ಮಲೆನಾಡಿನಲ್ಲಿ ಆನೆಗಳ ಅಟ್ಟಹಾಸ
– ತೀರ್ಥಹಳ್ಳಿ: ಕಾಡಾನೆಗಳ ದಾಳಿ: ಬೆಳೆ ಸಂಪೂರ್ಣ ನಾಶ!
– ಇನ್ನೂ ಎಚ್ಛೆತ್ತುಕೊಳ್ಳದ ಅಧಿಕಾರಿಗಳು
– ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆಗೆ ಮುಂದಾಗಿರುವ ಜನ!
– ಕುಂಸಿ: ಕಡಿಮೆಯಾಗದ ಕಾಡಾನೆ ಸದ್ದು, ಎಲ್ಲೆಡೆ ಭಯದ ವಾತಾವರಣ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹುತ್ತಳ್ಳಿ, ಆಲೂರು, ಜೋಗಿಮಠ ಗ್ರಾಮಗಳಲ್ಲಿ 5 ಕಾಡಾನೆ ಗಳ ಹಾವಳಿ ಕಂಡುಬಂದಿದ್ದು, ಗ್ರಾಮದಲ್ಲಿ ಭತ್ತದ ಗದ್ದೆ, ಅಡಕೆ ತೋಟ, ತೆಂಗು, ಬಾಳೆ ಎಂಬ ಹತ್ತಾರು ಎಕರೆಗಳ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿವೆ.
ಕಾಡಾನೆ ಗಳ ಆರ್ಭಟಕ್ಕೆ ಜನರು ಕಂಗಾಲಾಗಿದ್ದು, ಜನರು ಆನೆಗಳನ್ನ ಓಡಿಸಲು ಸಿಡಿ ಮದ್ದು ಪ್ರದರ್ಶನ ಮಾಡಿ ದಿಕ್ಕು ಬದಲಿಸುವ ಕಾರ್ಯವನ್ನು ಅನುಸರಿಸುತ್ತಿದ್ದಾರೆ. ಜನರಿಗೆ ದಾರಿಯಲ್ಲಿ ಓಡಾಡಲು ಭಯ ಪಡುವ ಸನ್ನಿವೇಶ ಒದಗಿದೆ. ರಾತ್ರಿ ಇಡೀ ಬೊಗಳುವ ಮಲೆನಾಡಿನ ಶ್ವಾನಗಳು, ಆನೆಗಳ ಗಾತ್ರ ಅದರ ಗೀಳಿಡುವ ಶಬ್ದಕ್ಕೆ ಹೆದರಿ ಇಡೀ ಊರೇ ನಿಶಬ್ದವಾಗಿವೆ.ಅರಣ್ಯ ಅಧಿಕಾರಿ ಸಿಬ್ಬಂದಿಗಳೇ ಆನೆಗಳನ್ನು ತಂದು ಬಿಟ್ಟಿದ್ದಾರೆ ಎಂದು ಗ್ರಾಮಸ್ಥರ ಮಧ್ಯೆ ಗೊಂದಲದ ಚರ್ಚೆ ನಡೆಯುತ್ತಿದೆ. ಆನೆಗಳ ಹಾವಳಿ ಕಡಿಮೆ ಆಗದೆ ಇದ್ದಲ್ಲಿ ಅರಣ್ಯ ಇಲಾಖೆಯ ಮುಂದೆ ಜನರು ಪ್ರತಿಭಟನೆಗೂ ಸಿದ್ದ ಎಂದು ತಿಳಿಸುತ್ತಿದ್ದಾರೆ. ಹತ್ತಾರು ಎಕರೆ ಬೆಳೆ ನಾಶವಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಅತ್ತ ಕಡೆ ತಿರುಗಿಯೂ ನೋಡಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಈ ಕಾಡಾನೆಯ ದಾಂಧಲೆಗೆ ಅರಣ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.
* ಕುಂಸಿ: ಕಾಡಾನೆಗಳ ದಾಳಿ: ಬೆಳೆ ಸಂಪೂರ್ಣ
ಕುಂಸಿ ಸಮೀಪದ ತುತ್ತೂರಿನಲ್ಲಿ ರೈತರ ಜಮೀನುಗಳಿಗೆ ಡಿ. 25ರಂದು ದಾಳಿ ನಡೆಸಿರುವ ಕಾಡಾನೆಗಳು ಕಬ್ಬು, ಭತ್ತ, ಬಾಳೆ ಹಾಗೂ ಅಡಿಕೆ ಬೆಳೆಗಳನ್ನು ನಾಶಪಡಿಸಿವೆ. ಎರಡು ವ್ಯಾಪ್ತಿಯಿಂದ ಆನೆಗಳು ಅರಸಾಳು ಆನಂದಪುರ ವಲಯದ ಕಾಡಿಗೆ ಬಂದ ಮಾಹಿತಿ ಇದೆ. ತುಪ್ಪೂರು, ಗಡಿಕಲ್ಲು, ಆನೆಸರ, ಪತ್ರೆಹೊಂಡದ ಸುತ್ತ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಆದರೆ ಆನೆಗಳು ಕಂಡಿಲ್ಲ. ತಡರಾತ್ರಿ ತುಪ್ಪೂರು ಭಾಗದ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿ ಆನೆಗಳು ಹೊರಬೈಲು ಊರಿನ ಬಳಿ ಇರುವ ಕಾಡಿನಲ್ಲಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರ ಆನೆಗಳನ್ನು ಓಡಿಸಲು ಕಾರ್ಯಾಚರಣೆ ಕೈಗೊಳ್ಳ-ಲಾಗುವುದು’ ಎಂದು ಆನಂದಪುರ ವಲಯ ಅರಣ್ಯಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.