ಟಾಪ್ 5 ನ್ಯೂಸ್ ಶಿವಮೊಗ್ಗ ಜಿಲ್ಲೆ
– ತೀರ್ಥಹಳ್ಳಿ : ನಕಲಿ ಬಂಗಾರ ವಂಚಕರ ಗ್ಯಾಂಗ್ ನಿಂದ ಆಂಧ್ರ ವ್ಯಾಪಾರಿಗೆ ಲಕ್ಷಾಂತರ ರೂ. ವಂಚನೆ !
– ಶಿವಮೊಗ್ಗ : ಭದ್ರಾ ನಾಲೆಯಲ್ಲಿ ಒಬ್ಬ ವ್ಯಕ್ತಿಯ ಶವ ಪತ್ತೆ!
– ರಿಪ್ಪನ್ಪೇಟೆ: ಮದ್ಯದ ಹಾವಳಿಯಿಂದ ಬಸ್ ನಿಲ್ದಾಣದಲ್ಲಿ ಮತ್ತೊಂದು ವ್ಯಕ್ತಿ ಬಲಿ
– ಭದ್ರಾವತಿ : ಅಕ್ರಮ ದಂಧೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಕಾರಣ ಕೊಲೆ
– ಶಿವಮೊಗ್ಗ : ಉಸಿರಾಟ ಸಮಸ್ಯೆಯಿಂದ ತನ್ನ ಪ್ರಾಣ ಕಳೆದುಕೊಂಡ ಯುವತಿ
NAMMUR EXPRESS NEWS
ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಬಂಗಾರ ವಂಚಕರ ಗ್ಯಾಂಗ್, ಆಂಧ್ರಪ್ರದೇಶದ ವ್ಯಾಪಾರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಿವಾಸಿ ಶ್ರೀನಿವಾಸ (54) ವಂಚನೆಗೊಳಗಾದ ವ್ಯಕ್ತಿ. 20 ಲಕ್ಷ ನಗದು ಹಾಗೂ ಮೊಬೈಲ್ ಫೋನ್ ನನ್ನ ವಂಚಕರು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಶ್ರೀನಿವಾಸ್ ಅವರಿಗೆ ಬಳ್ಳಾರಿ ಜಿಲ್ಲೆಯಲ್ಲಿ, ಯುವಕ ಹಾಗೂ ಮಧ್ಯ ವಯಸ್ಕ ವ್ಯಕ್ತಿ ಪರಿಯಚಯವಾಗಿದ್ದರು. ತಮಗೆ ಹಳೆಯ ಕಾಲದ ಬಂಗಾರದ ನಾಣ್ಯಗಳು ಸಿಕ್ಕಿವೆ. ಇವುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದರು. ಅದರಂತೆ ಸ್ಯಾಂಪಲ್ ಎಂದು ಎರಡು ಅಸಲಿ ಬಂಗಾರದ ನಾಣ್ಯಗಳನ್ನು, ಶ್ರೀನಿವಾಸ್ ಅವರಿಗೆ ವಂಚಕರು ನೀಡಿದ್ದರು. ಪರಿಶೀಲನೆ ವೇಳೆ ಅಸಲಿ ಬಂಗಾರವಾಗಿರುವುದು ಪತ್ತೆಯಾದ ವಂಚಕರ ಮಾತು ನಿಜವೆಂದು ನಂಬಿದ್ದರು. ವಂಚಕರ ಸೂಚನೆಯಂತೆ, ಬಂಗಾರ ಖರೀದಿಗಾಗಿ ತಮ್ಮಿಂದ ಜ. 22 ರಂದು ಶ್ರೀನಿವಾಸ್ ಅವರು ತೀರ್ಥಹಳ್ಳಿಗೆ ಆಗಮಿಸಿದ್ದರು. ಪಟ್ಟಣದ ಹೊರವಲಯ ಆಗುಂಬೆ ರಸ್ತೆಯ ನಿರ್ಜನ ಪ್ರದೇಶಕ್ಕೆ ವಂಚಕರು ಅವರನ್ನು ಕರೆಯಿಸಿಕೊಂಡಿದ್ದರು. ಈ ವೇಳೆ 4 ಕೆಜಿ ನಕಲಿ ಬಂಗಾರದ ನಾಣ್ಯಗಳನ್ನು ವಂಚಕರು ಶ್ರೀನಿವಾಸ್ ಅವರಿಗೆ ನೀಡಿದ್ದರು. ಜೊತೆಗೆ ಅವರ ಬಳಿ ಇದ್ದ ಮೊಬೈಲ್ ಫೋನ್ ಕೂಡ ಕಿತ್ತುಕೊಂಡು ಪರಾರಿಯಾಗಿದ್ದರು. ತದನಂತರ ಪರಿಶೀಲನೆ ವೇಳೆ ನಕಲಿ ಬಂಗಾರ ಎಂಬುವುದು ಗೊತ್ತಾಗಿತ್ತು. ಮೋಸ ಹೋಗಿರುವುದನ್ನು ಅರಿತ ಶ್ರೀನಿವಾಸ್ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ಮುಂದುವರಿಸಿದ್ದಾರೆ.
– ಶಿವಮೊಗ್ಗ : ಭದ್ರಾ ನಾಲೆಯಲ್ಲಿ ಒಬ್ಬ ವ್ಯಕ್ತಿಯ ಶವ ಪತ್ತೆ!
ಶಿವಮೊಗ್ಗ : ನಗರದ ಹೊರವಲಯ ವೀರಭದ್ರ ಕಾಲೋನಿಯಿಂದ ಹೊನ್ನವಿಲೇ ಗ್ರಾಮದ ಮೂಲಕ ಹಾದಹೋಗಿರುವ, ಭದ್ರಾ ನಾಲೆಯಲ್ಲಿ ಪುರುಷನ ಶವ ಪತ್ತೆಯಾದ ಘಟನೆ ಜ. 21 ರಂದು ನಡೆದಿದೆ. ಈ ಕುರಿತಂತೆ ಪೊಲೀಸ್ ಇಲಾಖೆ ಜ. 23 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಮೃತ ವ್ಯಕ್ತಿಗೆ ಸರಿಸುಮಾರು 65 ರಿಂದ 70 ವರ್ಷವಿದೆ. ಮೃತರ ಹೆಸರು, ವಿಳಾಸ ಸೇರಿದಂತೆ ವಾರಸುದಾರರ ಯಾವುದೇ ಸುಳಿವು ಲಭ್ಯವಾಗಿಲ್ಲ. ಮೃತ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದೃಡವಾದ ಮೈಕಟ್ಟು, ಬೊಕ್ಕು ತಲೆ ಹೊಂದಿದ್ದು, ಮೈಮೇಲೆ ನೇರಳೆ ಬಣ್ಣದ ಚಡ್ಡಿ ಧರಿಸಿರುತ್ತಾರೆ.
– ರಿಪ್ಪನ್ಪೇಟೆ: ಮದ್ಯದ ಹಾವಳಿಯಿಂದ ಬಸ್ ನಿಲ್ದಾಣದಲ್ಲಿ ಮತ್ತೊಂದು ವ್ಯಕ್ತಿ ಬಲಿ
ರಿಪ್ಪನ್ಪೇಟೆ : ಪಟ್ಟಣದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕುಳಿತಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ ಕೆದಲುಗುಡ್ಡೆ ಗ್ರಾಮದ ಷಣ್ಮುಖ (50)ವರ್ಷ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಳಿತಲ್ಲಿಯೇ ಮೃತಪಟ್ಟಿದ್ದಾನೆ ಎಂಬ ಹಿನ್ನೆಲೆಯಲ್ಲಿ ಸ್ಥಳೀಯರು ವೈದ್ಯರಾದ ಅನಂತ್ ಮಯ್ಯರವರಿಗೆ ಮಾಹಿತಿ ತಿಳಿಸಿದ್ದು ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಅವರು ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಧೃಡ ಪಡಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಮೃತ ವ್ಯಕ್ತಿಯು ತೀವ್ರ ಮದ್ಯವಯಸನಿಯಾಗಿದ್ದು ಕಳೆದೆರಡು ದಿನಗಳಿಂದ ಮನೆಗೆ ತೆರಳದೇ ಬಸ್ ನಿಲ್ದಾಣದಲ್ಲಿಯೇ ತಂಗಿದ್ದ ಎನ್ನಲಾಗುತ್ತಿದೆ. ಸ್ಥಳಕ್ಕೆ ಪಟ್ಟಣದ ಪೊಲೀಸ್ ಸಿಬ್ಬಂದಿ ಗಳು ಭೇಟಿ ನೀಡಿದ್ದಾರೆ. ಮದ್ಯದ ಹಾವಳಿಗೆ ಪಟ್ಟಣದಲ್ಲಿ ಹಲವಾರು ಪ್ರಾಣಹಾನಿಗಳು ಸಂಭವಿಸುತಿದ್ದು ಅದಕ್ಕೆ ಈ ಪ್ರಕರಣವೊಂದು ಸೇರ್ಪಡೆಯಾಗಿದೆ. 2023 ರ ಜೂನ್ ನಲ್ಲಿ ಇದೇ ಬಸ್ ನಿಲ್ದಾಣದಲ್ಲಿ ತೀವ್ರ ಮದ್ಯವ್ಯಸನದಿಂದ ಛತ್ರಿ ರಿಪೇರಿ ಮಾಡುವ ಹೆದ್ದಾರಿಪುರ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿದ್ದನು ಆ ಘಟನೆ ನಡೆದ ಎರಡು ದಿನಗಳ ಅಂತರದಲ್ಲಿ ತೀರ್ಥಹಳ್ಳಿ ರಸ್ತೆಯ ನ್ಯೂ ಚಾಣಕ್ಯ ಬಾರ್ ನಲ್ಲಿ ಕೆಲಸ ಮಾಡುತಿದ್ದ ಎನ್ನುವ ವ್ಯಕ್ತಿಯೊಬ್ಬ ಅದೇ ಬಾರ್ ನ ಹಿಂಬಾಗದಲ್ಲಿ ಶವವಾಗಿ ಪತ್ತೆಯಾಗಿದ್ದನು. ಕಳೆದೊಂದು ವಾರದಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ವಿಪರೀತ ಮದ್ಯ ಸೇವನೆಯಿಂದ ಮೂವರು ಮೃತಪಟ್ಟಿರುವುದು ಆತಂಕಕಾರಿಯಾಗಿದೆ.
– ಭದ್ರಾವತಿ : ಅಕ್ರಮ ದಂಧೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಕಾರಣ ಕೊಲೆ
ಭದ್ರಾವತಿ : ಭದ್ರಾವತಿಯ ದೊಡ್ಡೇರಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ ಎಫ್ಐಆರ್ ದಾಖಲಾಗಿದ್ದು, ಎಫ್ಐಆರ್ ನಲ್ಲಿ ಅಕ್ರಮ ದಂಧೆಗಳ ವಿರುದ್ಧ ಮಾಹಿತಿ ನೀಡುತ್ತಿದ್ದ ಕಾರಣ ಶಾಂತಕುಮಾರ್ ಯಾನೆ ಶ್ಯಾನು ಅವರ ಕೊಲೆಯಾಗಿದೆ ಎಂದು ದೂರು ದಾಖಲಾಗಿದೆ. ಶಾಂತ ಕುಮಾರ್ 13 ವರ್ಷಗಳ ಹಿಂದೆ ವೇದಾವತಿ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದರು. ಆದರೆ ಶಾಂತಕುಮಾರ್ ಲೇಪಾಕ್ಷಿ ಮತ್ತು ಆತನ ಕಡೆಯವರ ಅಕ್ರಮ ದಂಧೆಗಳ ಬಗ್ಗೆ ಶಾಂತಕುಮಾರ್ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಕೊಡುತ್ತಿದ್ದ ಕಾರಣ ಲೇಪಾಕ್ಷಿ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕುತ್ತಿದ್ದ ಎಂಬ ಆರೋಪ ಕೇಳಿ ಬರುತ್ತಿದ್ದವು. ಶಾಂತಕುಮಾರ್ ಜ.22 ರಂದು ರಾತ್ರಿ 8-30 ರ ಸಮಯದಲ್ಲಿ ತಮ್ಮ ತೋಟಕ್ಕೆ ಹೋಗುವಾಗ ಮುರಾರ್ಜಿ ಶಾಲೆಯ ಬಳಿ ಹೋಗುವಾಗ ಅಲ್ಲೇ ಇದ್ದ ಲೇಪಾಕ್ಷಿಯ ಸಂಬಂಧಿಕರಾದ ಅತೀಶ್ ಮತ್ತು ಅಭಿಯನ್ನ ಶಾಂತಕುಮಾರ್ ರಮೇಶ್(ಚೌಡಮ್ಮನ ಮಗ) ಬಗ್ಗೆ ವಿಚಾರಿಸಿ ನಿನ್ನೆ ರಾತ್ರಿ ಆತ ನಿಮ್ಮ ತೋಟದಲ್ಲಿದ್ದನಾ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಅತೀಶ್ ಮತ್ತು ಅಭಿ ಶಾಂತಕುಮಾರ್ ಗೆ ಜಾತಿ ನಿಂದನೆ ಮಾಡಿ ನಿನಗೆಯಾಕೋ ಇದೆಲ್ಲಾ ಎಂದು ಬೈದು ಹೊಡೆದಿದ್ದಾರೆ. ಶ್ಯಾನು ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ರಮೇಶ್ ಗೆ ಕರೆ ಮಾಡಿದ್ದಾನೆ. ತಕ್ಷಣವೇ ರಮೇಶ್, ಪತ್ನಿ, ಸತೀಶ್ ಶ್ರೀಕಾಂತ್ ಜೊತೆ ಹೋಗುವಾಗ ಶ್ಯಾನು ಹೆದರಿಕೊಂಡು ಬಂದಿದ್ದಾನೆ. ಈ ವೇಳೆ ಲೇಪಾಕ್ಷಿ ಮತ್ತು ಷಣ್ಮುಖ ಎಂಬುವರು ಬಂದಿದ್ದು ಅವರ ಬೆನ್ನಲ್ಲೇ ಮತ್ತೊಂದು ಬೈಕ್ ನಲ್ಲಿ ಬಂದ ಅತೀಶ್ ಮತ್ತು ಅಭಿ ಮಚ್ಚು ಬೀಸಿದ್ದಾರೆ. ಕಾಲಿಗೆ ಮತ್ತು ಬೆನ್ನನ್ನ ಸೀಳಿದ ಮಚ್ಚು ಶ್ಯಾನು ಅವರ ಪ್ರಾಣವನ್ನ ಎಗುರಿಸಿದೆ. ಬೈಕ್ ನಲ್ಲಿ ಹೋಗುವಾಗ ಅಭಿ ಮತ್ತು ಅತೀಶ್, ಶ್ಯಾನು ಕಡೆಯವರಿಗೆ ಮಚ್ಚು ತೋರಿಸಿ ನಿಮ್ಮನ್ನೂ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ತಕ್ಷಣವೇ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಶ್ಯಾನು ಮಾರ್ಗ ಮದ್ಯೇದಲ್ಲಿ ಸಾವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಲೇಪಾಕ್ಷಿ ಮತ್ತು ಅವರ ಕಡೆಯವರ ಅಕ್ರಮದಂಧೆಗಳನ್ನ ಸಂಬಂಧ ಪಟ್ಟ ಇಲಾಖೆಯವರಿಗೆ ಮಾಹಿತಿ ಕೊಡುತ್ತಿದ್ದ ಕಾರಣ ಶ್ಯಾನು ಅವರನ್ನ ಮಚ್ಚಿನಿಂದ ಕೊಲೆ ಮಾಡಿರುವುದಾಗಿ ಪತ್ನಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
– ಶಿವಮೊಗ್ಗ : ಉಸಿರಾಟ ಸಮಸ್ಯೆಯಿಂದ ತನ್ನ ಪ್ರಾಣ ಕಳೆದುಕೊಂಡ ಯುವತಿ
ಶಿವಮೊಗ್ಗ : 25 ವರ್ಷದ ಯುವತಿಗೆ ಉಸಿರಾಟದ ಸಮಸ್ಯೆಯಿಂದ ಜೀವನ ಕೊನೆಯಾದ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ನೇತಾಜಿ ಸರ್ಕಲ್ ಬಳಿ ದೈವಜ್ಞ ಬ್ರಾಹ್ಮಣರ ಕುಟುಂಬದ ದಂಪತಿಗೆ ಸೌಮ್ಯ ಎಂಬ ಮಗಳಿದ್ದು, ಆಕೆ ಮಾಚೇನಹಳ್ಳಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ವರ್ಕ್ ಫ್ರಾಮ್ ಹೋಮ್ ಮಾಡುತ್ತಿದ್ದ ಆಕೆಗೆ ಉಸಿರಾಟದ ಸಮಸ್ಯೆಯು ಕಾಡುತ್ತಿತ್ತು ಎಂದು ಮನೆಯವರು ಹೇಳುತ್ತಾರೆ. ಈ ಕಾರಣಕ್ಕೆ ಸೌಮ್ಯಳಿಗೆ ಹಲವು ಬಾರಿ ಚಿಕಿತ್ಸೆ ಸಹ ನೀಡಲಾಗಿತ್ತು. ಈ ನಡುವೆ ಸೌಮ್ಯ ಇದ್ದಕ್ಕಿದ್ದಂತೆ ಮನೆ ಬೆಡ್ರೂಂನಲ್ಲಿನ ಸ್ಟೀಲ್ ಫೋಲ್ಸ್ಗೆ ಸೀರೆ ಕಟ್ಟಿ ನೇಣಿಗೆ ಶರಣಾಗಿದ್ದಾರೆ. ಇವರ ಸಾವು ಇಡೀ ಕುಟುಂಬವನ್ನು ಕಂಗಾಲಾಗಿಸಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ.