ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಡಿ. 5 ರಂದು ಮದುವೆ ನಿಗದಿಯಾಗಿದ್ದ ವರ ನಾಪತ್ತೆ!
– ಬಂಟ್ವಾಳ: ಮನೆಯಿಂದ ಹೊರಟ ಆಟೋ ಚಾಲಕ ನಾಪತ್ತೆ
– ಉಡುಪಿ: ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು
NAMMUR EXPRESS NEWS
ಕುಂದಾಪುರ: ಮದುವೆ ನಿಗದಿಯಾಗಿದ್ದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಟೇಶ್ವರ ಗ್ರಾಮದ ಜಯಲಕ್ಷ್ಮೀ ಎಂಬವರು ಕಾರ್ತಿಕ್(28) ಎಂಬವರನ್ನು ಮದುವೆ ಮಾತುಕತೆ ಮಾಡಿಕೊಂಡು ಡಿ.5ರಂದು ಮದುವೆ ಆಗುವುದಾಗಿ ನಿಶ್ಚಯಿಸಿದ್ದರು. ಅದರಂತೆ ಜು.16ರಂದು ಮದುವೆ ನೊಂದಣಿ ಮಾಡಿಕೊಂಡಿದ್ದರು. ನ.27ರಂದು ಅಪರಾಹ್ನ ವೇಳೆ ಕಾರ್ತಿಕ್, ಜಯಲಕ್ಷ್ಮೀಗೆ ಕರೆ ಮಾಡಿ, ತಾನು ಕೋಟೇಶ್ವರದಲ್ಲಿದ್ದು ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿ ಹೋಗಿದ್ದರು. ನಂತರ ಅವರು ವಾಪಾಸ್ಸು ಬಾರದೇ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ. ಎತ್ತರ 5.6 ಅಡಿ ಎತ್ತರ, ಗೋದಿ ಮೈಬಣ್ಣ, ಎಡಗೈ ಮೇಲೆ ಮಾರ್ಕ್, ಬಲಕಿವಿಯಲ್ಲಿ ಚಿನ್ನದ ರಿಂಗ್ ಇರುತ್ತದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
* ಬಂಟ್ವಾಳ: ಮನೆಯಿಂದ ಹೊರಟ ಆಟೋ ಚಾಲಕ ನಾಪತ್ತೆ
ವಿಟ್ಲ: ಆಟೋ ಚಾಲಕ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ಬಾಯಿಲ ನಿವಾಸಿ ಧನರಾಜ್( 28) ನಾಪತ್ತೆಯಾದ ಆಟೋ ಚಾಲಕ. ನ.28 ರಂದು ಎಂದಿನಂತೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಿಂದ ಬೆಳಿಗ್ಗೆ 8.30 ಗಂಟೆಗೆ ಅಟೋ ರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಹೋದವನು ಡಿ.3 ರವರೆಗೂ ಮನೆಗೆ ಬಂದಿರುವುದಿಲ್ಲ.ಈ ಬಗ್ಗೆ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾನೆ. ಧನರಾಜ್ನ ರಿಕ್ಷಾ ಮಾತ್ರ ಉಪ್ಪಿನಂಗಡಿಯಲ್ಲಿದ್ದು ಆತನ ಮೊಬೈಲ್ ನಂಬ್ರ ಸ್ವೀಚ್ ಆಫ್ ಆಗಿರುತ್ತದೆ. ಮನೆಗೂ ಬಾರದೆ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗೂ ಹೋಗದೆ ಕಾಣೆಯಾದ ಧನರಾಜ್ನನ್ನು ಪತ್ತೆಮಾಡಿ ಕೊಡಬೇಕಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
* ಉಡುಪಿ: ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು
ಉಡುಪಿ: ಜಿಲ್ಲಾಸ್ಪತ್ರೆಯ ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಅಜ್ಜರಕಾಡುವಿನಲ್ಲಿ ಡಿ.2ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಮೂಡುಬೆಳ್ಳೆ ಗ್ರಾಮದ ಸಂತೋಷ್(46) ಎಂದು ಗುರುತಿಸಲಾಗಿದೆ. ಇವರು ನಿರ್ಮಾಣ ಹಂತದಲ್ಲಿರುವ ಸರಕಾರಿ ಆಸ್ಪತ್ರೆಗೆ ವಾಟರ್ ಪ್ರೂಫಿಂಗ್ ಕೆಲಸಕ್ಕೆ ಹೋಗಿದ್ದು, ಕಟ್ಟಡದ ಆರನೇ ಅಂತಸ್ಥಿನ ಮೇಲಿರುವ ಟ್ಯಾಂಕಿಗೆ ವಾಟರ್ ಪ್ರೂಫಿಂಗ್ ಮಾಡಲು ತೆರಳಿದ್ದರು. ಆ ಕೆಲಸವನ್ನು ಮುಗಿಸಿ ವಾಪಸ್ಸು ಕೆಳಗಡೆ ಬರಲು 6ನೇ ಅಂತಸ್ಥಿನ ಮೇಲೆ ಅಳವಡಿ ಸಿದ ಪಾಲಿ ಕಾರ್ಮರ್ ಶೀಟ್ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವುಗಳ ಮಧ್ಯ ಅಳವಡಿಸಿದ ಶೀಟ್ ಒಂದರ ಮೇಲೆ ಕಾಲು ಇಟ್ಟರು. ಇದರಿಂದ ಸಂತೋಷ್ ಆಯತಪ್ಪಿ 6ನೇ ಅಂತಸ್ಥಿನ ಮೇಲ್ಚಾವಣಿನಿಂದ ನೇರ ನೇಲಕ್ಕೆ ಅಂಗಾತ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.