ತೀರ್ಥಹಳ್ಳಿ ತಾಲೂಕಲ್ಲಿ ವರುಣನ ಆರ್ಭಟ: ಜನರ ಸಂಕಟ!
– ಮಲೆನಾಡಲ್ಲಿ ಅಡಿಕೆ ಕೃಷಿ ಸೇರಿ ಅನೇಕರಿಗೆ ತೊಂದರೆ
– ತೀರ್ಥಹಳ್ಳಿ ಗಡಿ ಅಲಸೆ ಬಳಿ ಕೊಚ್ಚಿ ಹೋದ ರಸ್ತೆ, ಸೇತುವೆ
– ತೀರ್ಥಹಳ್ಳಿ – ಕುಂದಾಪುರ ಹೈವೇಯಲ್ಲಿ ಹೊಂಡ ಗುಂಡಿ..!
NAMMUR EXPRESS NEWS
ತೀರ್ಥಹಳ್ಳಿ: ಮಳೆಗಾಲ ಮುಗಿದರೂ ಇನ್ನು ಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೃಷಿ ಚಟುವಟಿಕೆಗಳನ್ನು ಸರಿಯಾದ ಸಮಯಕ್ಕೆ ನಡೆಸಲು ಸಾಧ್ಯವಾಗುತ್ತಿಲ್ಲ ಜೊತೆಗೆ ಮಲೆನಾಡಲ್ಲಿ ಅಡಿಕೆ ಕೊಯ್ಲಿಗೆ ಬಂದಿರುವುದರಿಂದ ಅಡಿಕೆ ಕೊಯ್ಲು ಮಾಡಲು ಜನ ಸಂಕಷ್ಟಪಡುತ್ತಿದ್ದಾರೆ. ಅಡಿಕೆ ಕೊಳೆ ರೋಗಕ್ಕೆ ತುತ್ತಾಗಿದೆ. ಬಿಸಿಲು ಕಾಣದೆ ಜನ ಕೃಷಿ ಚಟುವಟಿಕೆಯನ್ನು ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಅಲಸೆ ಬಳಿ ಕೊಚ್ಚಿ ಹೋದ ರಸ್ತೆ, ಸೇತುವೆ!
ತೀರ್ಥಹಳ್ಳಿ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಗಡಿ ಪ್ರದೇಶ ಅಲಸೆ ಹಾಗು ದೋಬೈಲು(ಬುಕ್ಕಿವರೆ) ಮಾರ್ಗವಾಗಿ ಸಂಚರಿಸುವ ರಸ್ತೆ ,ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಈ ಭಾಗದಲ್ಲಿ ಜನರಿಗೆ ಭಾರೀ ತೊಂದರೆಯಾಗಿದೆ.
ದಸರಾ ಸಮಯದಲ್ಲಿ ಅಲಸೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಾಗು ಸ್ಥಳೀಯ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು ಸಂಬಂಧ ಪಟ್ಟ ಇಲಾಖೆಯವರು ಬೇಗ ಗಮನಹರಿಸಲು ಸ್ಥಳೀಯರು ಮನವಿ ಮಾಡಿದ್ದಾರೆ.
ತೀರ್ಥಹಳ್ಳಿಯಿಂದ ಕುಂದಾಪುರ ರಾಜ್ಯ ಹೆದ್ದಾರಿ ಗುಂಡಿ ಮಯ!
ತೀರ್ಥಹಳ್ಳಿಯಿಂದ ಕುಂದಾಪುರ ರಾಜ್ಯ ಹೆದ್ದಾರಿಯ ಕೈಮರ, ಎಂ.ಕೆ. ಬೈಲು, ಸುಣ್ಣದ ಮನೆ ಸೇರಿದಂತೆ ಹೆದ್ದಾರಿಯ ಉದ್ದಕ್ಕೂ ರಸ್ತೆಯಲ್ಲಿ ಹೊಂಡ ಗುಂಡಿಗಳಿಂದ ಕೂಡಿದ್ದು ನಿತ್ಯ ಬಸ್ ಲಾರಿ ಟ್ರಕ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು ಸವಾರರು ಹರಸಾಹಸ ಪಡುವಂತಾಗಿದೆ. ರಸ್ತೆ ಅವ್ಯವಸ್ಥೆಯಿಂದ ಪ್ರತೀ ದಿನ ಒಂದಲ್ಲ ಒಂದು ಅಪಘಾತ ನಡೆಯುತ್ತಿದೆ. ಮಳೆ ಹೆಚ್ಚಾಗಿ ಹೊಂಡ ಗುಂಡಿಯದ್ರೂ ಈ ಬಗ್ಗೆ ಶಾಸಕರು, ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನ ವಹಿಸಿಲ್ಲ.