ಮಲ್ಲಾಡಿಹಳ್ಳಿಯಲ್ಲಿ ಮದ್ಯವರ್ಜನ ಶಿಬಿರ ಯಶಸ್ವಿ
– ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾದರಿ ಕಾರ್ಯಕ್ರಮ
– ಮದ್ಯಮುಕ್ತ ಬದುಕು ಕಟ್ಟಿಕೊಳ್ಳಲು ಯೋಜನೆಯ ಪ್ಲಾನ್
NAMMUR EXPRESS NEWS
ಹೊಳಲ್ಕೆರೆ: ಮಾನವ ಜನ್ಮ ಮಣ್ಣಲ್ಲಿ ಮಣ್ಣಾಗುವ ಮೊದಲು ಈ ಭೂಮಿಯ ಮೇಲೆ ಏನನ್ನಾದರೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು, ಮದರ್ ತೆರೇಸಾ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಸರ್ ಎಂ ವಿಶ್ವೇಶ್ವರಯ್ಯ ನಮ್ಮ ನಿಮ್ಮ ಹಾಗೆಯೇ ಬದುಕಿ ಮುಂದಿನ ಪೀಳಿಗೆ ಇರುವವರಿಗೆ ಶಾಶ್ವತವಾಗಿ ನೆನಪಿನಲ್ಲಿರುವ ಕೆಲಸವನ್ನು ಮಾಡಿ ಭೌತಿಕವಾಗಿ ನಮ್ಮ ಜೊತೆಗಿದ್ದಾರೆ. ಈ ಮದ್ಯ ವರ್ಧನ ಶಿಬಿರದಿಂದ ನೀವುಗಳು ಮಧ್ಯಪಾನ ತ್ಯಜಿಸಿ ಮಕ್ಕಳಿಗೆ ಆದರ್ಶ ತಂದೆಯಾಗಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ ಸಲಹೆ ನೀಡಿದ್ದಾರೆ.
ಹೊಸ ದುರ್ಗ ತಾಲೂಕಿನ ಮಲ್ಲಾಡಿಹಳ್ಳಿಯ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ಚಿಕ್ಕ ಜಾಜುರು ಯೋಜನಾ ಕಚೇರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮತ್ತು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ 1818 ನೇ ಮಧ್ಯವರ್ಜನ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮದ್ಯಮುಕ್ತ ಬದುಕು ಕಟ್ಟಿಕೊಳ್ಳಲು ನಮ್ಮ ಸಂಸ್ಥೆಯ ಈ ಮಧ್ಯವರ್ಜನ ಶಿಬಿರ ಸಹಕಾರಿಯಾಗಿದೆ ಎಂದರು.
ಈಗಾಗಲೇ ಮದ್ಯಪಾನ ಮಾಡಿ ತಮ್ಮ ಅಮೂಲ್ಯ ಬದುಕನ್ನು ಕಳೆದುಕೊಂಡಿರುವವರು ಮಧ್ಯಪಾನ ತ್ಯಜಿಸಿ ನವ ಜೀವನಕ್ಕೆ ಕಾಲಿಡುವುದರ ಜೊತೆಗೆ ಮಕ್ಕಳಿಗೆ ಆದರ್ಶ ತಂದೆಯಾಗಿ ಹೆಂಡತಿಗೆ ಗೌರವದ ಗಂಡನಾಗಿ ಬದುಕು ನಡೆಸಬೇಕಿದೆ ಎಂದರು.ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ( ಟ್ರಸ್ಟ್ ) ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ ಪಿ ಓಂಕಾರಪ್ಪ ಮಾತನಾಡಿ, ಧರ್ಮಸ್ಥಳದ ಸಂಸ್ಥೆಯಿಂದ ಸ್ವಚ್ಛ ಸಂಕಲ್ಪ, ಮಧ್ಯವರ್ಜನ ಶಿಬಿರ, ಕಾರ್ಯಕ್ರಮಗಳು ಸಮಾಜದ ಅನಿಷ್ಠ ಪದ್ಧತಿಗಳನ್ನು ದೂರ ಮಾಡಿ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಜಿಲ್ಲಾ ಜನ ಜಾಗೃತಿ ಯೋಜನಾ ನಿರ್ದೇಶಕ ನಾಗರಾಜ್, ಮಧ್ಯವರ್ಜನ ಶಿಬಿರದ ಅಧ್ಯಕ್ಷ ರಮೇಶ್, ಚಿಕ್ಕಜಾಜೂರು ಯೋಜನಾಧಿಕಾರಿ ವಸಂತ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ದೇವರಾಜ್ ಚಿತ್ರಹಳ್ಳಿ, ರಮೇಶ್ ಗೌಡ್ರು, ಸಂತೋಷ್, ಬಿಸನಹಳ್ಳಿ ಜಗದೀಶ್ ತಿಪ್ಪೇಶಪ್ಪ ಗಂಗಾಧರಪ್ಪ, ಸರಸ್ವತಿ, ತುಂಬಿನಕೆರೆ ಬಸವರಾಜ್, ಕವಿತಾ ,ನವಜೀವನ ಸಮಿತಿಯ ಸತೀಶ್, ಹಾಗೂ ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.