ಶಿವಮೊಗ್ಗ ಕೃಷಿ ಮೇಳ ಸೂಪರ್: ಮಳೆ ಅಡ್ಡಿ!
– ಕೃಷಿ, ಕೃಷಿ ಸಲಕರಣೆಗಳ ಅನಾವರಣ: ಸಂಗೀತದ ಝಲಕ್
– ಮಳೆ ಅಡ್ಡಿ: ಗಮನ ಸೆಳೆದ ಅಚ್ಚು ಕಟ್ಟಿನ ಆಯೋಜನೆ
NAMMUR EXPRESS NEWS
ಶಿವಮೊಗ್ಗ: ನವುಲೆಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಅಚ್ಚು ಕಟ್ಟಿನ ಆಯೋಜನೆ ಮಾಡಿದ್ದು ಮಳೆ ಅಡ್ಡಿ ಜನರ ಆಸಕ್ತಿಗೆ ತಣ್ಣೀರು ಎರಚಿತು. ಅ.18ರಿಂದ 21ರವರೆಗೆ ನಡೆದ ಕೃಷಿ ಮೇಳ ಮಳೆ ಅಡ್ಡಿ ನಡುವೆ ಕೃಷಿ ಶಿವಮೊಗ್ಗ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ರೈತರು, ಕೃಷಿ ಆಸಕ್ತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು
ಅನಾವರಣಗೊಂಡ ಕೃಷಿ ಮಾದರಿ!
ಕೃಷಿ ಕಾಲೇಜು ಆವರಣದಲ್ಲಿ ಸ್ಟಾಲ್ಗಳನ್ನು ನಿರ್ಮಿಸಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಕೃಷಿ ಮೇಳದಲ್ಲಿ 300ಕ್ಕೂ ಹೆಚ್ಚು ಸ್ಟಾಲ್ಗಳನ್ನು ಸ್ಥಾಪಿಸಲಾಗಿದೆ. ವಿವಿಧ ಕೃಷಿ ವಿಶ್ವವಿದ್ಯಾಲಯದ ವಿಭಾಗಗಳು, ಕೃಷಿ, ತೋಟಗಾರಿಕೆ ಇಲಾಖೆಗಳ ವಿವಿಧ ವಿಭಾಗಗಳು ಸ್ಟಾಲ್ ನಿರ್ಮಿಸಿದ್ದವು. ಕೀಟಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ ಕೀಟ ಪ್ರಪಂಚ ಎಲ್ಲರನ್ನು ಆಕರ್ಷಿಸಿದವು. ಇನ್ನು ಅಡಿಕೆ ಭತ್ತ, ಗೋಡಂಬಿ ಬಗ್ಗೆ ವಿಶೇಷ ಮಳಿಗೆಗಳು ಗಮನ ಸೆಳೆದವು.
ಸಾವಯವ ಕೃಷಿ ಸಂಶೋಧನ ಕೇಂದ್ರಗಳು, ಬಹುಸ್ಥರೀಯ ಬೆಳೆ ಪದ್ಧತಿ, ಅಡಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ, ಜೈವಿಕ ಇಂಧನ ಉದ್ಯಾನಗಳು ರೈತರ ಗಮನ ಸೆಳೆದವು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸಂಬಂಧ ವಿವಿಧ ಸಂಸ್ಥೆಗಳ ಸ್ಟಾಲ್ಗಳು ಇಲ್ಲಿವೆ. ಬಗೆಬಗೆಯ ಆಹಾರ ಉತ್ಪನ್ನ , ಸಮಗ್ರ ಜಲಾನಯನ ಅಭಿವೃದ್ಧಿ, ಜೇನು ಕೃಷಿ, ನಮ್ಮ ತೋಟ, ಅಣಬೆ ಕೃಷಿ, ಮೀನುಗಾರಿಕೆ ಮಳಿಗೆಗಳು, ಸಿರಿಧಾನ್ಯಗಳ ಮಳಿಗೆ, ವಿವಿಧ ರೀತಿಯ ಬಾಳೆ, ಅಡಿಕೆ , ಕೃಷಿ ಮತ್ತು ತೊಟಗಾರಿಕೆ ತಳಿ, ವಿವಿಧ ಯಂತ್ರೋಪಕರಣ, ಸಾವಯವ ಗೊಬ್ಬರ, ವಿವಿಧ ನರ್ಸರಿಗಳು ಪಾಲ್ಗೊಂಡಿದ್ದವು. ಹಲವು ಬಗೆಯ ಸಸ್ಯ ತಳಿ ಪ್ರದರ್ಶನ ಮಾಡಲಾಗಿತ್ತು.
ವ್ಯಾಪಾರಸ್ಥರಿಗೆ ಕಿರಿಕಿರಿ!
ಕೃಷಿ ಮೇಳದಲ್ಲಿ ವ್ಯಾಪಾರ ಸ್ಟಾಲ್ ಹಾಗೂ ಕೃಷಿ ಮಳಿಗೆ ವ್ಯಾಪಾರ ಕೊಂಚ ಕಡಿಮೆ ಆಗಿತ್ತು.
ಕಾಲಿಟ್ಟಲ್ಲಿ ಕೆಸರು ಕೆಸರು ಕೃಷಿ ಮೇಳದ ಸಂದರ್ಭದಲ್ಲೇ ಮಳೆಯಾಗಿದ್ದರಿಂದ ಮೇಳದಲ್ಲಿ ಸ್ವಲ್ಪ ಅಸ್ಥವ್ಯಸ್ಥವಾಯಿತು. ಜರ್ಮನ್ ಟೆಂಟ್ ಪೆಂಡಾಲ್ ಹಾಕಲಾಗಿದ್ದರೂ ನೀರು ಹರಿದು ಕ್ರೀಡಾಂಗಣ ಕೆಸರುಮಯವಾಗಿತ್ತು. ಜನರಿಗೆ ತೊಂದರೆ ಅಗದಂತೆ ತಡೆಯಲು ಮ್ಯಾಟ್ ಹಾಕಲಾಗಿತ್ತು. ಆದರೂ ಕೆಸರಾಗಿದ್ದರಿಂದ ಜನರ ಕಾಲಿಟ್ಟೆಲ್ಲಿ ಮಣ್ಣು ಜರುಗಿದಂತಾಗುತ್ತಿತ್ತು. ರೈತರು ಮಾತ್ರವಲ್ಲದೆ ಶಿವಮೊಗ್ಗ ನಗರದ ವಿವಿಧೆಡೆಯಿಂದ ಜನರು ಕೃಷಿ ಮೇಳದಲ್ಲಿ ಭಾಗವಹಿಸಿದ್ದರು. ಮಕ್ಕಳು, ಮಹಿಳೆಯರು ಕೂಡ ಮೇಳಕ್ಕೆ ಆಗಮಿಸಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕುರಿತು ಮಾಹಿತಿ ಪಡೆದರು. ತಿಂಡಿ, ತಿನಿಸುಗಳ ಮಾರಾಟ ಮಳಿಗೆಗಳಿಗೆ ಜನ ಮುಗಿಬಿದ್ದಿದ್ದರು. ಅ.21 ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳ ನಡೆಯಲಿದೆ.