ಸಮೃದ್ಧಿ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿ ಅದ್ದೂರಿ ಉದ್ಘಾಟನೆ
– ರಾಜ್ಯದ 32ನೇ ಶಾಖೆ ತೀರ್ಥಹಳ್ಳಿಯಲ್ಲಿ ಆರಂಭ
– ಸಂಸ್ಥಾಪಕರಾದ ಸಮೃದ್ಧಿ ಮಂಜುನಾಥ್ ಅವರಿಂದ ಉದ್ಘಾಟನೆ
– ರಾಜ್ಯದ ನೂರಾರು ಸದಸ್ಯರು ಭಾಗಿ: ಗ್ರಾಹಕರಿಗೆ ಸೇವೆಗಳು ಲಭ್ಯ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ರಾಜ್ಯದ 32ನೇ ಶಾಖೆ ಶಿವಮೊಗ್ಗ ಜಿಲ್ಲೆ ಶುಭಾರಂಭಗೊಂಡಿದೆ. ಜ.22 ಬುಧವಾರದಂದು ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪದ ಪೂರ್ವಿಕಾ ಮೊಬೈಲ್ಸ್ ಮೇಲ್ಬಾಗ ನೂತನವಾಗಿ ಆರಂಭಗೊಂಡ ಕಚೇರಿಯನ್ನು ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ್ ಉದ್ಘಾಟನೆ ಮಾಡಿದ್ದಾರೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಅನೇಕ ಜಿಲ್ಲೆಯಲ್ಲೂ ತನ್ನ ಶಾಖೆಯನ್ನು ಸಮೃದ್ಧಿ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿ ಹೊಂದಿದೆ. ಕಚೇರಿ ಆರಂಭದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾದ ಮಹಾಂತೇಶ್ ಕುಲಕರ್ಣಿ ಮತ್ತು ಉಪಾಧ್ಯಕ್ಷರಾದ ನಾರಾಯಣ ಕೋಮಾರ್ ಹಾಗೆಯೇ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ವಿವಿಧ ಶಾಖೆಗಳ ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.
13 ವರ್ಷದಿಂದ ವಿಶೇಷ ಸೇವೆಗಳು ಲಭ್ಯ
ಸಮೃದ್ಧಿ ಕ್ರೆಡಿಟ್ ಕೋ. ಸೊಸೈಟಿಯಲ್ಲಿ ಆರ್. ಡಿ, ಎಸ್. ಡಿ ಉಳಿತಾಯ ಖಾತೆಯ ಸದಸ್ಯತ್ವ, ಸಾಲ ಸೌಲಭ್ಯಗಳು ದೊರೆಯಲಿದೆ. ಹಿರಿಯ ನಾಗರಿಕರಿಗೆ, ನಿವೃತ್ತ ಸೈನಿಕರಿಗರಿಗೆ ಹಾಗೂ ಅಂಗವಿಕರಿಗೆ ಉಳಿತಾಯದ ಮೇಲೆ ವಿಶೇಷ ಬಡ್ಡಿದರ ಕೂಡ ದೊರೆಯುತ್ತದೆ. ಬೆಂಗಳೂರಿನ ಯಲಹಂಕದಲ್ಲಿ ಮುಖ್ಯ ಕಚೇರಿ ಹೊಂದಿರುವ ಸಂಸ್ಥೆ ಕಳೆದ 13 ವರ್ಷಗಳಿಂದ ವಿವಿಧ ಭಾಗಗಳಲ್ಲಿ ಸಾರ್ಥಕ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಸುಮಾರು 14,000 ಮಂದಿ ಸದಸ್ಯರನ್ನು ಹೊಂದಿರುವ ತೀರ್ಥಹಳ್ಳಿಯಲ್ಲಿ ನೂತನ ಕಚೇರಿ ಶುಭಾರಂಭಗೊಂದಿದ್ದು, ಸೇವೆಯನ್ನು ಪಡೆದುಕೊಳ್ಳಲು ಆಡಳಿತ ಮಂಡಳಿ ಮನವಿ ಮಾಡಿದೆ. ಆನ್ ಲೈನ್ ಸೇವೆಗಳು ಕೂಡ ಲಭ್ಯವಿದೆ ತೀರ್ಥಹಳ್ಳಿಯ ಪ್ರತಿಷ್ಟಿತ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಇದೀಗ ಸಿಬ್ಬಂದಿಗಳು ಸಜ್ಜಾಗಿದ್ದಾರೆ.