40 ಅಡಿ ಹೊಂಡಕ್ಕೆ ಬಿದ್ದ ಕಾರು: ಜೀವ ಉಳಿಸಿದ ಮಾವಿನ ಮರ!
– ಹೊಸನಗರ ತಾಲೂಕಿನ ಸಮಗೋಡು ಬಳಿ ಘಟನೆ
– ಬೆಂಗಳೂರಿನಿಂದ ಹೊಸನಗರ ಮಾರ್ಗವಾಗಿ ಭಟ್ಕಳಕ್ಕೆ ತೆರಳುತ್ತಿದ್ದ ಬಸ್
NAMMUR EXPRESS NEWS
ಹೊಸನಗರ: 40 ಅಡಿ ಆಳದ ಕಂದಕಕ್ಕೆ ಉರುಳಿದ ಕೆಎಸ್ಆರ್ಟಿಸಿ ಬಸ್ ಅಲ್ಲಿದ್ದ 60ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಗೋಡು ಎಂಬಲ್ಲಿ ನಡೆದಿದೆ.
ಎದುರಿಗೆ ಬಂದ ವಾಹನಕ್ಕೆ ಸೈಡ್ ಕೊಡುವಾಗ ಕಂದಕಕ್ಕೆ ಉರುಳಿ ದುರಂತ ಸಂಭವಿಸಿದೆ. 40 ಅಡಿ ಆಳದಲ್ಲಿ ಮರಕ್ಕೆ ಕೆಎಸ್ಆರ್ಟಿಸಿ ಬಸ್ ಸಿಲುಕಿ ತಲೆಕೆಳಗಾಗಿದ್ದು, ಬಸ್ನಲ್ಲಿ ಮಹಿಳೆಯರು, ಮಕ್ಕಳು ಸೇರಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಮರ ತಡೆಯದಿದ್ದರೆ ಇನ್ನೂ 100 ಅಡಿ ಆಳಕ್ಕೆ ಬಸ್ ಬೀಳುತ್ತಿತ್ತು. ಬೆಂಗಳೂರಿನಿಂದ ಹೊಸನಗರ ಮಾರ್ಗವಾಗಿ ಭಟ್ಕಳಕ್ಕೆ ಬಸ್ ತೆರಳುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸಹಾಯಕ್ಕೆ ಧಾವಿಸಿದ್ದಾರೆ.
ಜೀವ ಉಳಿಸಿದ ಮಾವಿನ ಮರ!
ಭಾರಿ ಮಳೆಯು ಸುರಿಯುತ್ತಿರುವ ಸಮಯದಲ್ಲಿ ಬಸ್ ಸಂಪೂರ್ಣ ಮಗುಚಿ ಕೆಳಕ್ಕೆ ಉರುಳಿ ಮಾವಿನ ಮರಕ್ಕೆ ಒರಗಿ ನಿಂತಿದ್ದರಿಂದ ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿಯಾಗಲಿಲ್ಲ.
ಬಸ್ ಉರುಳಿರುವ ಸಮಗೋಡು ಹಳ್ಳ ದಲ್ಲಿ ಭಾರಿ ನೀರು ಹರಿಯುತ್ತಿದ್ದು ಮಾವಿನ ಮರದ ತಡೆ ಇರುವುದರಿಂದ ಸುಮಾರು 80 ಅಡಿ ಆಳಕ್ಕೆ ಬಸ್ ಬೀಳದೆ ಮೇಲೆಯೇ ಸಿಕ್ಕಿ ಬಿದ್ದಿದೆ. ಸ್ಥಳೀಯರು ಸ್ಥಳಕ್ಕೆ ಕೂಡಲೇ ಆಗಮಿಸಿ ಬಸ್ ಹಿಂದಿನ ಗಾಜನ್ನು ಒಡೆದು ಏಣಿಯನ್ನು ಇಟ್ಟು ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ದಾಟಿಸುವಲ್ಲಿ ಯಶಸ್ವಿಯಾದರು.ಬಸ್ ನಲ್ಲಿ 60 ಜನ ಪ್ರಯಾಣಿಸುತ್ತಿದ್ದರು. ಹೆಚ್ಚಿನ ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಬಸ್ ಎದುರಿನಲ್ಲಿ ಬರುತ್ತಿದ್ದ ಬ್ಯಾಂಕ್ ಗಳಿಗೆ ಹಣ ಸಾಗಣೆ ಮಾಡುವ ಶಿವಮೊಗ್ಗದ ಎಸ್ ಎಂ ಸಿ ಕಂಪೆನಿಯ ಟಾಟಾ ಯೋಧ ವಾಹನ ವಾಗಿದ್ದು ನಿಟ್ಟೂರು ಕೆನರಾ ಬ್ಯಾಂಕ್ ಗೆ ಹಣ ಪೂರೈಕೆ ಮಾಡಿ ವಾಪಸ್ ಆಗುತ್ತಿತ್ತು. ಟಾಟಾ ವಾಹನದ ಚಾಲಕ ಮಂಜುನಾಥ್ ರವರಿಗೆ ಹಣೆಗೆ ಪೆಟ್ಟಾಗಿದ್ದು ಬಸ್ ನಲ್ಲಿದ್ದ ಗಾಯಾಳು ಗಳಿಗೆ ನಗರದ ಸಂಯುಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.