ತೀರ್ಥಹಳ್ಳಿ ಟಾಪ್ 3 ನ್ಯೂಸ್
– ಮಹಾಕುಂಭ ಮೇಳದಲ್ಲಿ ತೀರ್ಥಹಳ್ಳಿಯ ಸತೀಶ್ ಶೆಟ್ಟಿ
– ತೀರ್ಥಹಳ್ಳಿಯಿಂದ 500ಕ್ಕೂ ಅಧಿಕ ಮಂದಿಯ ತಂಡ ಕುಂಭ ಮೇಳಕ್ಕೆ
– ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಫೆ.8ರಂದು ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ
– ತೀರ್ಥಹಳ್ಳಿ : ಅಂಬಳಿಕೆ ಗಿರೀಶ್ ಅವರ ತಾಯಿ ಸೋಮವಾರ ವಿಧಿವಶ…!
NAMMUR EXPRESS NEWS
ತೀರ್ಥಹಳ್ಳಿ: ತಮ್ಮ ಜೀವನೋತ್ಸಾಹದ ಚಟುವಟಿಕೆಗಳಿಂದ ಚಿರಪರಿಚಿತರಾದ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರೂ, ಸೈಕ್ಲಿಂಗ್, ಟ್ರಕ್ಕಿಂಗ್, ಸ್ವಿಮ್ಮಿಂಗ್ ಪಟುಗಳೂ ಆದ ಸತೀಶ್ ಶೆಟ್ಟಿ ಅವರು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜ.13 ರಿಂದ ಫೆ.26ರವರೆಗೆ ನಡೆಯುತ್ತಿರುವ ಈ ಶತಮಾನದ ಮಹಾನ್ ಧಾರ್ಮಿಕ ಕಾರ್ಯಕ್ರಮ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಯ ನೂರಾರು ಆಸ್ತಿಕರು, ಯುವಕರು, ಕುಂಭ ಮೇಳದ ಅನುಭವ ಅಗಾಧತೆಯನ್ನು ಸಾಕ್ಷೀಕರಿಸಲು ಆಸಕ್ತರಾದವರು ಪ್ರಯಾಗ್ರಾಜ್ಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದೇ ತಿಂಗಳಲ್ಲಿ ಬಿಜೆಪಿ ಯುವ ಮುಖಂಡ ಕೌನ್ಸಿಲರ್ ಬಾಳೇಬೈಲು ರವೀಶ್ ನೇತೃತ್ವದಲ್ಲಿ ಒಂದು ತಂಡ ಪ್ರಯಾಗ್ ರಾಜ್ಗೆ ತೆರಳುತ್ತಿದೆ.
– ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಫೆ.8ರಂದು ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ
ತೀರ್ಥಹಳ್ಳಿ : ಇಲ್ಲಿನ ಗಾನಾಂಜಲಿ ಕೋಣಂದೂರು, ತೀರ್ಥಹಳ್ಳಿ ಇವರ ಪ್ರಸ್ತುತಿಯಲ್ಲಿ ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ಸೇವಾ ಟ್ರಸ್ಟ್ ಕೋಣಂದೂರು, ಸರ್ಜಾ ಚೆಸ್ ತರಬೇತಿ ಕೇಂದ್ರ ಹಿರೇಸರ, ಶ್ರೀ ಲಕ್ಷ್ಮೀ ಕನ್ಸ್ಟ್ರಕ್ಷನ್ ಕೋಣಂದೂರು ಸಹಯೋಗದಲ್ಲಿ ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಕೋಗಿಲೆ ಸೀಸನ್ ಒಂದರ ಅಂತಿಮ ಹಂತದ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ ಇದೇ ಬರುವ ಫೆಬ್ರವರಿ 8ರ ಶನಿವಾರ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ 6 ರಿಂದ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಮಲೆನಾಡಿನ ಮತ್ತು ಕರಾವಳಿಯ ಪ್ರತಿಭಾವಂತ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ, ಆಕರ್ಷಕ ಟ್ರೋಫಿ ನೀಡಲಿದ್ದು, ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಕಾರ್ಯಕ್ರಮ ಸಂಯೋಜಕರೂ, ಗಾಯಕರಾದ ಕೆ.ಜಿ.ಶಶಿಕುಮಾರ ಕಾರಂತ ಮತ್ತು ಕಾರ್ಯಕ್ರಮದ ಸಂಘಟಕರು ವಿನಂತಿಸಿದ್ದಾರೆ.
– ತೀರ್ಥಹಳ್ಳಿ : ಅಂಬಳಿಕೆ ಗಿರೀಶ್ ಅವರ ತಾಯಿ ಸೋಮವಾರ ವಿಧಿವಶ…!
ತೀರ್ಥಹಳ್ಳಿ : ತಾಲೂಕಿನ ನೆರಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಬ್ಬಿ ಗ್ರಾಮದ ಅಂಬಳಿಕೆ ವಾಸಿಯಾಗಿರುವ ಅಂಬಳಿಕೆ ಗಿರೀಶ್ ರವರ ತಾಯಿ ವನಜಾಕ್ಷಿ 73ವರ್ಷದವರು ಅನಾರೋಗ್ಯ ಕಾರಣದಿಂದಾಗಿ ಸೋಮವಾರ ವಿಧಿವಶರಾಗಿದ್ದಾರೆಂದು ತಿಳಿದುಬಂದಿದೆ. ಮೃತರು ಇಬ್ಬರು ಪುತ್ರರು ಅಂಬಳಿಕೆ ಗಿರೀಶ್ ಮತ್ತು ಹರೀಶ್ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಬೊಬ್ಬಿ ಅಂಬಳಿಕೆಯ ಮೃತರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು ಹಾಗೂ ಅಂತ್ಯಕ್ರಿಯೆಯನ್ನು ಕೂಡ ನಡೆಸಲಾಗಿದೆ.