ಕನ್ನಡಿಗರ ಮನ ಸೆಳೆದ ‘ಮಲ್ನಾಡ್ ರಾಗ’ ಮೊದಲ ಹಾಡು!
– 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ತೀರ್ಥಹಳ್ಳಿ ಹುಡುಗರ ಹಾಡು
– ಮಳೆಯ ಮಲೆನಾಡು ಇದೆ… ಇಡೀ ಕನ್ನಡದ ಹವಾ ಇದೆ.. ಸೂಪರ್
NAMMUR EXPRESS NEWS
ಮಳೆಯ ಮಲೆನಾಡು ಇದೆ ಎಂಬ ಹೆಸರಿನ ರಾಂಪ್ ಹಾಡಿನ ಮೂಲಕ
“ಮಲ್ನಾಡ್ ರಾಗ ” ಎನ್ನುವ ಯೂಟ್ಯೂಬ್ ಚಾನಲಿನಲ್ಲಿ ಬಿಡುಗಡೆಯಾದ ಕನ್ನಡದ ಹಾಡು ಈಗಾಗಲೇ ಸಖತ್ ವೈರಲಾಗುತ್ತಿದೆ. ವಿಶೇಷವಾಗಿ, ತೀರ್ಥಹಳ್ಳಿ, ಮಲೆನಾಡು, ಕರಾವಳಿ ಹಾಗೆ ಕರ್ನಾಟಕದ ಸೊಬಗನ್ನು ವರ್ಣಿಸಿರುವ ಹುಡುಗರ ಹೊಸ ಸಾಹಸ ಹೊಂದಿರುವ ‘ಮಲ್ನಾಡ್ ರಾಗ’ ಹಾಡು ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋವಾಗಿ ಹೊರಹೊಮ್ಮಿದೆ. ಮೊದಲ ಹಾಡು ಸ್ವೀಕರಿಸಿರುವ ಉತ್ತಮ ಸ್ಪಂದನೆ ಬಗ್ಗೆ ಸಂಭ್ರಮದಲ್ಲಿರುವ ತಂಡವು ಕನ್ನಡ ನಾಡಿನ ವಿಶೇಷತೆ ಬಗ್ಗೆ ಚಿಕ್ಕ ಸಮಯದಲ್ಲಿ ತಿಳಿಸಿದೆ. 3 ನಿಮಿಷ 26 ಸೆಕೆಂಡ್ ಹಾಡು.. ಮಲೆನಾಡು ಎಂಬ ಲಿರಿಕ್ಸ್ ಮೂಲಕ ಪ್ರಾರಂಭವಾದ ಹಾಡಾಗಿದೆ. ತೀರ್ಥಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯಲ್ಲಿ ಶೂಟಿಂಗ್ ಮಾಡಲಾಗಿದೆ.
ಯುವ ಉತ್ಸಾಹಿ ತಂಡಕ್ಕೆ ಬೆಂಬಲಿಸಿ
ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾದ ಮಲ್ನಾಡ್ ರಾಗ ಹಾಡನ್ನು ಸಾಹಿತ್ಯ – ಹಾಡುಗಾರಿಕೆ ವಿನಯ್ ಶೆಟ್ಟಿ, ಪ್ರಿನ್ಸ್ ಜೋಸೆಫ್ ಅವರ ಸಂಗೀತ ಮರು ಮುದ್ರಣ (ರೀ ರೆಕಾರ್ಡಿಂಗ್ )ನಲ್ಲಿ ರಚಿಸಲಾಗಿದೆ. ಇದು ಕನ್ನಡಿಗರ ಮೆಚ್ಚುಗೆ ಪಡೆಯುತ್ತಲೇ ಇದೆ.ಈ ಹಾಡಿನ ಛಾಯಾಗ್ರಹಣ ಅಭಿರಾಮ್, ನಿರ್ದೇಶನ ಕಾರ್ತಿಕ್ ಶ್ರೀಯನ್, ಸಂಕಲನ ಎಡಿಟ್ ವಿನಯ್ ಶೆಟ್ಟಿ, ಗಣೇಶ್ ಜೆ ಹಾಗೂ ರಂಗಾಯಣ ಶಿವಕುಮಾರ್, ನಿರಂಜನ ಸೇರಿ ತೀರ್ಥಹಳ್ಳಿ ಹಲವು ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ. ಕನ್ನಡಕ್ಕೆ ಒಂದೊಳ್ಳೆ ಹಾಡು ಕೊಟ್ಟ ನಮ್ಮೂರ್ ಕನ್ನಡ ಹುಡುಗರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಅಭಿನಂದನೆ ಸಲ್ಲಿಸುತ್ತದೆ. ಎಲ್ಲರೂ ಒಮ್ಮೆ ನೋಡಿ ಹೊಸ ಕಲಾವಿದರನ್ನು ಬೆಳೆಸಿ. ಸ್ನೇಹಿತರಿಗೆ ಶೇರ್ ಮಾಡಿ.
ಯೂಟ್ಯೂಬ್: malnad raaga ಸಬ್ಸ್ಕ್ರೈಬ್ ಮಾಡಿ ವೀಕ್ಷಿಸಿ..