ಜಿಂಕೆ ಶಿಕಾರಿ ಇಬ್ಬರು ಅರೆಸ್ಟ್: ಕೊಪ್ಪದಲ್ಲಿ ಚಿರತೆ!
– ತೀರ್ಥಹಳ್ಳಿಯ ಮಂಡಗದ್ದೆಯಲ್ಲಿ ಜಿಂಕೆ ಶಿಕಾರಿ
– ಕೊಪ್ಪದ ಹುಲ್ಲುಮಕ್ಕಿ ಬಳಿ ಚಿರತೆ ಪ್ರತ್ಯಕ್ಷ
NAMMUR EXPRESS NEWS
ತೀರ್ಥಹಳ್ಳಿ: ( Thirthahalli )ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ವ್ಯಾಪ್ತಿಯಲ್ಲಿ ಜಿಂಕೆ ಶಿಕಾರಿ ಮಾಡಿ ಪಾಲು ಮಾಡಿಕೊಳ್ಳುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಇಬ್ಬರ ಸೆರೆ ಹಿಡಿದಿದ್ದಾರೆ. ಸಿಂಗನಬಿದಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳ್ಳುಂಡೆ ಗ್ರಾಮದ ಶೇಡ್ ನಲ್ಲಿ ಅಕ್ರಮವಾಗಿ ಜಿಂಕೆಯನ್ನು ಶಿಕಾರಿ ಮಾಡಿ ಮಾಂಸಕ್ಕಾಗಿ ಕಡಿಯುತ್ತಿರುವ ಸಂದರ್ಭದಲ್ಲಿ ಮಂಡಗದ್ದೆ ವಲಯ ಅಧಿಕಾರಿ ಆದರ್ಶ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿರುವ ಘಟನೆ ಮಂಗಳವಾರ ರಾತ್ರಿ ನೆಡೆದಿದೆ. ದಾಳಿ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಜಿಂಕೆ ಮಾಂಸ ಮತ್ತು ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ .
ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮತ್ತು ಆರ್ ಎಫ್ ಒ ಆದರ್ಶ ಇವರುಗಳ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸುಹಾಸ್, ಗಸ್ತು ಅರಣ್ಯ ಪಾಲಕರದ ದುರ್ಗಪ್ಪ ಡಿ, ಸಂತೋಷ್ ಕುಮಾರ್ ಮತ್ತು ವಲಯದ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೊಪ್ಪದಲ್ಲಿ ಚಿರತೆ ಪ್ರತ್ಯಕ್ಷ
( Koppa ) ಕೊಪ್ಪ ಪಟ್ಟಣ ಹೊರವಲಯದ ಹುಲ್ಲುಮಕ್ಕಿಯಲ್ಲಿ ಮನೆಯೊಂದರ ಹಿಂದಿನ ಅಂಗಳದಲ್ಲಿ ಇತ್ತೀಚಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿದೆ. ಹುಲ್ಲುಮಕ್ಕಿ ನಿವಾಸಿ ನಟರಾಜ್ ಗೋಗಟೆ ಎಂಬುವವರ ಮನೆಯಂಗಳದಲ್ಲಿ ರಾತ್ರಿ 9.30ಕ್ಕೆ ಚಿರತೆ ಪ್ರತ್ಯಕ್ಷವಾಗಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ. ನಾಯಿಗಳ ಕೂಗಾಟದಿಂದ ಹೆದರಿದ ಚಿರತೆ ಪರಾರಿಯಾಗಿದೆ. ನಟರಾಜ್ ಮನೆಯಲ್ಲಿರಲಿಲ್ಲ. ಅವರ ಪತ್ನಿ, ತಾಯಿ ಮತ್ತು ಇಬ್ಬರು ಮಕ್ಕಳು ನಾಯಿಗಳ ಕೂಗಾಟದಿಂದ ಮನೆಯಿಂದ ಹೊರಕ್ಕೆ ದೀಪ ಬೆಳೆಗಿಸಿದಾಕ್ಷಣ ಚಿರತೆ ತಡೆಗೋಡೆಯ ಹೊರಗೆ ಹಾರಿ ಅವಿತು ಕುಳಿತಿತ್ತು. ನಾಯಿಗಳು ಮತ್ತೊಮ್ಮೆ ಬೆದರಿಸಿದ್ದು, ನಂತರ ಹಿಂಭಾಗದ ಕಾಡಿಗೆ ಪರಾರಿಯಾಗಿದೆ. ಸಮೀಪದ ಸೋಮಲಾಪುರದ ಬಳಿ ಚಿರತೆ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023