ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ: ಏನೇನ್ ಇರುತ್ತೆ?
– ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ವೈಭವದ ಕಾರ್ಯಕ್ರಮದ ವಿವರ
– 17 ಲಕ್ಷ ಬಜೆಟ್ ಅಲ್ಲಿ ನಡೆಯಲಿದೆ ಈ ಸಲದ ಜಾತ್ರೆ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಐತಿಹಾಸಿಕ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಎಳ್ಳಮಾವಾಸ್ಯೆ ಜಾತ್ರೆ ಹಿನ್ನೆಲೆ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ದೇವಸ್ಥಾನದ ರಥ ಬೀದಿಯಿಂದ ರಥೋತ್ಸವ ನಡೆಯಲಿದೆ. ಸುತ್ತುಮುತ್ತ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಅಯೋಜಿಸಲಾಗಿದೆ. ಹೆಚ್ಚು ಜನ ಸೇರುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 17 ಲಕ್ಷ ಬಜೆಟ್ ನಲ್ಲಿ ರಥೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ. ಎಳ್ಳಮಾವಾಸ್ಯೆ ಜಾತ್ರೆ ಬಗ್ಗೆ ತೀರ್ಥಹಳ್ಳಿ ಪಟ್ಟಣದ ಅನ್ನಪೂರ್ಣ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಸಮಸ್ತ ಭಕ್ತರು ಹಾಗೂ ತೀರ್ಥಹಳ್ಳಿ ಜನತೆಯ ಸಹಕಾರ ಕೋರಿದರು.
ಕಾರ್ಯಕ್ರಮ ಏನೇನು..?
ತೀರ್ಥಸ್ನಾನದ ಸಂಜೆ ಶಮಿತಾ ಮಲ್ನಾಡ್ ಅವರ ಹಾಡು ಹಾಗೂ ನೃತ್ಯ ಕಾರ್ಯಕ್ರಮ ಹಾಗೂ ಉದಯ್ ಶೆಟ್ಟಿ ಅವರ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ನಡೆಯಲಿದೆ ಎಂದು ತಿಳಿಸಿದರು.
ಎಲ್ಲಾ ಪಕ್ಷಗಳೂ ಸೇರಿ ಆಚರಣೆ
ಈ ಬಾರಿ ತೆಪ್ಪೋತ್ಸವ ಸಮಿತಿ ಬಿಜೆಪಿ ಮತ್ತು ಕಾಂಗ್ರೇಸ್ ಎರಡು ಪಕ್ಷ ಒಟ್ಟಿಗೆ ಸೇರಿ ಕಳೆದ ಬಾರಿಗಿಂತ ಅದ್ದೂರಿಯಾಗಿ ಆಚರಿಸಲು ತಯಾರಿ ನಡೆಯುತ್ತಿದೆ. ಎರಡು ಪಕ್ಷ ಸೇರಿ ನಡೆಸುವುದರಿಂದ ಈ ಭಾರಿಯ ಜಾತ್ರೆ ಬಿಕಾಂ ಜಾತ್ರೆ ಆಗಿದೆ ಎಂದು ಡಾ. ಸುಂದರೇಶ್ ಅವರು ಹೇಳಿದರು.
ಉತ್ಸವಗಳ ವಿವರ ಹೇಗಿದೆ?
ಡಿ. 28 ನೇ ಶನಿವಾರ ಶ್ರೀ ಗಣಪತಿ ಪೂಜಾಪೂರ್ವಕ ಪುಣ್ಯಾಹ, ಶತರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಾಯಂಕಾಲ ರಂಗಪೂಜೆ, ಅಂಕುರಾರೋಪಣ, ಭೇರಿತಾಡನ, ಕೌತುಕ ಬಂಧನ, ಬಲಿ ಉತ್ಸವಗಳು ಹಾಗೂ ರಂಗ ಪೂಜೆ ಸೇವೆ. ಡಿ.29ನೇ ಭಾನುವಾರ ಅಗ್ನಿಜನನ, ಅಧಿವಾಸ ಹೋಮ, ಮಹಾಪೂಜೆ, ಬಲಿ, ಸಂಜೆ ಘಂಟೆ 4-00 ಕ್ಕೆ : ಪುರೋತ್ಸವ, ನಂತರ ರಂಗಪೂಜೆ, ಬಲಿ, ಪೂಜಾದ್ಭುತ್ಸವಗಳು, ರಂಗ ಪೂಜೆ.
ಡಿ. 30ನೇ ಸೋಮವಾರ ಶ್ರೀ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ
ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ, ಉತ್ಸವ, ಸಂಜೆ :ರಂಗ ಪೂಜೆ ರಾತ್ರಿ : ಬಲಿ, ಉತ್ಸವ, ರಂಗ ಪೂಜೆ ಸೇವೆ.
ಡಿ.31ನೇ ಮಂಗಳವಾರ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪ, ಉತ್ತವಬಲಿ.
ಶ್ರೀ ಮನ್ಮಹಾರಥಾರೋಹಣ” ರಾತ್ರಿ : ಭೂತ ಬಲಿ, ಶಯನೋತ್ಸವ.
ಜನವರಿ 01ನೇ ಬುಧವಾರ ಪ್ರಭೋದೋತ್ಸವ, ಚೂರ್ಣೋತ್ಸವ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಬಲಿ, ಅವಕೃತಸ್ನಾನ,
ಸಾಯಂಕಾಲ : ಉತ್ಸವ, ರಾತ್ರಿ 7-00 ಕ್ಕೆ ಸಾರ್ವಜನಿಕರಿಂದ”ತೆಪ್ಪೋತ್ಸವ” ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ.
ಜನವರಿ 02ನೇ ಗುರುವಾರ ಬೆಳಿಗ್ಗೆ: ಸಂಪ್ರೋಕ್ಷಣೆ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ.
ಸಂಜೆ : ಶಂಗ ಪೂಜೆ, ದೀಪೋತ್ಸವ ಜನವರಿ 14ನೇ ಮಂಗಳವಾರದಂದು ಅಭಿಜಿನ್ಮುಹೂರ್ತದಲ್ಲಿ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ.