ತೀರ್ಥಹಳ್ಳಿಯಲ್ಲಿ ಮಲ್ನಾಡೋತ್ಸವ ಸಂಭ್ರಮ!
– ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ 10ನೇ ವರ್ಷದ ವಿಶೇಷ ಕಾರ್ಯಕ್ರಮ: ಏ. 4,5,6ಕ್ಕೆ ಕಾರ್ಯಕ್ರಮ
– ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ಮಲೆನಾಡು ಜಿಲ್ಲೆಗಳ ಮಹಾ ಸಂಗಮ: ತೀರ್ಥಹಳ್ಳಿ ಉತ್ಸವ
NAMMUR EXPRESS NEWS
ತೀರ್ಥಹಳ್ಳಿ: ಮಲ್ನಾಡೋತ್ಸವ – 2025 ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ 10ನೇ ವರ್ಷದ ವಿಶೇಷ ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ಮಲೆನಾಡು ಜಿಲ್ಲೆಗಳ ಮಹಾ ಸಂಗಮವನ್ನು ಏರ್ಪಡಿಸಲಾಗಿದೆ. ಮಲೆನಾಡಿಗರ ಹಬ್ಬ.. ಇದುವೇ ನಮ್ಮೂರ್ ಹಬ್ಬ ಕಲ್ಪನೆಯೊಂದಿಗೆ ಮಲ್ನಾಡೋತ್ಸವ ಏಪ್ರಿಲ್ 4, 5, 6 2025 ರಂದು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು, ಆಹಾರ ಮೇಳ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಎಜುಕೇಷನ್ ಎಕ್ಸ್ಪೋ , ಮಲೆನಾಡು ಸಾಧಕರ ಸಮ್ಮಿಲನ ನಡೆಯಲಿದೆ. ಮಲೆನಾಡಿನ ನೂರಾರು ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ರಾಜ್ಯದ ಪ್ರಸಿದ್ದ ನಟ ನಟಿಯರು, ರಿಯಾಲಿಟಿ ಶೋ ಕಲಾವಿದರ ಬಹು ದೊಡ್ಡ ಸಮಾಗಮ ನಡೆಯಲಿದೆ. ಈ ಮಲೆನಾಡಿನ ಹಬ್ಬಕ್ಕೆ ಸರ್ವರಿಗೂ ಸುಸ್ವಾಗತವನ್ನು ಆಯೋಜಕರು ಕೋರಿದ್ದಾರೆ.