ಮಲೆನಾಡು- ಕರಾವಳಿ ಸಂಪರ್ಕ ಕಲ್ಪಿಸುವ ಹೆದ್ದಾರಿಗೆ ಮರುಜೀವ?!
– ತನಿಕೋಡು ಚೆಕ್ ಪೋಸ್ಟ್ – ಮಾಳ ಘಾಟ್ ಹೆದ್ದಾರಿ ಅಭಿವೃದ್ಧಿಗೆ ಪ್ಲಾನ್
– ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿ ಮಾಡಿದ ಕೋಟಾ
NAMMUR EXPRESS NEWS
ಶೃಂಗೇರಿ/ಕಾರ್ಕಳ: ಮಲೆನಾಡು- ಕರಾವಳಿ ಸಂಪರ್ಕ ಕಲ್ಪಿಸುವ ತನಿಕೋಡು ಚೆಕ್ ಪೋಸ್ಟ್ – ಮಾಳ ಘಾಟ್ ಹೆದ್ದಾರಿ ಅಭಿವೃದ್ಧಿಗೆ ಪ್ಲಾನ್ ಈಗ ಮರು ಜೀವ ಪಡೆದಿದೆ.
ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿ ಮಾಡಿದ ಕೋಟಾ ಶ್ರೀನಿವಾಸ್ ಪೂಜಾರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕೇಂದ್ರ ಭೂ ಸಾರಿಗೆ ಸಚಿವರನ್ನ ಭೇಟಿ ಮಾಡಿ ಮರು ಜೀವ ತುಂಬಿದ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ತಕ್ಷಣ ಹೆದ್ದಾರಿ ಅಭಿವೃದ್ಧಿ ಅನುದಾನ, ಯೋಜನೆ ಶುರು ಮಾಡಲು ಮನವಿ ಮಾಡಿದ್ದಾರೆ.
ಏಪ್ರಿಲ್ 08, 2024 ರಂದು ಶೃಂಗೇರಿಯಲ್ಲಿ ನಡೆದ ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವರಾದ ಜೀವರಾಜ್ ಅವರು ತನಿಕೋಡು ಚೆಕ್ ಪೋಸ್ಟ್ – ಮಾಳ ಘಾಟ್ ಹೆದ್ದಾರಿಯನ್ನ ಅಭಿವೃದ್ಧಿ ಪಡಿಸುವಂತೆ ಬಿಜೆಪಿ ಅಭ್ಯರ್ಥಿಯಾಗಿದ್ದ ಕೋಟಾ ಅವರ ಬಳಿ ಬೇಡಿಕೆಯಿಟ್ಟಿದ್ದರು. ಪ್ರಮಾಣವಚನ ಸ್ವೀಕರಿಸಿದ ಎರೆಡು ದಿನದಲ್ಲೇ ನಮ್ಮ ಸಂಸದರು ಹೆದ್ದಾರಿ ಅಭಿವೃದ್ಧಿಗೆ ಮರು ಜೀವ ತುಂಬಿದ್ದಾರೆ. ನೂತನ ಸಂಸದರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೂ ಸಂಸದರ ಕಾರ್ಯವೈಖರಿಗೆ ಎಲ್ಲರಿಗೂ ಶಹಬ್ಬಾಸ್ ತಿಳಿಸಿದ್ದಾರೆ.