ಕಾರ್ಕಳ: : ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜನವರಿ 19ರಂದು ಕಾರ್ಕಳ ಪುರಸಭಾ ವ್ಯಾಪ್ತಿಯ ಮೀನಗುಂಡಿ ಕಾಂಪೌಂಡ್ ಎಂಬಲ್ಲಿ ವರದಿಯಾಗಿದೆ. ವೆಂಕಟೇಶ ಹೆಗ್ಡೆ (22) ಆತ್ಮಹತ್ಯೆ ಶರಣಾದ ವಿದ್ಯಾರ್ಥಿ.
ಮಂಗಳೂರು ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ ಓದುತ್ತಿರುವ ವೆಂಕಟೇಶ್ ತಂದೆಯ ಬಳಿ ವಿದ್ಯಾಭ್ಯಾಸ ಮಾಡಲು ತನಗೆ ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದು ಸುಮಾರು 10 ದಿನಗಳಿಂದ ಮೌನವಾಗಿದ್ದ.
ಇದೇ ಕಾರಣದಿಂದ ಮನನೊಂದು ಜನವರಿ 19ರ ರಾತ್ರಿ ಮನೆಯ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.