ತೀರ್ಥಹಳ್ಳಿಯಲ್ಲಿ ಸಹ್ಯಾದ್ರಿ ಸಂಭ್ರಮ!
– 2 ದಿನಗಳ ಕಾಲ ಸಹ್ಯಾದ್ರಿ ಸಂಸ್ಥೆಯ ಮಕ್ಕಳ ಹಬ್ಬ
– ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮನಸೋತ ಜನ
– 2 ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಶಾಲಾ ವಾರ್ಷಿ ಕೋತ್ಸವ ಸಹ್ಯಾದ್ರಿ ಸಂಭ್ರಮ ಅದ್ದೂರಿಯಾಗಿ ಮೊದಲ ದಿನ ನಡೆದಿದ್ದು, ಕಾರ್ಯಕ್ರಮದ ವೇದಿಕೆ, ಮಕ್ಕಳ ಸಾಂಸ್ಕೃತಿಕ ಝಲಕ್ ಗಮನ ಸೆಳೆಯಿತು. ತೀರ್ಥಹಳ್ಳಿ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್.ಇ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆದಿದ್ದು, ಮೊದಲ ದಿನ ಸಾವಿರಾರು ಜನರ ಆಕರ್ಷಣೆಗೆ ಕಾರಣವಾಯಿತು. ಅದ್ದೂರಿಯಾಗಿ ವೇದಿಕೆಯನ್ನು ಶ್ರೀ ಚಾಮುಂಡೇಶ್ವರಿ ಸೌಂಡ್ಸ್ ಅವರು ನಿರ್ಮಾಣ ಮಾಡಿದ್ದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು. ಸಂಸ್ಥೆಯ ಅಧ್ಯಕ್ಷರಾದ ಬಾಳೆಹಳ್ಳಿ ಪ್ರಭಾಕರ್ ಮಾತನಾಡಿ, ಮಲೆನಾಡಲ್ಲಿ ನಮ್ಮ ಸಂಸ್ಥೆ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಅತ್ಯಂತ ಮುತುವರ್ಜಿಯಿಂದ ನಿಮ್ಮ ಮಕ್ಕಳ ಭವಿಷ್ಯ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡುತ್ತೇವೆ. ಪ್ರತಿ ವರ್ಷ ಶೇ. 100ರ ಫಲಿತಾಂಶ ನೀಡಿದ್ದೇವೆ. ರಾಜ್ಯ ಮಟ್ಟದಲ್ಲಿ ರಾಂಕ್ ಪಡೆದಿದ್ದೇವೆ. ಸಹ್ಯಾದ್ರಿ ಶಾಲೆ, ಕಾಲೇಜು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದೆ. ಮಕ್ಕಳು ಮೊಬೈಲ್ ದೂರ ಇಟ್ಟು, ಶಿಕ್ಷಣ, ಸಂಸ್ಕಾರ ಕಲಿಸಬೇಕಿದೆ ಎಂದರು. ಅತಿಥಿಗಳಾಗಿ ಶಾಸಕ ಆರಗಜ್ಞಾನೇಂದ್ರ, ತಹಶೀಲ್ದಾರ್ ರಂಜಿತ್ ಎಸ್, ಹೊದಲ-ಅರಳಾಪುರ ಗ್ರಾ.ಪಂ.ಅಧ್ಯಕ್ಷೆ ಅನಿತಾ ಶ್ರೀಧರ್,, ಆಡಳಿತ ಅಧಿಕಾರಿ ಪ್ರಕಾಶ್, ಎಲ್ಲಾ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.
2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿ!
ಕುಶಾವತಿ ಸಹ್ಯಾದ್ರಿ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹ್ಯಾದ್ರಿ ಸಂಭ್ರಮ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದ್ದು, ಅಧ್ಯಕ್ಷತೆಯನ್ನು ಬಾಳೇಹಳ್ಳಿ ಪ್ರಭಾಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರ ನಾಯಕ ಮಂಜುನಾಥ ಗೌಡ, ಪ.ಪಂ.ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಬಿಇಓ ಗಣೇಶ್ ವೈ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ಪ್ರಿನ್ಸಿಪಾಲರಾದ ಗುರುರಾಜ್, ಅಗ್ನಿಸ್ ಮೆಂಡೋನ್ಸಾ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಮಾಡಿತು. ಮುಂದೆ ಈ ಕಾರ್ಯಕ್ರಮ ನಡೆಸಲು ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ತಿಳಿದು ಬಂದಿದೆ.