ತೀರ್ಥಹಳ್ಳಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಎಚ್ಚರಿಕೆ!
– ರೈತರು ಸ್ವಾಧೀನಾನುಭವ ಹೊಂದಿದ ಜಮೀನನ್ನು ಸ್ಥಳೀಯ ಮಠಕ್ಕೆ ನೀಡಲು ಹುನ್ನಾರ
– ಹೋರಾಟಕ್ಕೆ ಸಿದ್ಧವಾದ ರೈತ ಸಂಘ
NAMMUREXPRESS NEWS
ತೀರ್ಥಹಳ್ಳಿ: ‘ಕಂದಾಯ ಇಲಾಖೆ ಗೊಂದಲದ ಗೂಡಾಗಿದೆ. ಗೇಣಿ ಹಕ್ಕು ಕಾಯ್ದೆಯಡಿ ರೈತರು ಸ್ವಾಧೀನಾನುಭವ ಹೊಂದಿದ ಜಮೀನನ್ನು ಸ್ಥಳೀಯ ಮಠಕ್ಕೆ ನೀಡಲು ಸಜ್ಜಾಗಿದೆ. ತಹಶೀಲ್ದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇವೆ’ ಎಂದು ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ ಹೇಳಿದ್ದಾರೆ. ಈ ಬಗ್ಗೆ ವಾರದೊಳಗೆ ವಸ್ತುಸ್ಥಿತಿ ವರದಿ ಸಲ್ಲಿಸದಿದ್ದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದ್ದಾರೆ. ಇಲಾಖೆಯ ಒಳಗೆ ಮಠದ ಪರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರೂ 15 ದಿನಗಳಿಂದ ಯಾವುದೇ ಕ್ರಮ ಕೈಗೊ೦ಡಿಲ್ಲ.ಆಲಗೇರಿ ಗ್ರಾಮದ ರೈತರ ಮನೆಯನ್ನು ಮಠದ ಪ್ರತಿನಿಧಿ ತಮ್ಮದೆಂದು ಹೇಳುತ್ತಿದ್ದರೂ ಸರ್ಕಾರಕ್ಕೆ ವಾಸ್ತವದ ಕಂಬಳಿಗೆರೆ ರಾಜೇಂದ್ರ ವರದಿ ಸಲ್ಲಿಸಿಲ್ಲ. 1954ರಲ್ಲಿ ಇನಾಂ ಕಾಯ್ದೆ ಅಡಿಯಲ್ಲಿ ಮಠದ ಜಮೀನು ರೈತರದ್ದು ಎಂದು ಬಂಧ ವಿಮೋಚನೆ ಮಾಡಿ ಮಾಲೀಕತ್ವ ನೀಡಲಾಗಿದೆ. ಜೊತೆಗೆ ಭೂ ಸುಧಾರಣೆ ಕಾಯ್ದೆಯಡಿ 1974ರಲ್ಲಿ ಎಲ್ಲಾ ಭೂಮಿಗಳು ಸರ್ಕಾರದಿಂದ ಮರು ಹಂಚಿಕೆಯಾಗಿವೆ. ಆದರೆ 2019ರ ಭೂ ಹಿಡುವಳಿ ನೀತಿ ಅನ್ವಯ ಪುನಃ ಹಿಂದಿನ ಭೂಮಿ ಪಡೆಯಲು ಸಂಚು ರೂಪಿಸಲಾಗಿದೆ. ಹಿಂದಿನ ಎಲ್ಲಾ ಸರ್ವೆಯನ್ನು ಧಿಕ್ಕರಿಸಿ ರೈತರ ಸ್ವಾಧೀನದ ಭೂಮಿಯ ನಕ್ಷೆಯನ್ನು ತಿದ್ದಿ ನ್ಯಾಯಾಲಯಕ್ಕೆ ಅಧಿಕಾರಿಗಳು ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು. 1,087 ಎಕರೆ ಹೆಗ್ಗಾರುಘಟ್ಟ ಭೂಮಿಯ ಹಕ್ಕಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ 1997ರಲ್ಲಿ ಅಂದಿನ ಜಿಲ್ಲಾಧಿಕಾರಿಯ ವರದಿ ಕೇಳಿದ್ದಾರೆ. ಇಂದಿಗೂ ವರದಿಗಳು ಸಲ್ಲಿಕೆಯಾಗಿಲ್ಲ. ಸರ್ಕಾರದ ಪರವಾಗಿ ವಾದ ಮಂಡಿಸುವ ಅಡ್ವಕೇಟ್ ಜನರಲ್, ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಕೆಲಸ ಏನು’ ಎಂದು ಪ್ರಶ್ನಿಸಿದರು. ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಪ್ರಮುಖರಾದ ಕೊಲ್ಲಪ್ಪ, ದಬ್ಬಣಗದ್ದೆ ಜಯರಾಮ, ಜಾನ್ ಪಿ.ಜೆ. ಇದ್ದರು