ಕಾಳು ಮೆಣಸು ಬೆಳೆಗಾರರಿಗೆ ಬೆಲೆ ಏರಿಕೆ ಸಿಹಿ!
– ಕಾಳು ಮೆಣಸು ಬೆಲೆ ಕ್ವಿಂಟಲ್ಗೆ 80 ಸಾವಿರ
– ಜೂನ್ ಆರಂಭದಿಂದಲೂ ಮೆಣಸಿಗೆ ಉತ್ತಮ ಬೆಲೆ
NAMMUR EXPRESS NEWS
ಮಲೆನಾಡು: ಜೂನ್ ಆರಂಭದಿಂದ ಕಾಳು ಮೆಣಸಿನ ಬೆಲೆ ಏರಿಕೆಯತ್ತ ಸಾಗಿದ್ದು, ಮುಂದಿನ ದಿನಗಳಲ್ಲಿಯೂ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ಕೃಷಿಕರಲ್ಲಿ ಸಂತಸ ಮೂಡಿಸಿದೆ. ಕಳೆದ 6-7 ವರ್ಷಗಳಿಂದ 500 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಸೇಲ್ ಆಗುತ್ತಿದ್ದ ಕಾಳು ಮೆಣಸಿನ ದರ ಈಗ 700 ರೂಪಾಯಿಗೆ ಮುಟ್ಟಿದೆ. ಜೂನ್ ಆರಂಭದಿಂದಲೂ ಮೆಣಸಿಗೆ ಉತ್ತಮ ಬೆಲೆ ಸಿಗುತ್ತಿದೆ. 2016-17ರ ಸಾಲಿನಲ್ಲಿ ಒಣಗಿದ ಕಾಳು ಮೆಣಸಿನ ಕೆ.ಜಿಗೆ 750 ರಿಂದ 800 ರೂಪಾಯಿ ದಾಖಲೆ ಬೆಲೆ ಇತ್ತು. ಬಳಿಕ ಬೆಲೆಕುಸಿತ ಉಂಟಾಗಿತ್ತು. ಕಳೆದ ಸಾಲಿನಲ್ಲಿ ಜಾಗತಿಕವಾಗಿ ಕಾಳುಮೆಣಸಿನ ಉತ್ಪಾದನೆ ಕುಸಿದಿದ್ದು, ಭಾರತದ ಮೆಣಸಿಗೆ ಸದ್ಯ ಉತ್ತಮ ಬೆಲೆ ಸಿಗಲು ಕಾರಣವಾಗಿದೆ.
‘ಕಳೆದ ಸಾಲಿನಲ್ಲಿ ಅಕಾಲಿಕ ಬೆಳೆಯಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಇದೀಗ ಬೆಳೆಗಾರರನ್ನು ಅವರನ್ನು ರಕ್ಷಿಸಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಕಾಳುಮೆಣಸನ್ನು ಸಂಗ್ರಹಿಸಿ ಇಟ್ಟವರಿಗೆ ಬಂಪರ್ ಲಾಟರಿ ಹೊಡೆದಂತೆ ಆಗಿದೆ. ಮುಂದಿನ ದಿನಗಳಲ್ಲಿಯೂ ಕಾಳುಮೆಣಸಿನ ಬೆಲೆ ಹೆಚ್ಚಾಗುವ ಸಾಧ್ಯತೆಯಿದ್ದು, ತೋಟಗಾರಿಕಾ ಇಲಾಖೆ ಮತ್ತು ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯಿಂದಲೂ ಕಾಳುಮೆಣಸಿನ ಬೆಳೆ ಅಭಿವೃದ್ಧಿಗೆ ಸಹಾಯ ಮಾಡಲಿದೆ.