ತೀರ್ಥಹಳ್ಳಿ ಚರ್ಚ್ ಅಲ್ಲಿ ಇಂದು ಕ್ರಿಸ್ಮಸ್ ಸೌಹಾರ್ದ ಸಂಜೆ
– ಎಲ್ಲಾ ಧರ್ಮದ ಶ್ರೀಗಳ ಸಮಾಗಮ: ಶಾಂತಿ ಸಂದೇಶ
– ಸೌಹಾರ್ದ ಸಂಜೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು
NAMMUR EXPRESS NEWS
ತೀರ್ಥಹಳ್ಳಿ: ಕ್ರಿಸ್ತ ಜಯಂತಿ 2024ರ ಪ್ರಯುಕ್ತ ಕ್ರಿಸ್ಮಸ್ ಸೌಹಾರ್ದ ಸಂಜೆಯನ್ನು ಡಿ.25 ಬುಧವಾರ ಸಂಜೆ 5.30ಕ್ಕೆ ಚರ್ಚ್ ಅವರಣ ತೀರ್ಥಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಸೌಹಾರ್ದ ನುಡಿಯನ್ನು ಕೆಳದಿ ರಾಜಗುರು ಕವಲೆದುರ್ಗ ಮಠದ ಶ್ರೀ ಷ ಬ್ರ ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು ನೆರವೇರಿಸಲಿದ್ದಾರೆ. ಮುಸ್ಲಿಮ್ಸ್ ಎಜುಕೇಷನ್ ಸೊಸೈಟಿ ಇಂದಿರಾ ನಗರದ ಧರ್ಮ ಗುರು ನೌಫಾಲ್ ಬಿಎ ಹಿಮಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನ ಆರಗ ಜ್ಞಾನೇಂದ್ರ ಮಾನ್ಯ ಶಾಸಕರು, ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ರೋಟರಿ ಅಧ್ಯಕ್ಷರಾದ ಅನಿಲ್ ಕುಮಾರ್, ವಂ। ಸಿಸ್ಟರ್ ಮೆರಿಲೈಟ್, ಫಾದರ್ ಮಿಲ್ಟನ್ ಸೋಜಾ, ಓವಿನ್ ಡಿ’ಸೋಜಾ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ.
ಸೌಹಾರ್ದ ಸಂಜೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ಆ ಕಾರ್ಯಕ್ರಮದಲ್ಲಿ ದೇಶೀ ನೃತ್ಯಗಳು, ಕೋಲಾಟ , ಬಂಜಾರ, ಹುಲಿಕುಣಿತ, ಬುಡಕಟ್ಟು ಕುಣಿತ ಮತ್ತು ರಂಗ ಗೀತೆಯನ್ನು ಶಿವಕುಮಾರ್ ಮತ್ತು ತಂಡ ಕಿರುನಾಟಕವನ್ನ ‘ಕಾಡಿನ ಕೂಗು’ – ರೋಟರಿ ಸಂಸ್ಥೆ, ತೀರ್ಥಹಳ್ಳಿ ‘ಭಾವ ತೆರೆದ ಜೀವ’ – ಚಿಗುರು ಕಲಾವಿದರು, ತೀರ್ಥಹಳ್ಳಿ ಇವರು ಈ ಕಾರ್ಯಕ್ರಮದ ರಂಗನ್ನ ಮತ್ತಷ್ಟು ಹೆಚ್ಚಲಿದ್ದಾರೆ. ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.