ಜನವರಿ 14ಕ್ಕೆ ರಾಮೇಶ್ವರ ದೇವರ ರಥೋತ್ಸವ!
– ಮಕರ ಸಂಕ್ರಾಂತಿ ಅಂಗವಾಗಿ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ
– ಅಭಿಷೇಕ ಮಹಾಮಂಗಳಾರತಿ ಜೊತೆಗೆ ವಿಶೇಷ ಪೂಜೆ ಆಯೋಜನೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಮಕರ ಸಂಕ್ರಾಂತಿ ಅಂಗವಾಗಿ ತೀರ್ಥಹಳ್ಳಿ ರಾಮೇಶ್ವರ ದೇವರ ರಥೋತ್ಸವವನ್ನು ಜನವರಿ 14ರ ಮಂಗಳವಾರ ಆಯೋಜಿಸಲಾಗಿದೆ. ಮಕರ ಸಂಕ್ರಾಂತಿಯ ಅಂಗವಾಗಿ 14 ಜನವರಿ 2025ರ ಮಂಗಳವಾರದಂದು ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ರಥೋತ್ಸವ ನಡೆಯಲಿದೆ. ಬೆಳ್ಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮಹಾಮಂಗಳಾರತಿ ನೆರವೇರಲಿದ್ದು, ಮಧ್ಯಾಹ್ನ ಅಭಿಜಿಹ್ನ ಮೂಹರ್ತದಲ್ಲಿ ಚಿಕ್ಕರಥೋತ್ಸವ ಜರುಗಲಿದೆ. ಶ್ರೀ ರಾಮಚಂದ್ರಪುರ ಮಠದ ಆವರಣದಲ್ಲಿ ಮಕರ ಸಂಕ್ರಾಂತಿ ಸಮಿತಿಯವರಿಂದ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ. ತೀರ್ಥಹಳ್ಳಿ, ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ದುರ್ಗಾ ಹೋಮವನ್ನು ಶ್ರೀ ಸಾನಿಧ್ಯದಲ್ಲಿ ನೆರವೇರಿಸಲಾಗಿದ್ದು, ಸರ್ವಭಕ್ತರನ್ನು ಸಮಿತಿಯು ಸ್ವಾಗತಿಸಿ, ಭಕ್ತಾದಿಗಳು ಬಂದು ದೇವಿಯ ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ಕೋರಲಾಗಿದೆ.