ಬಾಂಗ್ಲಾದ ಹಿಂದೂಗಳನ್ನು ರಕ್ಷಿಸಲು ದೇಶಾದ್ಯಂತ ಹೋರಾಟ
– ಡಿ.3,4ಕ್ಕೆ ಹಿಂದೂಪರ ಸಂಘಟನೆಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ
NAMMUR EXPRESS NEWS
ಬೆಂಗಳೂರು: ಬಾಂಗ್ಲಾದಲ್ಲಿ ಉದ್ಭವಿಸಿರುವ ಅರಾಜಕತೆಯಿಂದ ಅಲ್ಲಿನ ಹಿಂದೂಗಳ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳು ದೇಶಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 3 ಮತ್ತು 4 ರಂದು ಎಲ್ಲಾ ರಾಜ್ಯಗಳಲ್ಲೂ ಬೃಹತ್ ಪ್ರತಿಭಟನೆ ನಡೆಯಲಿದ್ದು ಈ ಮೂಲಕ ಬಾಂಗ್ಲಾದಲ್ಲಿ ನೆಲಸಿರುವ ಹಿಂದೂಗಳನ್ನು ರಕ್ಷಿಸಲು ಆಗ್ರಹಿಸಲಾಗುವುದು. ಬಾಂಗ್ಲಾದಲ್ಲಿ ದಿನೇ ದಿನೇ ಹಿಂದೂಗಳ ಮೇಲೆ ಹಲ್ಲೆ,ಹತ್ಯೆ ಘಟನೆಗಳು ಹೆಚ್ಚಾಗುತ್ತಿದ್ದು ಇದನ್ನೆಲ್ಲ ನಿಯಂತ್ರಿಸಬೇಕಾದ ಸರ್ಕಾರವೇ ಕೈಕಟ್ಟಿ ಕುಳಿತಿದ್ದು ಕ್ರಮಕ್ಕಾಗಿ ಹೋರಾಟ ನಡೆಸಲಿವೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಲಿದೆ.