ಹೊಸ ವರ್ಷಕ್ಕೆ ಸಿಗಂದೂರು ಸೇತುವೆ ಲೋಕಾರ್ಪಣೆ?
– ಶಿವಮೊಗ್ಗ ಜಿಲ್ಲೆಗೆ 225 ಬಿಎಸ್ಎನ್ಎಲ್ ಟವರ್ ನಿರ್ಮಾಣಕ್ಕೆ ಅನುಮೋದನೆ
– ರಾಜ್ಯ ಸರ್ಕಾರದ ಸುಳ್ಳು ಸರಿಯಲ್ಲ: ರಾಘವೇಂದ್ರ
NAMMUR EXPRESS NEWS
ಸಾಗರ: ಹೊಸ ವರ್ಷಕ್ಕೆ ಸಾಗರದ ಪ್ರಸಿದ್ಧ ಯಾತ್ರಾ ಸ್ಥಳ ಸಿಗಂದೂರು ಸೇತುವೆ ಲೋಕಾರ್ಪಣೆ ಆಗಲಿದೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ಹೇಳಿದ್ದಾರೆ.
ಈಗಾಗಲೇ ಕೇಂದ್ರವು 300 ಕೋಟಿ ರೂ. ಬಿಡುಗಡೆ ಮಾಡಿದೆ. ಕ್ಷೇತ್ರಾದ್ಯಂತ 225 ಬಿಎಸ್ಎನ್ಎಲ್ ಟವರ್ ನಿರ್ಮಾಣ ಕಾಮಗಾರಿಗೂ ಅನುಮೋದನೆ ನೀಡಿತ್ತು ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ಬಂದ 75 ವರ್ಷವಾದರೂ ದೂರ ಸಂಪರ್ಕ ಕ್ಷೇತ್ರದಲ್ಲಿ ತೀವ್ರವಾಗಿ ಹಿಂದುಳಿದಿದ್ದ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಸರಕಾರ 9 ವರ್ಷ ಪೂರೈಸಿದ ಹಿನ್ನೆಲೆ ಇಡೀ ಜಿಲ್ಲಾದ್ಯಂತ ಜನ ಸಂಪರ್ಕ ಅಭಿಯಾನ ನಡೆಯಲಿದೆ. ರಾಜ್ಯ ಸರಕಾರ ಸುಳ್ಳು ಹೇಳಿಕೊಂಡು ದಿನ ದೂಡುವುದು ಒಳ್ಳೆಯ ನಡೆಯಲ್ಲ, ಅಕ್ಕಿ ವಿಚಾರದಲ್ಲಿ ವಿನಾಕಾರಣ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡುವುದು. ಸರಿಯಲ್ಲ. ಮೊದಲು ಎಲ್ಲ ಪದವಿಧರರಿಗೆ ಹಣ ಕೊಡುತ್ತೇವೆಂದು, ಬಳಿಕ 2022-23ರಿಂದ ಮಾತ್ರ ಎಂದು ಘೋಷಿಸಿದೆ. ರಾಜ್ಯ ಸರಕಾರ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023