ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ!
– ರಾಜ್ಯದಲ್ಲೆಡೆ ತೆಂಗಿನಕಾಯಿ ದರ ಏರಿಕೆ!
– ನಿರಂತರವಾಗಿ ಏರಿಕೆಯಾಗುತ್ತಿರುವ ಚಿನ್ನದ ಬೆಲೆ!
NAMMUR EXPRESS NEWS
ಬೆಂಗಳೂರು: ಹಲವು ಉತ್ಪನ್ನಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಹೌದು, ತೆಂಗಿನಕಾಯಿ ದರ ಏರಿಕೆ ಪ್ರಮಾಣ ಗ್ರಾಹಕರ ಬೆಲೆ ಏರಿಕೆ ಬಿಸಿ ತಟ್ಟಿದೆ. ಬಿಸಿಲಿನ ತಾಪಮಾನ ತೀವ್ರ ಪರಿಣಾಮ, ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆ ತೆಂಗಿನಕಾಯಿ ಕಡಿಮೆ, ಈ ಹಿನ್ನೆಲೆ ದರ ಏರಿಕೆಯಾಗಿದೆ. ಈ ಮೊದಲು ಒಂದು ತೆಂಗಿನಕಾಯಿಗೆ 20, 25, 30 ರೂ. ದರ ಇತ್ತು. ಈಗ 65, ರೂ.ವರೆಗೆ ಮಾರಾಟವಾಗುತ್ತಿದೆ.
ಕೆಜಿಗೆ 32-33 ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ 60 ರೂ.ಗೆ ತಲುಪಿದೆ. ತೆಂಗಿನ ಇಳುವರಿ ಕಡಿಮೆ, ಎಳನೀರು ಭಾರಿ ಪ್ರಮಾಣದಲ್ಲಿ ಕೊಯ್ದು ಮಾಡುವುದರಿಂದ ಬೆಲೆ ಏರಿಕೆಯಾಗಿದೆ.
* ನಿರಂತರವಾಗಿ ಏರಿಕೆಯಾಗುತ್ತಿರುವ ಚಿನ್ನದ ಬೆಲೆ!
ಚಿನ್ನಾಭರಣಗಳ ಬೆಲೆ ಗಗನಮುಖಿಯಾಗುತ್ತಿದೆ. ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದ್ದು, ಶುದ್ಧ ಚಿನ್ನ ಅಂದರೆ 24 ಕ್ಯಾರೆಟ್ ಚಿನ್ನದ ಬೆಲೆ 80 ಸಾವಿರದ ಗಡಿ ಸಮೀಪಿಸುತ್ತಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 79,640 ರೂ ಇದ್ದು, ಕೆಲವೇ ದಿನಗಳಲ್ಲಿ 80 ಸಾವಿರ ಆಗಲಿದೆ. ನಿರಂತರ ಏರಿಕೆಯಿಂದ 22 ಕ್ಯಾರೆಟ್ 10 ಗ್ರಾಂ ಬೆಲೆಯೂ 73,000 ರೂ ಇದ್ದು, ಈ ವರ್ಷ 80 ಸಾವಿರ ಆಗುವ ಸಾಧ್ಯತೆ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಜನವರಿ 13 ರಂದು 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯು 7,340 ರೂ ಆಗಿದ್ದು, ಶನಿವಾರದಿಂದ ದರ ತಟಸ್ಥವಾಗಿದೆ. 24 ಕ್ಯಾರೆಟ್ ನ 1 ಗ್ರಾಂ ಬೆಲೆ 7,965 ರೂ ಇದ್ದು ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 18 ಗ್ರಾಂ ಗೆ 5,973 ರೂ ಇದೆ. ಬೆಂಗಳೂರಲ್ಲಿಯೂ ಚಿನ್ನದ ಬೆಲೆ ಗ್ರಾಂ ಗೆ 7,340 ರೂ ದರ ಇದ್ದು, ಬೆಳ್ಳಿ ಬೆಲೆಯು 93.50 ರೂ ಇದೆ. ಕೆಜಿ ಬೆಳ್ಳಿಯ ಬೆಲೆ 94,500 ರೂ ಇದೆ.