ಟಾಪ್ 3 ನ್ಯೂಸ್ ಮಲ್ನಾಡ್
-ಚಿಕ್ಕಮಗಳೂರು: ಕರೆಂಟ್ ಶಾಕ್ಗೆ ಪ್ರಾಣ ಬಿಟ್ಟ ರೈತ..!
– ಶಿವಮೊಗ್ಗ: ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು
– ಸಾಗರ: ಕಾಡು ಹಂದಿ ದಾಳಿಯಿಂದ ರೈತರೊಬ್ಬರು ತೀವ್ರ ಗಾಯ
NAMMUR EXPRESS NEWS
ಶಿವಮೊಗ್ಗ: ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳ್ಳನೋರ್ವ ನಕಲಿ ಕೀ ಬಳಸಿ ಕೊಂಡೊಯ್ದ ಘಟನೆ ಶಿವಮೊಗ್ಗ ನಗರದ ಬಸ್ ನಿಲ್ದಾಣ ಸಮೀಪದ ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ಬೆಳಿಗ್ಗೆ ನಡೆದಿದೆ. ಕಳುವಾದ ಬೈಕ್ ಕುಮಾರಸ್ವಾಮಿ ರಾಮಚಂದ್ರ ಎಂಬುವರಿಗೆ ಸೇರಿದ್ದಾಗಿದೆ. ಸದರಿ ಕಳ್ಳತನ ಕೃತ್ಯವು ಮನೆಯ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮರಾ ಗಳಲ್ಲಿ ಸೆರೆಯಾಗಿದೆ. ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಸ್ಟೆಂಡರ್ ಪ್ಲಸ್ ಬೈಕ್ ನ್ನು ಕಳವು ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆನೆ ಎಂದು ಕುಮಾರಸ್ವಾಮಿ ರಾಮಚಂದ್ರ ಅವರು ತಿಳಿಸಿದ್ದಾರೆ. ಮುಂಜಾನೆ ಸರಿಸಮಾರು 4 ಗಂಟೆ ವೇಳೆಗೆ ಕುಮಾರಸ್ವಾಮಿ ರಾಮಚಂದ್ರ ಅವರ ಮನೆ ಬಳಿ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ದ ಕಳ್ಳ ಆಗಮಿಸಿದ್ದು ಕ್ಷಣ ಮಾತ್ರದಲ್ಲಿಯೇ ನಕಲಿ ಕೀ ಬಳಸಿ ಬೈಕ್ ನ ಹ್ಯಾಂಡ್ ಲಾಕ್ ತೆರೆದಿದ್ದಾನೆ. ನಂತರ ಶಬ್ದವಾಗದಂತೆ ಸ್ವಲ್ಪ ದೂರದವರೆಗೆ ಬೈಕ್ ತಳ್ಳಿಕೊಂಡು ಹೋಗಿದ ಕಳ್ಳ, ನಂತರ ಬೈಕ್ ಆನ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಕುಮಾರಸ್ವಾಮಿ ರಾಮಚಂದ್ರ ಅವರು ಬೆಳಿಗ್ಗೆ ಎದ್ದು ಮನೆ ಹೊರಭಾಗ ಆಗಮಿಸಿದಾಗ ಬೈಕ್ ಇಲ್ಲದಿರುವುದು ಗೊತ್ತಾಗಿದೆ. ನಂತರ ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿ ವೀಕ್ಷಿಸಿದಾಗ ಬೈಕ್ ಕಳುವಾಗಿರುವುದು ಬೆಳಕಿಗೆ ಬಂದಿದೆ.
ಸಾಗರ : ಕಾಡು ಹಂದಿ ದಾಳಿಯಿಂದ ರೈತರೊಬ್ಬರು ತೀವ್ರವಾಗಿ ಗಾಯ
ಸಾಗರ: ತಾಲೂಕಿನ ತುಮರಿಯಲ್ಲಿ ಹಂದಿ ದಾಳಿಯಿಂದ ರೈತರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಇಲ್ಲಿನ ಕಟ್ಟಿನಕಾರು ಗ್ರಾಮದ ಕೂಡೂರಿನ ಬಳಿ ಈ ಘಟನೆ ನಡೆದಿದೆ. ಚೌಡಪ್ಪ (52) ಗಾಯಗೊಂಡವರು, ತಮ್ಮ ಸೊಪ್ಪಿನ ಬೆಟ್ಟದಲ್ಲಿ ಕೊಟ್ಟಿಗೆಗೆ ಸೊಪ್ಪು ತರಲು ಹೋದ ವೇಳೆ ಹಂದಿಯೊಂದು ಇವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಅಲ್ಲದೆ ತೊಡೆ ಭಾಗಕ್ಕೆ ಕಚ್ಚಿ ಗಾಯಗೊಳಸಿದೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಚೌಡಪ್ಪರನ್ನು ನಿಟ್ಟೂರು ಖಾಸಗಿ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಲಾಗಿದೆ.
– ಚಿಕ್ಕಮಗಳೂರು : ಕರೆಂಟ್ ಶಾಕ್ಗೆ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ರೈತ
ಚಿಕ್ಕಮಗಳೂರಲ್ಲಿ ಕರೆಂಟ್ ಶಾಕ್ಗೆ ರೈತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ತೋಟಕ್ಕೆ ನೀರು ಹಾಯಿಸಲು ಹೋದಾಗ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ರೈತ ದಿನೇಶ್ (34) ಎಂಬುವವರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿ ಮೋಟರ್ ಆನ್ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.