ಮುಡಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 700 ಕೋಟಿ ಅಕ್ರಮ?!
– ಮತ್ತೊಂದು ಸ್ಫೋಟಕ ಅಂಶ ಬಹಿರಂಗ: 1095 ಸೈಟ್ಗಳು ಅಕ್ರಮ
– ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಕೂಡ ಸೈಟ್ ಹಂಚಿಕೆ?
NAMMUR EXPRESS NEWS
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಂತಹ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಫೋಟಕವಾದ ಅಂಶ ಬಹಿರಂಗವಾಗಿದ್ದು, ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಇಡಿ ಅಧಿಕಾರಿಗಳು ಮುಡಾದಲ್ಲಿ ಸುಮಾರು 700 ಕೋಟಿ ರೂಪಾಯಿಗೂ ಅಧಿಕ ಅಕ್ರಮ ನಡೆದಿದೆ ಎಂದು ತನಿಖೆ ವೇಳೆ ದೃಢಪಟ್ಟಿದೆ. ಹೌದು. ಮುಡಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 700 ಕೋಟಿಗೂ ಅಧಿಕ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. 1095 ಸೈಟ್ಗಳು ಅಕ್ರಮ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಬೇನಾಮಿ ವ್ಯಕ್ತಿಗಳ ಹೆಸರ ಸೈಟ್ ಹಂಚಿಕೆ ಆಗಿರುವುದು ಇದೀಗ ಇದೆ. ಬೇನಾಮಿ ಹಾಗೂ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಕೂಡ ಸೈಟ್ ಹಂಚಿಕೆಯಾಗಿದೆ. ಸಿದ್ದರಾಮಯ್ಯ ಪತ್ನಿಗೂ 14 ನಿವೇಶನಗಳು ಹಂಚಿಕೆಯಾಗಿದ್ದವು.
ಪತ್ನಿ ಪಾರ್ವತಿ ಹೆಸರಿನಲ್ಲಿ 14 ಇದರಲ್ಲಿ ಇದ್ದು, ಗಣ್ಯರಿಂದ ನಿವೇಶನ ಹಂಚಿಕೆಗೆ ಪ್ರಭಾವ ಬೀರಿರುವುದು ಬೆಳಕಿಗೆ ಬಂದಿದೆ.
1,945ಕ್ಕೂ ಹೆಚ್ಚು ಮುಡಾದ ಹಾಲೋಗ್ರಾಮ್ ಬಾಂಡ್ಗಳು ನಾಪತ್ತೆಯಾಗಿವೆ. ಅಧಿಕಾರಿಗಳು ಅಕ್ರಮ ಎಸಗಿರುವುದು ಕಂಡುಬಂದಿದೆ. ಇದರ ತನಿಖೆಗೆ ಇಡಿ ಅಧಿಕಾರಿಗಳಿಂದ ಲೋಕಾಯುಕ್ತಕ್ಕೆ ಮನವಿ ಮಾಡಿರುವುದು ವರದಿ ನೀಡಿ ತನಿಖೆ ಮಾಡುವಂತೆ ಲೋಕಾಯುಕ್ತರಿಗೆ ಮನವಿ ಮಾಡಲಾಗಿದೆ.