ಅಡಿಕೆ ಕಾನ್ಸರ್ಕಾರಕವಲ್ಲ: ಶಿವರಾಗ್ ಸಿಂಗ್ ಚೌವ್ಹಾಣ್
– ಶೀಘ್ರವೇ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಕೆ
– ಅಡಿಕೆ ಆಮದು ತಗ್ಗಿಸಲು ಕ್ರಮ
NAMMUR EXPRESS NEWS
ಸಾಗರ: ನಗರದ ಸಂತೆ ಮೈದಾನದಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಶನಿವಾರ ಹಮ್ಮಿಕೊಂಡಿದ್ದ ಅಡಕೆ ಬೆಳೆಗಾರರ ಸಮಾವೇಶವನ್ನು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಉದ್ಘಾಟಿಸಿದರು. ಅಡಕೆ ಕ್ಯಾನ್ಸ್ರ್ಕಾರಕ ಅಲ್ಲ ಎಂಬ ಸಂಶೋಧನಾ ವರದಿಯನ್ನು ಶೀಘ್ರವೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಸಚಿವ ಭರವಸೆ ನೀಡಿದರು. “ಅಡಕೆ ಪುರಾತನ ಕಾಲದಿಂದಲೂ ಬಳಕೆಯಲ್ಲಿದೆ. ಆದರೆ, ಅದು ಕ್ಯಾನ್ಸರ್ಕಾರಕ ಎಂಬ ಮಾತುಗಳು ಇತ್ತೀಚೆಗೆ ಕೇಳಿಬರುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯಲ್ಲೂ ಅದು ಪ್ರಸ್ತಾಪವಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಪ್ರಕರಣವಿದೆ. ಇದನ್ನೆಲ್ಲ ಮನಗಂಡ ಕೇಂದ್ರ ಸರಕಾರ, ದೇಶದ ಅತಿ ಉನ್ನತ 16 ಸಂಶೋಧನಾ ಕೇಂದ್ರಗಳಲ್ಲಿ ಅಡಕೆ ಬಗ್ಗೆ ಸಂಶೋಧನೆ ಮಾಡಿಸುತ್ತಿದೆ. ಸಂಶೋಧನಾ ಕೇಂದ್ರಗಳ ಬಗ್ಗೆಯೂ ಸರಕಾರ ತೀವ್ರ ಗಮನಹರಿಸಿದೆ. ಇವುಗಳಿಂದ ಸಕಾರಾತ್ಮಕ ವರದಿಗಳು ಬರುವುದು ಖಚಿತ. ಬಂದ ತಕ್ಷಣವೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು,” ಎಂದಿದ್ದಾರೆ.
ಅಡಿಕೆ ಆಮದು ತಗ್ಗಿಸಲು ಕ್ರಮ..!!?
* ಅಡಿಕೆ ಆಮದು ತಗ್ಗಿಸುವ ದೃಷ್ಠಿಯಿಂದ ಈ ಹಿಂದಿದ್ದ ಕನಿಷ್ಠ ಆಮದು ದರವನ್ನು 251 ರೂ.ಗಳಿಂದ 351ರೂ.ಗೆ ಹೆಚ್ಚು ಮಾಡಿದ್ದೇವೆ. ಅಲ್ಲದೆ, ಅಡಕೆಯ ಅನಧಿಕೃತ ಆಮದಿನಿಂದಾಗಿ ದೇಸಿ ಮಾರುಕಟ್ಟೆ ಮೇಲೆ ಬೀರುತ್ತಿರುವುದು ದುಷ್ಪರಿಣಾಮ ಸರಕಾರದ ಗಮನದಲ್ಲಿದೆ. ಪರೋಕ್ಷ ತೆರಿಗೆ ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ (ಸಿಬಿಐಸಿ)ಗೆ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ.
• ಅಡಕೆಯ ಪರ್ಯಾಯ ಬಳಕೆ ಕುರಿತು ಇನ್ನಷ್ಟು ಸಂಶೋಧನೆ ಆಗಬೇಕಿದೆ. ಮುಂಬರುವ ಬಜೆಟ್ ನಲ್ಲಿ ಇದಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡಲಾಗುವುದು.
• ಅಡಕೆ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಬೇಕಿದೆ.