ದೇಗುಲಗಳ ಘಂಟೆ ಗ್ಯಾಂಗ್ ಕಳ್ಳರ ಬಂಧನ!
– ಮಾಳೂರು ಠಾಣೆ ಪೊಲೀಸರ ಕಾರ್ಯಚರಣೆ
– ಚಿಡುವ, ಬಾಳಗಾರು ರಾಮೇಶ್ವರ ದೇಗುಲಗಳಲ್ಲಿ ಕಳ್ಳತನ
– ಭದ್ರಾವತಿಯಿಂದ ಕಳ್ಳರ ಗ್ಯಾಂಗ್ ಆಗಮನ!
NAMMUR EXPRESS NEWS
ತೀರ್ಥಹಳ್ಳಿ: ದೇವಸ್ಥಾನಗಳಲ್ಲಿ ಘಂಟೆ, ಪೂಜಾ ಸಾಮಾಗ್ರಿಗಳು ಹಾಗೂ ಬೆಳ್ಳಿಯ ದೀಪಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಮಾಳೂರು ಪೊಲೀಸರು ಸೆರೆ ಹಿಡಿದಿದ್ದಾರೆ.
ಮಾಳೂರು ಠಾಣಾ ವ್ಯಾಪ್ತಿಯಲ್ಲಿನ ಚಿಡುವ ಆಂಜನೇಯ ದೇವಸ್ಥಾನ ಗಾಳಿಮಾರಮ್ಮ ದೇವಸ್ಥಾನ ಹಾಗೂ ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಬಾಳಗಾರು ರಾಮೇಶ್ವರ ದೇವಸ್ಥಾನಗಳಲ್ಲಿ ಘಂಟೆ, ಪೂಜಾ ಸಾಮಾಗ್ರಿಗಳು,ಹಾಗೂ ಬೆಳ್ಳಿಯ ದೀಪಗಳನ್ನು ಕಳ್ಳತನ ಮಾಡಲಾಗಿದ್ದು ಮಾಳೂರು ಠಾಣೆಯಲ್ಲಿ ಹಾಗೂ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಬೆನ್ನುಹತ್ತಿದ ಮಾಳೂರು ಪೊಲೀಸರ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಂದ ಅಂದಾಜು 70000 ರೂ.ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ವಾಹನ ಅಂದಾಜು ಮೌಲ್ಯ 200000₹ ನ್ನು ವಶಪಡಿಸಿಕೊಂಡಿರುತ್ತಾರೆ.
ಪೊಲೀಸರ ಕ್ರಮಕ್ಕೆ ಮೆಚ್ಚುಗೆ
ಕಳ್ಳರ ಬಂಧನ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾಳೂರು ಸಿಪಿಐ ಶ್ರೀಧರ ಅವರ ಮಾರ್ಗದರ್ಶನದಲ್ಲಿ ಕುಮಾರ್ ಕುರಗೊಂದ ಪಿಎಸ್ಐ, ಶಿವಾನಂದ ಧರೇನವರ್ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಹೆಚ್ ಸಿ ಸುರಕ್ಷಿತ, ಪಿಸಿ ಸಂತೋಷ್ ಹೆಚ್ ಸಿ ರಾಜಶೇಖರ್, ಮಂಜುನಾಥ್ ಕೋಣಂದೂರು ಪಿಸಿ ಪ್ರದೀಪ್,ವಿವೇಕ್, ಪ್ರಸನ್ನ,ಚೇತನ್,ಮಂಜುನಾಥ್, ಹಾಗೂ ಜಿಪ್ ಚಾಲಕ ಅಭಿಲಾಷ್ ರವರು ಕಾರ್ಯಾಚರಣೆ ನಡೆಸಿ ಅರುಣ ತಂದೆ ಗೋಪಾಲ 26 ವರ್ಷ ಕೋಲಿಬ್ಲಾಕ್ ಶೆಡ್ ಭದ್ರಾವತಿ, ಆಕಾಶ್ ತಂದೆ ಬಾಬು 24 ವರ್ಷ ಬುಳ್ಳಾಪುರ ಭದ್ರಾವತಿ ಇವರನ್ನು ಬಂಧಿಸಿದ್ದಾರೆ.