ಲಿವರ್ ದಾನ ಮಾಡಿ ಜೀವ ಕಳೆದುಕೊಂಡ ಉಪನ್ಯಾಸಕಿ!
– ಮಂಗಳೂರಲ್ಲಿ ಘಟನೆ: ಆರೋಗ್ಯದಿಂದಿದ್ದ ಮಹಿಳೆ ಸಾವು
– ಅರ್ಚನಾ ಅವರ ಸಾವಿಗೆ ಎಲ್ಲೆಡೆ ಸಂತಾಪ
NAMMUR EXPRESS NEWS
ಮಂಗಳೂರು: ತನ್ನ ಸಂಬಂಧಿಯೋರ್ವರಿಗೆ ಲಿವರ್ ದಾನ ಮಾಡಿದ್ದ ಉಪನ್ಯಾಸಕಿ, ಸಮಾಜ ಸೇವಕಿ, ಅರ್ಚನಾ ಕಾಮತ್ (33) ಅವರು ದಿಢೀರ್ ಅಸ್ವಸ್ಥಗೊಂಡು ನಿಧನರಾದ ಘಟನೆ ಮಂಗಳೂರಲ್ಲಿ ನಡೆದಿದೆ.
ತನ್ನ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್ ಕಸಿ ಮಾಡಬೇಕಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ. ಅರ್ಚನಾ ಅವರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು ಹಾಗೂ ಅವರು ಲಿವರ್ ದಾನಕ್ಕೆ ಒಪ್ಪಿದ್ದರು. ಅದರಂತೆ 12 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅರ್ಚನಾ ಅವರ ಲಿವರ್ನ ಸ್ವಲ್ಪ ಭಾಗವನ್ನು ಮಹಿಳೆಗೆ ಕಸಿ ಮಾಡಲಾಗಿತ್ತು. ಆರೋಗ್ಯದಿಂದಿದ್ದ ಅರ್ಚನಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಅರ್ಚನಾ ದಿಢೀರ್ ಅಸ್ವಸ್ಥಗೊಂಡಿದ್ದು, ಸೆ.15ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಇದೀಗ ಅವರ ಆಪ್ತ ವಲಯದಲ್ಲಿ ಭಾರೀ ನವು ತರಿಿದೆ. ಿವರ ಕಸಿ ಮಾಡಿಸಿಕೊಂಡಿರುವ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಉಪನ್ಯಾಸಕಿ, ಸಮಾಜ ಸೇವಕಿಯಾಗಿ ಸೇವೆ
ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅವರು ಬಳಿಕ ನಗರದ ಹೊರವಲಯದ ಮಣೇಲ್ ಶ್ರೀನಿವಾಸ ನಾಯಕ್ ಎಂಬಿಎ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.ಅರ್ಚನಾ ಅವರು ಪತಿ ಸಿಎ ಚೇತನ್ ಕುಮಾರ್ ಹಾಗೂ ನಾಲ್ಕು ವರ್ಷದ ಪುತ್ರನನ್ನು ಅಗಲಿದ್ದಾರೆ. ಅರ್ಚನಾ ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವರ ಅಗಲಿಕೆ ಎಲ್ಲರಿಗೂ ಅತೀವ ದುಃಖ ತರಿಸಿದೆ.