ಕಾರ್ಕಳ: ಚಿಕ್ಕಮಗಳೂರು ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ತಿಲಕ್ ರೋಡ್ ಫ್ರೆಂಡ್ಸ್, ಕೊಪ್ಪ, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.19 ರಂದು ನಡೆದ ಕೊಪ್ಪ ಮ್ಯಾರಥಾನ್ ನಲ್ಲಿ ಭಾಗವಹಿಸಿದ ನಿಟ್ಟೆ ಕ್ರೀಡಾಪಟುಗಳ ಪೈಕಿ ಮಹಿಳೆಯರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ನಂದಿನಿ ಜಿ., 15,000/- ರೂ.ಗಳ ನಗದು ಬಹುಮಾನದೊಂದಿಗೆ ಚಿನ್ನದ ಪದಕವನ್ನು ಪಡೆದರು. ಮಹಿಳೆಯರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ 3ನೇ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಬೆಳ್ಳಿ ಪದಕ ಹಾಗೂ 10,000 ರೂ.ಗಳ ನಗದು ಬಹುಮಾನ ಪಡೆದರು. ಮಹಿಳೆಯರ ಮುಕ್ತ 20 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಕನ್ನಡ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಕಂಚಿನ ಪದಕ ಹಾಗೂ 5,000 ರೂ.ಗಳ ನಗದು ಬಹುಮಾನ ಪಡೆದರು. ಪುರುಷರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ ಪಿಯು ಕಾಲೇಜಿನ ಪ್ರಥಮ ಕಾಮರ್ಸ್ ವಿದ್ಯಾರ್ಥಿ ಶಾಶ್ವತ್ ರಾಜೇಶ್ ಪೂಜಾರಿ 4ನೇ ಸ್ಥಾನ ಪಡೆದರು.
ಕೊಪ್ಪ ಮ್ಯಾರಥಾನ್ ನಲ್ಲಿ ನಿಟ್ಟೆ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ
Related Posts
Add A Comment