ಬೆಳ್ತಂಗಡಿಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!
– ಎಸ್ಎಸ್ಎಲ್ಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಬೇಸರ
– 4 ದಿನದ ಹಿಂದೆ ಇಲಿ ಪಾಷಣ ಸೇವಿಸಿದ್ದ ಬಾಲಕಿ
– ಕಾಸರಗೋಡು : ಪುರುಷ, ಮಹಿಳೆ ಮೃತದೇಹ ಪತ್ತೆ: ಕೊಲೆ?
NAMMUR EXPRESS NEWS
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಕಲ್ಲಾಜೆಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯು ಇಲಿ ಪಾಷಣ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು ವೆಂಕಟೇಶ್ ಭಂಡಾರಿ & ಸುಮಿತ್ರಾ ದಂಪತಿ ಪುತ್ರಿ ಅನಿತಾ(17) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯ ವಾಣಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಆಕೆಯು 4 ದಿನದ ಹಿಂದೆ ಇಲಿ ಪಾಷಣ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಜೀವನ್ಮರಣ ಹೋರಾಟ ನಡೆಸಿದ್ದ ಅನಿತಾ ಬುಧವಾರ ಮೃತಪಟ್ಟಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ಬಂದಿದ್ದು, ಮನೆಯವರಿಗೆ ತೊಂದರೆ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಡೆತ್ನೋಟ್ ಬರೆದಿದ್ದಾಳೆ. ಆಕೆಯ ಗೆಳತಿ ತೃಷಾ ಕೂಡ 6 ತಿಂಗಳ ಹಿಂದೆ ಸುಸೈಡ್ ಮಾಡಿದ್ದಳು.
ತೃಷಾ ಧೃಮಸ್ಥಳದ ಶಾಲೆಯಲ್ಲಿ ಓದುತ್ತಿದ್ದು, ಆರು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಳು. ಇದರಿಂದ ಅನಿತಾ ಕೂಡ ಮಾನಸಿಕವಾಗಿ ಕುಗ್ಗಿದ್ದಳು. ತೃಷಾ ಸಾವಿನಿಂದ ಬೇಸರಗೊಂಡು ಅನಿತಾ ಕೂಡ ಅದೇರೀತಿ ಆತ್ಮಹತ್ಯೆ ಮಾಡುವ ಕಠಿಣ ನಿರ್ಧಾರ ಮಾಡಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಮೃತ ಬಾಲಕಿಯರು ಒಂದೇ ಗ್ರಾಮದವರು ಎನ್ನಲಾಗಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಪುರುಷ ಹಾಗೂ ಮಹಿಳೆಯ ಮೃತದೇಹ ಪತ್ತೆ
ಕಾಸರಗೋಡು : ಪುರುಷ ಮತ್ತು ಮಹಿಳೆಯ ಮೃತದೇಹ ವಸತಿಗೃಹ ದ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ನೆಲ್ಲಿಕಟ್ಟೆಯ ಫಾತಿಮಾ (42) ಹಾಗೂ ಚೆಂಗಳ ರಹಮತ್ ನಗರದ ಕೆ . ಹುಸೈನಾರ್ ( ೩೩) ಮೃತಪಟ್ಟವರು.
ಮಹಿಳೆಯನ್ನು ಕೊಲೆಗೈದು ಹುಸೈನಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕೆ . ಹುಸೈನಾರ್ (33) ರವರ ಮೃತ ದೇಹ ಸೋಮವಾರ ಸಂಜೆ ನೇಣು ಬಿಗಿದು ಮೃತ ಪಟ್ಟ ಕಾಸರಗೋಡು ನಗರದ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ೨ ದಿನಗಳ ಹಿಂದೆ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ .
ಕಾಸರಗೋಡು ಹಾಗೂ ಹೊಸದುರ್ಗ ಠಾಣಾ ಪೊಲೀಸರು ಮಹಜರು ನಡೆಸಿದ್ದು , ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗರದಲ್ಲಿರಿಸಲಾಗಿದೆ. ಫಾತಿಮಾ ತನ್ನ ಪತಿ ಮತ್ತು ಮಕ್ಕಳನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಹುಸೈನಾರ್ ಜತೆ ವಾಸವಾಗಿದ್ದಳು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.