ತೀರ್ಥಹಳ್ಳಿಯಲ್ಲಿ ವಿಶ್ವ ಏಡ್ಸ್ ದಿನ: ಜಾಗೃತಿ ಜಾಥಾ..!
* ಸಾಮಾಜಿಕ ಜಾಲತಾಣಗಳ ಜಾಲಕ್ಕೆ ಬಲಿಯಾಗದಂತೆ ಎಚ್ಚರ
* ಸೋಂಕಿನ ನಿಯಂತ್ರಣಕ್ಕೆ ಜನಜಾಗೃತಿ ಕೈಜೋಡಿಸುವುದು ಅಗತ್ಯ
NAMMUR EXPRESS NEWS
ತೀರ್ಥಹಳ್ಳಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ತಾಲೂಕು ಕಾನೂನು ಸೇವಾ ಸಮಿತಿ, ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ತೀರ್ಥಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ & ರೆಡ್ ರಿಬ್ಬನ್ ಘಟಕ,ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿ. 4ರಂದು ವಿಶ್ವ ಏಡ್ಸ್ ದಿನ – 2024 ಕಾರ್ಯಕ್ರಮ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ನಡೆದ ವಿಶ್ವ ಏಡ್ಸ್ ಜನಜಾಗೃತಿ ಜಾಥಾ ನಡೆಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಎನ್ ಎಸ್ ಎಸ್ ಘಟಕದ ನೇತ್ರತ್ವದೊಂದಿಗೆ ಹೊರಟ ಜಾಥಾ ಜೆ ಸಿ ಆಸ್ಪತ್ರೆಯಿಂದ ಹೊರಟು ಪಟ್ಟಣದ ಬೀದಿ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಕರಪತ್ರ ಹಂಚುತ್ತಾ ಆಗುಂಬೆ ಬಸ್ ಸ್ಟ್ಯಾಂಡ್ ತಲುಪಿ ಅಲ್ಲಿಂದ ಹೊರಟು ಜೆ ಸಿ ಆಸ್ಪತ್ರೆಯಲ್ಲಿ ಮುಕ್ತಾಯಗೊಂಡಿತು.
* ಸಾಮಾಜಿಕ ಜಾಲತಾಣಗಳ ಜಾಲಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದು ಕರ್ತವ್ಯ!
ಯುವಜನತೆ ಹೆಚ್ ಐ ವಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದು ಉತ್ತಮ ಮೌಲ್ಯಗಳು ಮತ್ತು ನಡವಳಿಕೆಗಳನ್ನು ಯುವ ಜನತೆ ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಗೌರವಾನ್ವಿತ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಹಾಗೂ ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ತೀರ್ಥಹಳ್ಳಿಯ ನ್ಯಾ.ಗೀತಾಮಣಿ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಇರುವ ಯಾವುದೇ ಜಾಲಕ್ಕೆ ಬಲಿಯಾಗದಂತೆ ನಿಯಂತ್ರಣದೊಂದಿಗೆ ಜವಾಬ್ದಾರಿಯುತವಾಗಿ ಜಾಲತಾಣವನ್ನು ನಿರ್ವಹಿಸಬೇಕು ಎಂದು ಮಾಹಿತಿ ನೀಡಿದರು.
ಸೋಂಕಿನ ನಿಯಂತ್ರಣಕ್ಕೆ ಜನಜಾಗೃತಿ ಕೈಜೋಡಿಸುವುದು ಅಗತ್ಯ!
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ತೀರ್ಥಹಳ್ಳಿ ಕವಿತಾ ಹೆಚ್. ಡಿ ಇವರು ಮಾತನಾಡಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಸಂಸ್ಕರಿಸದೆ ಬಳಸುವ ಸೂಜಿ ಸಿರಿಂಜ್ ನಿಂದ, ಸೋಂಕಿತ ವ್ಯಕ್ತಿಯ ರಕ್ತ ಪಡೆಯುವುದರಿಂದ ಮತ್ತು ಸೋಂಕಿತ ತಾಯಿಯಿಂದ ಮಗುವಿಗೆ ಎಚ್ ಐವಿ ಹರಡುವ ಸಾಧ್ಯತೆಯಿದೆ. ಈ ಚಿಕಿತ್ಸೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ವಕೀಲರ ಸಂಘದ ಅಧ್ಯಕ್ಷರಾದ ಎಂ ಎನ್ ರಮೇಶ್ ಮಾತನಾಡಿ ಎಚ್ಐವಿ ಸೋಂಕು ಗಾಳಿ ನೀರು ಆಹಾರದಿಂದ ಹರಡುವುದಿಲ್ಲ ಎಲ್ಲರೂ ಎಚ್ಐವಿ ಸೋಂಕಿನ ಬಗ್ಗೆ ಅರಿವು ಹೊಂದಬೇಕು ಈ ದಿಸೆಯಲ್ಲಿ ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಂಡು ಸೋಂಕಿನ ನಿಯಂತ್ರಣಕ್ಕೆ ಜನಜಾಗೃತಿ ಕೈಜೋಡಿಸಬೇಕು ಎಂದರು ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಕೆ ವಿ ಆದರ್ಶ್, ಖಜಾಂಚಿಗಳಾದ ಯು ಟಿ ಹರೀಶ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಅನಿಕೇತನ, ಬಿಎಚ್ಇಓ ಜಯಶ್ರೀ, ಎನ್ಎಸ್ಎಸ್ ಅಧಿಕಾರಿ ಮೊಹಮ್ಮದ್ ಇಕ್ರಾಲ್, ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿಗಳಾದ ರಮೇಶ್ ತೀರ್ಥಹಳ್ಳಿ, ಪೊಲೀಸ್ ಠಾಣೆ ಎಎಸ್ಐ ಮೀನಾಕ್ಷಿ, ಆಪ್ತ ಸಮಾಲೋಚಕ ಪ್ರಭಾಕರ್ ಪೂಜಾರಿ, ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಜೆಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಗಣೇಶ್ ಭಟ್,ಜಾಥ ದಲ್ಲಿ ಜೆಸಿ ಆಸ್ಪತ್ರೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.