ಚಡ್ಡಿ ಗ್ಯಾಂಗ್ ದರೋಡೆಕೋರರ ಮೇಲೆ ಫೈರಿಂಗ್!
– ಪೊಲೀಸರ ಕೈಯಿಂದ ಎಸ್ಕೇಪ್ ಆಗಲು ಆರೋಪಿಗಳ ಯತ್ನ
– ಮಂಗಳೂರಲ್ಲಿ ನಡೆದ ಘಟನೆ: ಏನಿದು ಚಡ್ಡಿ ಗ್ಯಾಂಗ್…?
NAMMUR EXPRESS NEWS
ಮಂಗಳೂರು: ಮಂಗಳೂರು ನಗರದಲ್ಲಿ ದರೋಡೆ ನಡೆಸಿ ಬಂಧನದಲ್ಲಿರುವ ಮಧ್ಯಪ್ರದೇಶದ ಚಡ್ಡಿ ಗ್ಯಾಂಗ್ನ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಶೂಟೌಟ್ ಮಾಡಿದ್ದಾರೆ.
ಮಂಗಳೂರಿನ ಉರ್ವಾ ಬಳಿ ನಿನ್ನೆ ವೃದ್ಧ ದಂಪತಿ ಮನೆಯಲ್ಲಿ ದರೋಡೆ ನಡೆಸಿ ಪರಾರಿಯಾಗಿದ್ದ ನಾಲ್ವರು ಚಡ್ಡಿ ಗ್ಯಾಂಗ್ನ ಆರೋಫಿಗಳನ್ನು ಪೊಲೀಸರು ಸಕಲೇಶಪುರದ ಬಳಿ ಬಂಧಿಸಿದ್ದರು. ಬಳಿಕ ನಗರಕ್ಕೆ ಕರೆತಂದಿದ್ದು, ಆರೋಪಿಗಳು ಸಂಚರಿಸಿದ್ದ ಕಡೆ ಸ್ಥಳ ಮಹಜರಿಗೆ ಮುಲ್ಕಿಯತ್ತ ಕರೆದೊಯ್ಯಬೇಕಾದರೆ ಇಬ್ಬರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವುದಕ್ಕೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ತಮ್ಮ ಆತ್ಮರಕ್ಷಣೆಯನ್ನು ಮಾಡಿಕೊಂಡಿದ್ದಾರೆ. ಇಬ್ಬರನ್ನು ಕೂಡ ಸದ್ಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.