ಕರಾವಳಿ ಟಾಪ್ ನ್ಯೂಸ್
– ಸುಳ್ಯ: ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿ ಪರಾರಿಯಾದ ಕಾರು!
– ಪುತ್ತೂರು: ಪುತ್ತೂರು: ಕಾರು- ಖಾಸಗಿ ಶಾಲಾ ವಾಹನ ಡಿಕ್ಕಿ!
– ಕುಂದಾಪುರ : ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ : ದಂಪತಿಯ ಸೆರೆ
– ಪುತ್ತೂರು: ನೇಣು ಬಿಗಿದು ಇಲೆಕ್ಟ್ರಿಷಿಯನ್ ಆತ್ಮಹತ್ಯೆ
NAMMUR EXPRESS NEWS
ಸುಳ್ಯ : ಇತ್ತೀಚಿನ ದಿನಗಳಲ್ಲಿ ವಂಚನೆಗಳು ಹೆಚ್ಚುತ್ತಿದ್ದು, ವಂಚಕರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಕಡಬ ಮತ್ತು ಸುಳ್ಯದ ಪೆಟ್ರೋಲ್ ಬಂಕ್ಗಳಲ್ಲಿ ಹೊಸ ರೀತಿಯ ವಂಚನೆ ನಡೆದಿದೆ. KA01MX9632 ನಂಬರಿನ ಥಾರ್ ಜೀಪ್ನ ಚಾಲಕನೊಬ್ಬ, ಜ. 23ರಂದು ಬೆಳಗ್ಗೆ 6 ಗಂಟೆಗೆ ಕಡಬದ ಹಿಂದೂಸ್ಥಾನ್ ಪೆಟ್ರೋಲ್ ಬಂಕ್ಗೆ ಬಂದು ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನಂತರ, ಪೆಟ್ರೋಲ್ ಬೇಕೆಂದು ಹೇಳಿ ಬಂಕ್ ಸಿಬ್ಬಂದಿಯನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾನೆ. ಈ ಅವಧಿಯಲ್ಲಿ ಅವನು ಡೀಸೆಲ್ ಹಣ ನೀಡದೆ ಜೀಪ್ನಲ್ಲಿ ಎಸ್ಕೇಪ್ ಆಗಿದ್ದಾನೆ. ಇದೇ ರೀತಿಯ ಘಟನೆ ಡಿಸೆಂಬರ್ 25ರಂದು ಸುಳ್ಯದ ಪೈಚಾರು ಪೆಟ್ರೋಲ್ ಬಂಕ್ನಲ್ಲೂ ನಡೆದಿದೆ. ಒಬ್ಬ ವ್ಯಕ್ತಿ ಹಲವು ಕಡೆಗಳಲ್ಲಿ ಇದೇ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಾಹನಗಳು ಎಲ್ಲಿ ಕಂಡುಬಂದರೂ ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
– ಪುತ್ತೂರು: ಪುತ್ತೂರು: ಕಾರು- ಖಾಸಗಿ ಶಾಲಾ ವಾಹನ ಡಿಕ್ಕಿ!
ಪುತ್ತೂರು: ಖಾಸಗಿ ಶಾಲಾ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಬ್ಬರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಪುತ್ತೂರಿನ ಮಂಜಲ್ಪಡ್ಡು ಎಂಬಲ್ಲಿ ಇಂದು ನಡೆದಿದೆ. ಅಪಘಾತದ ಪರಿಣಾಮ ಕಾರಿನ ಮುಂಭಾಗ ಜಖಂ ಗೊಂಡಿದ್ದು ಏರ್ ಬ್ಯಾಗ್ ತೆರೆದುಕೊಂಡಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಕುಂದಾಪುರ : ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ : ದಂಪತಿಯ ಸೆರೆ
ಉಡುಪಿ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ತಾಲೂಕಿನ ತ್ರಾಸಿ ಬೀಚ್ ಬಳಿಯ ಉದಯ ಪೂಜಾರಿ ಎಂಬವರ ಮನೆಯಲ್ಲಿ ಬ್ಯಾಗ್ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರವನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಕುಂದಾಪುರ ಗುಜ್ಜಾಡಿ ನಿವಾಸಿ ವಿನಾಯಕ (41) ಹಾಗೂ ಆತನ ಪತ್ನಿ ಪ್ರಮೀಳಾ(30) ಎಂಬಾಕೆಯನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರ ಸಹಿತ ಒಟ್ಟು 2 ಲಕ್ಷ ಮೌಲ್ಯದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪುತ್ತೂರು: ನೇಣು ಬಿಗಿದು ಇಲೆಕ್ಟ್ರಿಷಿಯನ್ ಆತ್ಮಹತ್ಯೆ
ಪುತ್ತೂರು: ಪಡುವನ್ನೂರು ಗ್ರಾಮದ ಪುಂಡಿಕಾಯಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಯರಿಂಗ್ ಕೆಲಸ ಮಾಡುತ್ತಿರುವ ಮೋಹನ್ (34 ವರ್ಷ) ಎಂಬುವವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಜ.20 ರಂದು ಮೋಹನ್ ಅವರು ರಾತ್ರಿ2 ಊಟ ಮಾಡಿ ಮಲಗಿದ್ದು, ಜ.1 ರ ಬೆಳಗ್ಗೆ ನಾಪತ್ತೆಯಾಗಿದ್ದರು. ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಪತ್ತೆ ವಿಷಯ ತಿಳಿದು ಹುಡುಕಿದಾಗ ಮನೆಯ ಪಕ್ಕದ ಪದ್ಮನಾಭ ಭಟ್ ಎಂಬುವವರ ಜಾಗದಲ್ಲಿ ಉಪ್ಪಳಿಗೆ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮೃತರ ಸಹೋದರ ಚಿರಂಜೀವಿ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.