ಶಿವಮೊಗ್ಗ ಜಿಲ್ಲೆ ಟಾಪ್ ನ್ಯೂಸ್
– ರಿಪ್ಪನ್ಪೇಟೆ: ಬೈಕ್ ಭೀಕರ ಅಪಘಾತ: ತೀರ್ಥಹಳ್ಳಿ ವ್ಯಕ್ತಿ ಸಾವು
– ಶಿರಾಳಕೊಪ್ಪ:ಚಿನ್ನದ ನಾಣ್ಯವೆಂದು ನಂಬಿಸಿ 8 ಲಕ್ಷ ರೂ. ವಂಚನೆ
– ಹೊಸನಗರ: ಕಳೆದ ವರ್ಷ ನಾಪತ್ತೆಯಾಗಿದ್ದವನ ಮೃತದೇಹ ಪತ್ತೆ
NAMMUR EXPRESS NEWS
ರಿಪ್ಪನ್ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ಭೀಕರ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ವರಾನಹೊಂಡ ಸ್ಥಳದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಚಕ್ಕೊಡಬೈಲ್ ಸಮೀಪದ ಯಡಮನೆ ಗ್ರಾಮದ ಸುನೀಲ್ ಎಸ್ ವಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ತಡರಾತ್ರಿ ಸುನೀಲ್ ತೀರ್ಥಹಳ್ಳಿ ಕಡೆಯಿಂದ ರಿಪ್ಪನ್ಪೇಟೆ ಕಡೆಗೆ ಬೈಕ್ ನಲ್ಲಿ ತೆರಳುತಿದ್ದಾಗ ವರಾನಹೊಂಡದ ಬಳಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಘಟನೆಯಲ್ಲಿ ಬೈಕ್ ಸವಾರನಿಗೆ ತೀವ್ರ ರಕ್ತ ಸ್ರಾವವಾಗಿತ್ತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಆಂಬುಲೆನ್ಸ್ ಮೂಲಕ ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಿದ್ದಾರೆ. ಮೆಗ್ಗಾನ್ ನಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಯುವಕ ಮೃತಪಟ್ಟಿದ್ದಾನೆ.
– ಶಿರಾಳಕೊಪ್ಪ: ನಕಲಿ ಚಿನ್ನದ ನಾಣ್ಯವೆಂದು ನಂಬಿಸಿ 8 ಲಕ್ಷ ರೂ. ವಂಚನೆ
ಶಿರಾಳಕೊಪ್ಪ: ನಕಲಿ ಚಿನ್ನದ ನಾಣ್ಯಗಳನ್ನು ಅಸಲಿ ಚಿನ್ನದ ನಾಣ್ಯವೆಂದು ನಂಬಿಸಿ 8 ಲಕ್ಷ ರೂ.ಗಳನ್ನ ಹಾಸನ ಜಿಲ್ಲೆಯವರಿಗೆ ವಂಚಿಸಿರುವ ಘಟನೆ ನಡೆದು ಎಫ್ಐಆರ್ ದಾಖಲಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಇಂತಿತೊಳಲು ಗ್ರಾಮದ ಕಲ್ಲೇಶ್ ಎಂಬುವವರು ಧರ್ಮಸ್ಥಳಕ್ಕೆ ತೆರಳಿದ್ದು ಧರ್ಮಸ್ಥಳದಲ್ಲಿ ಶಿರಸಿ ಚಂದ್ರು ಎಂಬ 50 ವರ್ಷದ ಯಜಮಾನ ಪರಿಚಯವಾಗಿ ನಿಮ್ಮ ಕಡೆ ತೋಟದ ಕೆಲಸ ವಿದ್ದರೆ ಹೇಳಿ ನಾನು ಹೆಂಡ್ತಿ ಬಂದು ಕೆಲಸ ಮಾಡುವುದಾಗಿ ಹೇಳಿರುತ್ತಾರೆ. ಕೆಲಸ ಇದೆ ಎಂದು ಕಲ್ಲೇಶ್ ಒಪ್ಪಿ ಮೊಬೈಲ್ ನಂಬರ್ ಕೊಟ್ಟಿದ್ದನು ಕಲ್ಲೇಶ್ ಮತ್ತು ಶಿರಿಸಿಯ ಚಂದ್ರು ತಮ್ಮ ಊರಿಗೆ ಹೋಗಿ ಒಂದು ವಾರದ ನಂತರ ಕರೆ ಮಾಡಿ ಅಣ್ಣ ನಮ್ಮ ಮನೆಯ ಪಕ್ಕದಲ್ಲಿ ಅಜ್ಜ ಅಜ್ಜಿ ಇದ್ದಾರೆ. ಅವರು ಮನೆ ಕಟ್ಟುವಾಗ ಚಿನ್ನದ ನಾಣ್ಯ ಸಿಕ್ಕಿದೆ. ಅದನ್ನ ಮಾರಾಟ ಮಾಡಿಸಬೇಕು. ನೀವು ಪರಿಚಯವೆಂದು ಕರೆ ಮಾಡಿರುವೆ ನಿಮಗೆ ಬೇಕಾದಲ್ಲಿ ನನಗೆ ತಿಳಿಸಿ ಎಂದು ಹೇಳಿದ್ದಾನೆ. ಈ ಚಿನ್ನಕ್ಕೆ 10 ಸಾವಿರ ಹಣವನ್ನ ಪಡೆದುಕೊಂಡು ಅಸಲಿ ಚಿನ್ನದ ನಾಣ್ಯವನ್ನ ಕೊಟ್ಟು ಕಳುಹಿಸಿದ್ದಾನೆ. ನಂತರ ಇದು ಅಸಲಿ ಎಂದು ತಿಳಿದಾಗ ಕಲ್ಲೇಶ್ 1 ಕೆಜಿ ಚಿನ್ನದ ನಾಣ್ಯ ಬೇಕು ಎಷ್ಟಾಗುತ್ತೆ ಎಂದಿದ್ದಾರೆ. ಐದು ಲಕ್ಷವಾಗುತ್ತೆ. ಆದರೆ ನಮ್ಮ ಬಳಿ ಕೇವಲ 800 ಗ್ರಾಂ ಚಿನ್ನ ಮಾತ್ರವಿದೆ ಎಂದು ನಂಬಿಸಿ ಉಳಿದಿದ್ದು ಮುಂದಿನಗಳಲ್ಲಿ ಕೊಡಿಸುವೆ ಎಂದು ನಂಬಿಸಿದ್ದಾರೆ. ಬ್ಯಾಂಕ್ ಸಾಲ ಮಾಡಿ ಕಲ್ಲೇಶ್ 8 ಲಕ್ಷ ತೆಗೆದುಕೊಂಡು ಶಿರಾಳಕೊಪ್ಪಕ್ಕೆ ಬಂದಿದ್ದು, ಆ ವೇಳೆ ಒಬ್ಬ ಯುವಕ, ಅಜ್ಜಿ ಮತ್ತು ಶಿರಸಿ ಚಂದ್ರು ಒಂದು ಖಾಸಗಿ ಆಸ್ಪತ್ರೆಯ ಹಿಂಭಾಗದಲ್ಲಿ ನಿಂತಿದ್ದು ನಂತರ ಕಲ್ಲೇಶ್ ಭೇಟಿಯಾಗಿ 5 ಲಕ್ಷ ಕೊಟ್ಟು, 800 ನಕಲಿ ಚಿನ್ನದ ನಾಣ್ಯ ಪಡೆದು ಉಳಿದ 3 ಲಕ್ಷ ಹಣ ನೀಡಿ ಇದಕ್ಕೆ ತಕ್ಕಂತೆ ಚಿನ್ನದ ನಾಣ್ಯ ಕೊಡಿಸಿ ಎಂದು ಹಣಕೊಟ್ಟು ಬಂದಿದ್ದಾರೆ. ಪ್ರಕರಣ ಶಿರಾಳಕೊಪ್ಪದಲ್ಲಿ ದಾಖಲಾಗಿದೆ.
– ಹೊಸನಗರ: ಕಳೆದ ವರ್ಷ ನಾಪತ್ತೆಯಾಗಿದ್ದ ನೌಕರನ ಮೃತದೇಹ ಪತ್ತೆ
ಹೊಸನಗರ: ಕಳೆದ ವರ್ಷ ನವೆಂಬರ್ 3 ರಂದು ನಾಪತ್ತೆಯಾಗಿದ್ದ ಕೆಪಿಸಿ ನೌಕರನ ಮೃತದೇಹ ನಿನ್ನೆ ದಿನ ಮಾಣಿ ಡ್ಯಾಂ ಬ್ಯಾಕ್ ವಾಟರ್ನಲ್ಲಿ ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಯಡೂರು ನಿವಾಸಿ ಭರತ್ ಮೃತ ವ್ಯಕ್ತಿ. ಇವರು ಕೆಪಿಸಿಯಲ್ಲಿ ಗುತ್ತಿಗೆ ನೌಕರರಾಗಿದ್ದರು. ದೂರಿನನ್ವಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಜೊತೆಗೆ ಮಂಗಳೂರಿನ ಈಶ್ವರ್ ಮಲ್ಪೆ ಸಹ ಮಾಣಿ ಹಿನ್ನೀರಿನಲ್ಲಿ ಹುಡುಕಾಟ ನಡೆಸಿದ್ದರು. ಐದು ದಿನಗಳ ಕಾಲ ಕಾರ್ಯಾಚರಣೆ ನಡೆದಿತ್ತು. ಆ ಬಳಿಕ ಸ್ಥಗಿತಗೊಂಡಿತ್ತು. ಹುಮ್ಮಡಗಲ್ಲು ಬಳಿ ಮೃತದೇಹವೊಂದು ಇದೆ. ಅದರ ಗುರುತು ಪತ್ತೆಗಾಗಿ ಭಾರತ್ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಕುಟುಂಬಸ್ಥರು ಬಟ್ಟೆ ನೋಡಿ ಇದು ಭರತ್ ರವರ ಮೃತದೇಹ ಎಂದು ಗುರುತಿಸಲಾಗಿದೆ.