ಮಳೆ ಅವಾಂತರ: ಎಲ್ಲೆಲ್ಲಿ ಏನಾಗಿದೆ?
– ಸಾಗರ: ಸಿಗಂದೂರು ರಸ್ತೆಯಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ
– ಶಿವಮೊಗ್ಗ: ಮಳೆಗೆ ಎರಡು ಮನೆಗಳು ಹಾನಿ: ಆತಂಕ
– ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಸ್ತೆಗೆ ಉರುಳಿ ಬಿದ್ದ ಮರ
– ಚಿಕ್ಕಮಗಳೂರು: ಮಳೆಯಲ್ಲಿ ಬೈಕ್ ನಲ್ಲಿ ಹುಚ್ಚಾಟ: ಐವರು ಅರೆಸ್ಟ್
NAMMUR EXPRESS NEWS
ಸಾಗರ : ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಸಾಗರ – ಸಿಗಂದೂರು ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಹುಲ್ಲತ್ತಿ ಗ್ರಾಮದ ಪುನಿತ್ ಮತ್ತು ರವಿ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದ ತಿಳಿದು ಬಂದಿದೆ. ಗಾಯಾಳುಗಳನ್ನು ಕೂಡಲೆ ಸಾಗರದ ಉಪ ವಿಭಾಗೀಯ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಮರ ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಇನ್ನು, ಮರ ಬಿದ್ದಿದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ತೆರವು ಕಾರ್ಯಾಚರಣೆ ಬಳಿಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
– ಶಿವಮೊಗ್ಗ: ಮಳೆಗೆ ಎರಡು ಮನೆಗಳು ಹಾನಿ
ಶಿವಮೊಗ್ಗ: ಶಿವಮೊಗ್ಗದಲ್ಲಿ ಮಳೆಗೆ ಎರಡು ಮನೆಗಳು ಹಾನಿಗೊಲಗಾಗಿವೆ. ಹಾರನಹಳ್ಳಿಯಲ್ಲಿ ನವೀದ್ ಎಂಬುವರ ಮನೆ ಹಾನಿಗೊಳಗಾದರೆ ತೀರ್ಥಹಳ್ಳಿಯಲ್ಲಿ ಮಹಿಳೆಯರ ಮನೆ ಹಾನಿಗೊಳಗಾಗಿದೆ. ತೀರ್ಥಹಳ್ಳಿಯ ವರ್ಣಾರ್ಭಟಕ್ಕೆ ಮನೆಯ ಗೊಡೆ ಕುಸಿದು ಬಿದ್ದಿದೆ. ವಾಸದ ಮನೆಯ ಗೋಡೆಗಳು ಕುಸಿದಿದ್ದು ಮನೆಯ ಮಾಲೀಕರು ಕಂಗಾಲಾಗಿದ್ದಾರೆ. ಕಸಬಾ ಹೋಬಳಿ ಒಡಲಮನೆ ಗ್ರಾಮದ ಹನುಮಮ್ಮ ಅವರ ಮನೆಯ ಗೋಡೆ ಕುಸಿದಿದೆ. ಮಳೆಯ ತಂಡಿಗೆ ಮನೆಗಳು ಉರುಳಲು ಆರಂಭವಾಗಿದೆ. ಪರಿಹಾರಕ್ಕೆ ಸಂತ್ರಸ್ತರು ತಾಲೂಕು ಆಡಳಿತದ ಕಚೇರಿ ಬಾಗಿಲು ತಟ್ಟಲಾರಂಭಿಸಿದ್ದಾರೆ.
– ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಸ್ತೆಗೆ ಉರುಳಿ ಬಿದ್ದ ಮರ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಹೊಸನಗರ ತಾಲೂಕಿನ ಹಳಗುಂದ ಗ್ರಾಮದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ತೀರ್ಥಹಳ್ಳಿ ಮಾಸ್ತಿಕಟ್ಟೆ. ಕುಂದಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಂಗಳೂರು, ಉಡುಪಿ, ಕುಂದಾಪುರ. ಮಣಿಪಾಲ್ ಹೋಗಿ ವಾಹನ ಸವಾರರ ಪ್ರಯಾಣಿಕರ ಪರದಾಡುವಂತಾಗಿದೆ. ರಾತ್ರಿ ಮೂರು ಗಂಟೆಯಿಂದ ರಸ್ತೆ ಬದಿ ಎರಡು ಕಡೆ ಲಾರಿ, ಬಸ್ ಗಳು ನಿಂತುಕೊಂಡಿವೆ. ಆಗುಂಬೆಯಲ್ಲಿಭಾರಿ ವಾಹನಗಳ ನಿಷೇಧದ ಬೆನ್ಬಲ್ಲೇ ಈ ಮಾರ್ಗದ ಮೂಲಕ ಮಂಗಳೂರು ತಲುಪಲು ಬದಲೀವ್ಯವಸ್ಥೆಯಾಗಿತ್ತು. ಈ ಬದಲೀ ವ್ಯವಸ್ಥೆಯೂ ಮಳೆ ಗಾಳಿಯಿಂದಾಗಿ ಅವ್ಯವಸ್ಥೆಗೊಂಡಿದೆ. ಬೆಳಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮರ ತೆರವುಗಳಿಸಿದ್ದಾರೆ. ಸುಮಾರು ಎರಡು ಮೂರು ಘಂಟೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಸಂಚಾರ ಸ್ಥಗಿತ ಹಿನ್ನಲೆ ವಾಹನದಲ್ಲಿಯೇ ಕೆಲ ಕಾಲ ಪ್ರಯಾಣಿಕರು ಕಳೆಯವಂತಾಗಿದೆ. ಅವ್ಯವಸ್ಥೆಗೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
– ಚಿಕ್ಕಮಗಳೂರು : ಸಾರ್ವಜನಿಕರ ರಸ್ತೆಯಲ್ಲಿ ಬೈಕ್ ನಲ್ಲಿ ಹುಚ್ಚಾಟ ನಡೆಸುತ್ತಿದ ಐವರನ್ನು ಬಂಧಿಸಿದ ಪೊಲೀಸರು.
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರವಾಸಿ ತಾಣವಾದ ರಾಣಿಝರಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ನಲ್ಲಿ ಹುಚ್ಚಾಟ ಮಾಡಿದ ಯುವಕರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ವಾಸಿಗಳಾದ ಗಣೇಶ್ ಬಂಡಾರಿ, ರೋಹಿತ್, ಪ್ರವೀಣ್, ಗಣೇಶ್, ಗಿರೀಶ್, ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಪ್ರವಾಸಿ ತಾಣ ರಾಣಿಝರಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಬೈಕ್ ಸವಾರರು ವೀಲಿಂಗ್ ಮಾಡಿ ಸಾರ್ವಜನಿಕ ಕಿರಿಕಿರಿ ಉಂಟು ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿತ್ತು. ತೆರಳುವ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ನಲ್ಲಿ ಉಚ್ಚಾಟ ನಡೆಸಿದ ಇವರು ಯುವಕರು ಪೊಲೀಸರು ಬಂಧಿಸಿದ್ದಾರೆ ಯುವಕರು ಬಯಸಿದ್ದ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.