ಕೊಂಕಣಿ ಚಲನ ಚಿತ್ರ ‘ಪಯಣ್’ ಸದ್ದು!
– ಸೆ.20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜು
– ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆ
NAMMUR EXPRESS NEWS
ಮಂಗಳೂರು: ಸಂಗೀತ್ ಘರ್ ಮಂಗಳೂರು ಬ್ಯಾನರ್ನಡಿ ತಯಾರಾದ ಕೊಂಕಣಿ ಚಲನ ಚಿತ್ರ ‘ಪಯಣ್’ (ಪ್ರಯಾಣ) ಈಗ
ಸೆ.20ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಕುಂದಾಪುರ ಹಾಗೂ ಪುತ್ತೂರಿನಲ್ಲಿ ಏಕಕಾಲದಲ್ಲಿ ಪಯಣ್ ಬಿಡುಗಡೆಯಾಗಲಿದ್ದು, ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗುವ ದಿನಾಂಕಗಳೂ ನಿಗದಿಯಾಗಿವೆ.
ಈಗಾಗಲೇ ಮಂಗಳೂರು ಮತ್ತು ಪುತ್ತೂರಿನಲ್ಲಿ ಪ್ರೀಮಿಯರ್ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ ಮತ್ತು ವೀಕ್ಷಕರಿಂದ ಕೊಂಕಣಿ ಚಲನಚಿತ್ರ ದ ಇತಿಹಾಸದಲ್ಲಿ ‘ಪಯಣ್’ ಒಂದು ಮೈಲಿಗಲ್ು ಎಂದು ಳಲಗುತ್ತಿದೆ.
ನೀಟಾ ಜೋನ್ ಪೆರಿಸ್ ಈ ಚಿತ್ರದ ನಿರ್ಮಾಪಕರು ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್ ಪಿರೇ ರಾ ಬರೆದಿದ್ದು, ಮೆಲ್ವಿನ್ ಪೆರಿಸ್ ಸಾಹಿತ್ಯ ಹಾಗೂ ರೋಶನ್ ಡಿ’ಸೋಜಾ ಆಂಜೆಲೊರ್ ಸಂಗೀತ ನಿರ್ದೇಶನ ನೀಡಿದ್ದಾರೆ.
ಪುತ್ತೂರಿನ ಯುವ ಪ್ರತಿಭೆ ಬ್ರಾಯನ್ ಸಿಕ್ವೆರಾ ನಾಯಕರಾಗಿ ನಟಿಸಿದ್ದಾರೆ. ಹಾಗೂ ಜಾಸ್ಮಿನ್ ಡಿ’ಸೋಜಾ, ಕೇಟ್ ಪಿರೇರಾ ಮತ್ತು ಶೈನಾ ಡಿ’ಸೋಜಾ ನಾಯಕಿಯಾಗಿ ನಟಿಸಿದ್ದಾರೆ.ನಟರಾದ ರೈನಲ್ ಸಿಕ್ವೆರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ, ಮೆಲಿಶಾ
ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ. ಛಾಯಾಗ್ರಹಣ ವಿ. ರಾಮಾಂಜನೇಯ ಮತ್ತು ಸಂಕಲನ ಮೆವಿನ್ ಜೋಯೆಲ್ ಪಿಂಟೊ ಶಿರ್ತಾಡಿ ಇವರದ್ದು. ಮಂಗಳೂರು, ಉಡುಪಿ . ಸುತ್ತಮುತ್ತ ಚಿತ್ರೀಕರಣ ನಡೆದಿದೆ.