2023 ಅಧಿಸೂಚನೆ ಮತ್ತು ಆನ್ಲೈನ್ ಅಪ್ಲಿಕೇಶನ್ ಲಿಂಕ್ : ಅಧಿಸೂಚನೆಯನ್ನು ಬ್ಯಾಂಕ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ವಿವರವಾದ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ನಂತರ, ಆಕಾಂಕ್ಷಿಗಳು ರಾಜ್ಯವಾರು ಖಾಲಿ ಹುದ್ದೆಗಳು, ವಿದ್ಯಾರ್ಹತೆಗಳು, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಆನ್ಲೈನ್ ಅಪ್ಲಿಕೇಶನ್ ಲಿಂಕ್ ಕೂಡ ಲಭ್ಯವಿದೆ.
IBPS RRB 2023ಗೆ ಅರ್ಜಿ ಸಲ್ಲಿಸುವುದು ಹೇಗೆ?:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 01 ಜೂನ್ ನಿಂದ 21 ಜೂನ್ 2023 ರವರೆಗೆ ibps.in ನಲ್ಲಿ ಸಾಮಾನ್ಯ ನೇಮಕಾತಿ ಪ್ರಕ್ರಿಯೆಯ ಮೂಲಕ ಆನ್ಲೈನ್ನಲ್ಲಿ ಸಲ್ಲಿಸಬಹುದು. ವಿವರವಾದ ಹಂತಗಳು ಹೀಗಿವೆ.
ಬ್ಯಾಂಕ್ನ ವೆಬ್ಸೈಟ್ಗೆ ಭೇಟಿ ನೀಡಿ –
www.ibps.in