ತೀರ್ಥಹಳ್ಳಿ ತಾಲ್ಲೂಕಿಗೆ ಹೆಮ್ಮೆ ತಂದ ವಿದ್ಯಾರ್ಥಿನಿ ದೀಪಿಕಾ
– ಎಂ. ಕಾಂ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ 5ನೇ ರ್ಯಾಂಕ್ ಪಡೆದು ಉತ್ತಮ ಸಾಧನೆ
– ಕುಟುಂಬಸ್ಥರು, ಗೆಳೆಯರ ಬಳಗದ ವತಿಯಿಂದ ಅಭಿನಂದನೆಗಳು
NAMMUR EXPRESS NEWS
ತೀರ್ಥಹಳ್ಳಿ: ಕುವೆಂಪು ವಿಶ್ವವಿದ್ಯಾಲಯ ನಡೆಸಿರುವ ಎಂ. ಕಾಂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬಾಳೆಬೈಲು ಸರಕಾರಿ ಫರ್ಸ್ಟ್ ಗ್ರೇಡ್ ಕಾಲೇಜು ವಿದ್ಯಾರ್ಥಿನಿ ದೀಪಿಕಾ. ವಿ ಅವರು ವಿಶ್ವವಿದ್ಯಾಲಯಕ್ಕೆ ಎಂ. ಕಾಂ ವಿಭಾಗದಲ್ಲಿ ಅಕೌಂಟಿಂಗ್ ಮತ್ತು ಟ್ಯಾಕ್ಸ್ಷನ್ ವಿಷಯದಲ್ಲಿ 5ನೇ ರ್ಯಾಂಕನ್ನು ಪಡೆದು ತಾಲ್ಲೂಕಿಗೆ ಹೆಮ್ಮೆ ತಂದು ಕೊಟ್ಟಿದ್ದಾರೆ.
ವಿದ್ಯಾರ್ಥಿನಿ ದೀಪಿಕಾ. ವಿ ಅವರು ಮೇಲಿನ ಕುರುವಳ್ಳಿಯವರಾಗಿದ್ದು, ತಂದೆ ವೆಂಕಟೇಶ್ ಕುಲಾಲ್ ಮತ್ತು ತಾಯಿ ಶಾರದಾ ಪುತ್ರಿ.. ಸಹೋದರ ಕಾರ್ತಿಕ್ ಕುಲಾಲ್ ಹಾಗೂ ಅವರ ಗೆಳೆಯರ ಬಳಗ ಜೊತೆಗೆ ಕುಟುಂಬಸ್ಥರು ಶುಭ ಕೋರಿದ್ದಾರೆ.