- ರಾವೆಯಿಂದ ನಗರದವರೆಗೆ ಪ್ರತಿಭಟನಾ ಪಾದಯಾತ್ರೆ
- ಯುವ ಕಾಂಗ್ರೆಸ್ ಸಂಘಟನೆಯಿಂದ ಆಯೋಜನೆ
- ಆ.27ಕ್ಕೆ ಪಾದಯಾತ್ರೆ: ಕಿಮ್ಮನೆ ಹಾಜರ್
NAMMUR EXPRESS
ತೀರ್ಥಹಳ್ಳಿ: ಮಲೆನಾಡಿನ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕು. ಯಾವುದೇ ಹಳ್ಳಿಗಳಲ್ಲೂ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ. ಇದರಿಂದ ಜನತೆಗೆ ತೊಂದರೆಯಾಗಿದೆ. ಆದರೆ ಸರ್ಕಾರ ಈ ಬಗ್ಗೆ ಗಮನವಹಿಸುತ್ತಿಲ್ಲ. ಸರಕಾರದ ನಿರ್ಲಕ್ಷ್ಯ ಖಂಡಿಸಿ ಆ.27ರ ಶುಕ್ರವಾರ ತೀರ್ಥಹಳ್ಳಿ ತಾಲೂಕಿನ ರಾವೆ ಇಂದ ನಗರದವರೆಗೆ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದೆ.
ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಗರ ಹೋಬಳಿಯಾದ್ಯಂತ ವ್ಯಾಪಕ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕಲ್ಪನೆ ಬರಿ ಮಾತಾಗಿಯೇ ಉಳಿದು ಹೋಗಿದೆ. ಕಳೆದ ಒಂದೂವರೆ ವರ್ಷದಿಂದ ಕರೋನಾ ಕಾಯಿಲೆಯಿಂದಾಗಿ ಶಾಲಾ ಕಾಲೇಜುಗಳು ಮುಚ್ಚಿದ್ದು ಇದೀಗ ಪ್ರಾರಂಭವಾಗುತ್ತಿವೆ. ಆ ಒಂದೂವರೆ ವರ್ಷಗಳ ಕಾಲ ಆನ್ಲೈನ್ ನಲ್ಲಿ ತರಗತಿಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿತ್ತು ಆಗಲೇ ಶುರುವಾಗಿದ್ದು ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದೆ. ಎಲ್ಲೊ ಕಾಡಲ್ಲಿ ಗುಡ್ಡದಲ್ಲಿ ರಸ್ತೆ ಬದಿಯಲ್ಲಿ ಗುಡಿಸಲು ಹಾಕಿಕೊಂಡು ನೆಟ್ವರ್ಕ್ ಹುಡುಕಿ ಪಾಠ ಕೇಳುವ ಸುಸ್ಥಿತಿ ನಮ್ಮ ಮಕ್ಕಳಿಗೆ ಬಂದಿದೆ. ಅಲ್ಲಲ್ಲಿ ಸರ್ಕಾರಿ ಸೌಮ್ಯದ ಬಿಎಸ್ಎನ್ಎಲ್ ಟವರ್ ಗಳು ಇದ್ದರೂ ಸಹ ಅವುಗಳು ಕಳಪೆ ನಿರ್ವಹಣೆಯಲ್ಲಿವೆ, 3ಜಿ ನೆಟ್ವರ್ಕ್ ಗೆ ಮಾತ್ರ ಸೀಮಿತವಾಗಿದೆ.ಈ ಮಾದರಿಯಲ್ಲಿ ಆನ್ಲೈನ್ ಕ್ಲಾಸ್ ಕೇಳುವ ಯಾವ ಅವಕಾಶಗಳೂ ಸಹ ಇಲ್ಲವಾಗಿದೆ ಎಂದು ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಹೊಸ ಹೊಸ ಟವರ್ ನಿರ್ಮಾಣ ಸಾಧ್ಯವಾಗಿಲ್ಲ. ಕನಿಷ್ಟ ಅವುಗಳ ನಿರ್ವಹಣೆ ಮತ್ತು 4ಜಿ ನೆಟ್ವರ್ಕ್ ಆಗಿ ಪರಿವರ್ತಿಸುವ ಜವಾಬ್ದಾರಿ ಸರ್ಕಾರಗಳದ್ದಾಗಿತ್ತು. ಅದರೆ ಸರಕಾರ ಜವಾಬ್ದಾರಿ ಮರೆತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೋನಾ ಬಳಿಕ ಇಂದಿನ ಪರಿಸ್ಥಿತಿಯಲ್ಲಿ ಮಲೆನಾಡಿನ ಬಡ ಮಕ್ಕಳು ಒಂದು ಮೊಬೈಲ್ ಖರೀದಿ ಮಾಡುವುದು ಸಹ ಅಷ್ಟೇ ಕಷ್ಟ. ಎಲ್ಲಿಯೋ ಸಾಲ ಮಾಡಿ ಮೊಬೈಲ್ ತೆಗೆದುಕೊಂಡು ಮಕ್ಕಳ ಭವಿಷ್ಯ ರೂಪಿಸಲು ಪೋಷಕರು ಹರಸಾಹಸ ಪಡುತ್ತಿದ್ದರೆ, ಇತ್ತ ಸರ್ಕಾರವು ಬಿಎಸ್ಎನ್ಎಲ್ ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ.
ಮಲೆನಾಡಿನಲ್ಲಿ ಬಹಳ ದೂರದ ಮನೆಗಳಲ್ಲಿ ವಾಹನಗಳಿರದೆ ಇರುವಾಗ ಯಾರಿಗಾದರೂ ಆರೋಗ್ಯ ಸಮಸ್ಯೆಗಳಾದರೆ ತುರ್ತಾಗಿ ಯಾವ ವಾಹನಗಳನ್ನೂ ಸಂಪರ್ಕಿಸಲಾಗದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಹಲವರು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಆದ್ರೂ ನೆಟ್ವರ್ಕ್ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸದೆ ಜನರ ಇಂತಹ ಪರಿಸ್ಥಿತಿಯನ್ನು ಸರ್ಕಾರ ನೋಡಿಯೂ ಸಹ ನೋಡದಂತೆ ಸುಮ್ಮನಿರುವುದು ವಿಷಾದನೀಯ.
ಮಲೆನಾಡಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಯುವ ಕಾಂಗ್ರೆಸ್ ತೀರ್ಥಹಳ್ಳಿಯ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಹಾಗೂ ರಾಘವೇಂದ್ರ ಪುಟ್ಟೋಡ್ಲು ನೇತೃತ್ವದಲ್ಲಿ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಮಾರ್ಗದರ್ಶನದಲ್ಲಿ ಆ.27ರಂದು ಬೆಳಿಗ್ಗೆ 8:30ಕ್ಕೆ ರಾವೆಯಿಂದ ನಗರದ ನಾಡ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದ್ದು ನಗರ ಹೋಬಳಿಯ ಎಲ್ಲಾ ನಾಗರೀಕರು, ಯುವ ಕಾಂಗ್ರೆಸ್ ಮಿತ್ರರು, ಹಿರಿಯ ಕಾಂಗ್ರೆಸ್ ಎಲ್ಲ ಮುಖಂಡರು, ಕಾರ್ಯಕರ್ತರು ವಿವಿಧ ಘಟಕಗಳ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು,ಜನ ಪ್ರತಿನಿಧಿಗಳು ಭಾಗವಹಿ
ಸಬೇಕಾಗಿ ತೀರ್ಥಹಳ್ಳಿ ಯುವ ಕಾಂಗ್ರೆಸ್ ತೀರ್ಥಹಳ್ಳಿ ಅಧ್ಯಕ್ಷರು ಮತ್ತು ಸದಸ್ಯರು ಮನವಿ ಮಾಡಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.