ಮಲೆನಾಡ ಮುತ್ತು ಡಿಬಿಸಿಗೆ ಜನರ ನಮನ!
– ನ.10ರಂದು ತೀರ್ಥಹಳ್ಳಿಯಲ್ಲಿ ಡಿಬಿಸಿ ನುಡಿ ನಮನ!
– ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ
– ಸಿಎಂ ಸೇರಿ ಗಣ್ಯರ ಅಂತಿಮ ದರ್ಶನ
– ತೀರ್ಥಹಳ್ಳಿಯಲ್ಲಿ ರೈತ ಸಂಘ, ಹೋರಾಟಗಾರರ ಗೌರವ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 10ರ ಶುಕ್ರವಾರ ಸಂಜೆ 5 ಗಂಟೆಗೆ ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಅಗಲಿದ ಹಿರಿಯ ರಾಜಕೀಯ ಮತ್ಸದ್ದಿ, ಶ್ರೇಷ್ಠ ಸಂಸದೀಯ ಪಟು, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಿ ಬಿ ಚಂದ್ರೇಗೌಡರ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷಗಳ ಸಂಘ ಸಂಸ್ಥೆಗಳ ಅಧ್ಯಕ್ಷರು, ಮುಖಂಡರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಡಿಬಿಸಿ ಅಭಿಮಾನಿಗಳು, ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಯೋಜಕರು ಕೋರಿದ್ದಾರೆ.
ಸಿಎಂ ಸೇರಿದಂತೆ ಗಣ್ಯಾತಿಗಣ್ಯರು, ಅಭಿಮಾನಿಗಳಿಂದ ಡಿಸಿಬಿ ಅಂತಿಮ ದರ್ಶನ
ರಾಜ್ಯದ ಹಿರಿಯ ರಾಜಕಾರಣಿ, ವಿಧಾನಸಭೆ ಮಾಜಿ ಅಧ್ಯಕ್ಷರು, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕರು ಆಗಿದ್ದ ಡಿ. ಬಿ ಚಂದ್ರೇಗೌಡರ ಅಂತ್ಯಸಂಸ್ಕಾರ ಮೂಡಿಗೆರೆ ತಾಲೂಕಿನ ದಾರದ ಹಳ್ಳಿಯ ತೋಟದಲ್ಲಿ ನವೆಂಬರ್ 8ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಗೃಹ ಮಂತ್ರಿ, ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಮಂತ್ರಿ ಕಿಮ್ಮನೆ ರತ್ನಾಕರ್, ಡಿ. ಎನ್ ಜೀವರಾಜ್, ಬಿ ಎಲ್ ಶಂಕರ್ ಸೇರಿದಂತೆ ಪ್ರಮುಖರು, ಚಂದ್ರೇಗೌಡರ ಅಭಿಮಾನಿಗಳು, ಶಿಷ್ಯರು, ಬಂಧು ವರ್ಗದವರು ಡಿಸಿಬಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ತೀರ್ಥಹಳ್ಳಿಯಲ್ಲಿ ಡಿಬಿಸಿ, ಪ್ರತಿಮಾಗೆ ಶ್ರದ್ಧಾಂಜಲಿ
ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ನವೆಂಬರ್ 7ರ ಮಂಗಳವಾರ ಸಂಜೆ 6 ಗಂಟೆಗೆ ಕಂಬಳಿಗೆರೆ ರಾಜೇಂದ್ರ ಮತ್ತು ಕೋಡ್ಲು ವೆಂಕಟೇಶ್ ನೇತೃತ್ವದಲ್ಲಿ ಹಿರಿಯ ರಾಜಕಾರಣಿ ಡಿ ಬಿ ಚಂದ್ರಶೇಖರ ಗೌಡ್ರು ಮತ್ತು ಗಣಿ ಶಾಖ ಉಪನಿರ್ದೇಶಕಿ ಪ್ರತಿಮಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತುರ್ತು ಸಭೆ ಸೇರಿದ ಸಮಿತಿ ಮುಖ್ಯಸ್ಥರು ಕಂಬಳಿಗೆರೆ ರಾಜೇಂದ್ರ ಮತ್ತು ಕೋಡ್ಲು ವೆಂಕಟೇಶ್ ನೇತೃತ್ವದಲ್ಲಿ ಈ ಸಂತಾಪ ಸೂಚಿಸುವ ಸಭೆಯನ್ನು ಆಯೋಜಿಸಿದ್ದರು. ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿಯ ಎಲ್ಲರೂ ಪಾಲ್ಗೊಂಡಿದ್ದರು.