ಮರೆಯಾದ ಮುರುಗನ ಕಾಯಿ!
– ಅನೇಕರಿಗೆ ಬದುಕು ನೀಡಿದ್ದ ಕಾಡು ಕಾಯಿ
– ಎಣ್ಣೆಗೂ ಸೈ.. ಹುಳಿಗೂ ಸೈ.. ಕೈ ಕಾಸಿಗೂ ಸೈ
– ದುಡ್ಡಿಗಾಗಿ ಮರಗಳ ನಾಶ: ಅಳಿವಿನತ್ತ ಮರ!
NAMMUR EXPRESS NEWS
ಮಲೆನಾಡು: ಮಳೆಗಾಲದಲ್ಲಿ ಮಲೆನಾಡಿನಲ್ಲಿ ಮಳೆ ಹಾಗೂ ಶೀತ ವಾತಾವರಣವಿರುತ್ತದೆ ಮಳೆಗಾಲದಲ್ಲಿ ಹಲಸಿನಸ್ವಾಳೆ. ಅಮಟೆ ಕಾಯಿ ,ಮಾವಿನ ಕಾಯಿ, ಕಳಲೆ ,ಕೆಸ. ಕೆಸುವಿನಗಡ್ಡೆ, ಸಾಮ್ರಾಣಿಗಡ್ಡೆ,ವಾಟೆಹುಳಿ ,ಪುರ್ನಪುಳಿ,ಜೀರಕನಹುಳಿ,
ಮುರುಗನಹುಳಿ, ಕಾಕಿ ಸೊಪ್ಪು, ಬ್ರಾಹ್ಮೀ,ಹೂನಗಾನೆ ಸೊಪ್ಪುಗಳನ್ನು ತಿನ್ನುಲು ಪ್ರಶಸ್ತ ಸಮಯ ಅದರಲ್ಲಿ ಸಾಂಬಾರು ಪದಾರ್ಥವಾಗಿ ಬಳಸುವ ಮುರುಗನ ಹುಳಿಯೂ ಒಂದು. ಆದರೆ ಇದು ಇತ್ತಿಚಿಗೆ ಕಣ್ಮರೆಯಾಗುತ್ತಾ ಬಂದಿದೆ
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಮುರುಗನ ಹಣ್ಣಿನ ವೈಜ್ಞಾನಿಕ ಹೆಸರು’ ಗಾರ್ಸಿನಿಯ ಕಾಂಬೋಜಿಯ’. ಇದನ್ನು ಪ್ರಾದೇಶಿಕವಾಗಿ ಮುರುಗನ ಹುಳಿ,ಮಲಬಾರ್ ಹುಣಸೇ ಹಣ್ಣು,ಕುಡಂಪುಳಿ,ಉಪ್ಪೇಜ್,(ಉಪ್ಪಾಗೆ),ಕಾಚಂಪುಳಿ ಎಂದೆಲ್ಲಾ ಕರೆಯುವರು.
ತಿಳಿ ಹಸಿರು ಮತ್ತು ಹಳದಿ ಬಣ್ಣದಲ್ಲಿರುವ ಈ ಹಣ್ಣು ಸಿಹಿಗುಂಬಳ ಆಕೃತಿಯಲ್ಲಿರುವ ಚಿಕ್ಕಹಣ್ಣು ಜೂನ್-ಜುಲೈನಲ್ಲಿ ಹಣ್ಣಾಗುತ್ತದೆ ರಸವನ್ನು ಹಿಂಡಿ ತೆಗೆದು ಕುದಿಸಿಡುತ್ತಾರೆ. ಮಲೆನಾಡಿನಲ್ಲಿ ಮತ್ತು ಕೇರಳದಲ್ಲಿ ಮೀನು ಸಾರಿಗೆ ಹೆಚ್ಚಾಗಿ ಬಳಸುತ್ತಾರೆ. ಸಿಪ್ಪೆಯನ್ನು ಬಿದಿರಿನಿಂದ ಹೆಣೆದ ತಟ್ಟಿಗಳ ಮೇಲೆ ಒಣಗಿಸಿ ಇಡುತ್ತಾರೆ ಸಿಪ್ಪೆಯು ಸಾಂಬಾರ್ ಮಾಡಲು ಬಳಸಲಾಗುವುದು. ಬೀಜದಿಂದ ಬರುವ ಎಣ್ಣೆ ಅಡುಗೆ ಮಾಡಲು ಬಳಸುತ್ತಾರೆ. ಇದರ ಹುಳಿ ಮತ್ತು ಹಣ್ಣಿನ ಒಣಗಿಸಿದ ಸಿಪ್ಪೆಗೆ ಬಹಳ ಬೇಡಿಕೆಯಿದೆ. ಬಹುಪಯೋಗಿ ಸಸ್ಯಗಳಲ್ಲಿ ಇದು ಸಹ ಒಂದು. ಮಳೆಗಾಲದಲ್ಲಿ ಜನರಿಗೆ ಆಹಾರದ ಉತ್ಪನ್ನವಾಗಿಯೂ ಆದಾಯದ ಮೂಲವೂ ಆಗಿದೆ. ಅನೇಕರು ಇದರಿಂದಲೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಮುರುಗನ ಹಣ್ಣು ಮಧ್ಯಮ ವರ್ಗದ ಜನರ ಆಶಾಕಿರಣ. ಒಣಸಿದ ಮುರುನ ಹುಳಿ ಕೆಜಿಗೆ 50 ರೂ ಇದ್ದ ಈ ಸಸ್ಯ ಈಗ ಅವನತಿ ಹತ್ತಿರದಲ್ಲಿದೆ.
ದುಡ್ಡಿಗಾಗಿ ಮರಗಳ ನಾಶ: ಅಳಿವಿನತ್ತ ಮರ!
ಇಷ್ಟೆಲ್ಲಾ ಉಪಯೋಗಕಾರಿಯಾದ ಸಸ್ಯ ಈಗ ಮನುಷ್ಯನ ಅತಿಯಾದ ಚಟುವಟಿಕೆಗಳಿಂದ ಕಣ್ಮರೆಯಾಗುತ್ತಿದೆ. ಕಾಡಿನಲ್ಲಿ ಸಿಗುತ್ತಿದ್ದ ತಾಜಾ ಹುಳಿ ಈಗ ಆನ್ಲೈನ್ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವಂತಾಗಿದೆ ಎಲೆಮರೆ ಕಾಯಿಯಂತಿರುವ ಇಂತಹ ಔಷದೀಯ ಸಸ್ಯಗಳ ಬಗ್ಗೆ ಮುಂದಿನ ಪೀಳಿಗೆಯವರಿಗೂ ತಿಳಿಸಿ ಅವುಗಳನ್ನು ಕಾಪಾಡುವುದು ಸಹ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಮುರುಗನ ಹುಳಿಯ ಉಪಯೋಗಗಳು ಇವೆ..
-ಭಾರತೀಯ ಆರ್ಯ ವೇದ ಪದ್ದತಿಯಲ್ಲಿ ಹುಳಿ ರುಚಿಯನ್ನು ಹೊಂದಿರುವ ಈ ಹಣ್ಣು ಜೀರ್ಣಕಾರಿ ಅಸ್ವಸ್ಥತೆಗಳಿಗೆ ಸಹಾಯಕಾರಿ ಎಂದು ಹೇಳಿದೆ
-ದೇಹದಲ್ಲಿರುವ ಕೊಲೆಸ್ಟ್ರಾಲನ್ನು ನಿಯಂತ್ರಣ ಮಾಡುತ್ತದೆ
-ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯಲು ಸಹ ಕಾರಿಯಾಗಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
– ಯಕೃತ್ ಮತ್ತು ಹೃದಯವನ್ನು ಕಾಯಿಲೆಗಳಿಂದ ಕಾಪಾಡುತ್ತದೆ
-ಸಂಧಿವಾತದಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ
ನೀವೂ ಇದನ್ನು ಬಳಸಿದ್ರಾ… ಖರ್ಚಿಗೆ ಕಾಸು ಮಾಡಿಕೊಂಡಿದ್ರಾ?
ಕಾಮೆಂಟ್ ಮಾಡಿ