ಜನವರಿ 26ಕ್ಕೆ ಮಂಗಳೂರಲ್ಲಿ ಕೃಷಿ ಹಬ್ಬ!
– ಸಾರಡ್ಕದ ಆರಾಧನಾ ಕಲಾಭವನದಲ್ಲಿ ಆಯೋಜಾನೆ
– ಕೃಷಿ ಸ್ನೇಹಿ ವಿಚಾರಗಳುಳ್ಳ ಪುಸ್ತಕ ಬಿಡುಗಡೆ, ಕೃಷಿಕರ
– ಅನುಭವ ಹಂಚಿಕೊಳ್ಳುವ ವಿಚಾರ ಸಂಕಿರಣ!
NAMMUR EXPRESS NEWS
ಮಂಗಳೂರು: ಆರಾಧನಾ ಕಲಾಭವನ ಆಯೋಜಿಸಿರುವ ಕೃಷಿ ಹಬ್ಬವು ಜನವರಿ 26ರಂದು ಬೆಳ್ಳಗ್ಗೆ 9.00 ರಿಂದ ಸಂಜೆ 7 ರವರೆಗೆ ಸಾರಡ್ಕದ ಆರಾಧನಾ ಕಲಾಭವನದಲ್ಲಿ ನಡೆಯಲಿದೆ. ಕೃಷಿ ಸ್ನೇಹಿ ವಿಚಾರಗಳುಳ್ಳ ಪುಸ್ತಕ ಬಿಡುಗಡೆ, ಕೃಷಿ ಕ್ಷೇತ್ರದಲ್ಲಿ ಸಾಧನೆ- ಸಂಶೋಧನೆ ನಡೆಸಿ ಯಶಸ್ವಿಯಾದ ಕೃಷಿಕರು ತಮ್ಮ ಅನುಭವವನ್ನು ವಿಚಾರ ಸಂಕಿರಣದಲ್ಲಿ ಹಂಚಿಕೊಳ್ಳಲಿದ್ದಾರೆ. ಪ್ರವೀಣ ಸರಳಾಯ ಕೇಪು, ಡಾ. ರಾಮಕೃಷ್ಣ ಪರಮ ಬೆಂಗಳೂರು, ರಾಮ ಪ್ರತೀಕ್ ಕರಿಯಾಲು, ಶಿವಪ್ರಸಾದ್ ಎಚ್. ಎಂ, ಶ್ರೀಹರಿ ಭಟ್ ಸಜಂಗದ್ದೆ, ಎ.ಪಿ ಸದಾಶಿವ ಮರಿಕೆ, ಅಭಿಜಿತ್ ಪುತ್ತೂರು ಮತ್ತಿತರು ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಲಿದ್ದಾರೆ. ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಮಳಿಗೆ, ಕೃಷಿ ಉಪಯೋಗಿ ಯಂತ್ರೋಪಕರಣಗಳು, ಹೂ ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಹೆಚ್ಚಿನ ಮಾಹಿತಿಗೆ 9483211388 ಸಂಪರ್ಕಿಸಬಹುದು.